AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಲಿವುಡ್​​ನಲ್ಲಿ ಹೆಚ್ಚುತ್ತಿದೆ ಆಶಿಕಾ ಬೇಡಿಕೆ; ಸಾಲು ಸಾಲು ಸಿನಿಮಾದಲ್ಲಿ ಕನ್ನಡತಿ ಬ್ಯುಸಿ

ಸ್ಯಾಂಡಲ್‌ವುಡ್‌ನಲ್ಲಿ 'ಚುಟು ಚುಟು' ಹಾಡಿನ ಮೂಲಕ ಮನೆಮಾತಾದ ನಟಿ ಆಶಿಕಾ ರಂಗನಾಥ್, ಸದ್ಯ ಪರಭಾಷೆಯಲ್ಲೂ ಬ್ಯುಸಿಯಾಗಿದ್ದಾರೆ. 'ಮದಗಜ' ಚಿತ್ರದ ನಟನೆಗೆ ಸೈಮಾ ಪ್ರಶಸ್ತಿ ಪಡೆದಿರುವ ಆಶಿಕಾ, ಈಗ ತೆಲುಗಿನಲ್ಲಿ ನಾಗಾರ್ಜುನ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅವರ 'ವಿಶ್ವಂಭರ' ಸಿನಿಮಾದಲ್ಲಿ ನಟಿಸುತ್ತಾ ಸೌತ್ ಸಿನಿರಂಗದಲ್ಲಿ ಮಿಂಚುತ್ತಿದ್ದಾರೆ.

ಟಾಲಿವುಡ್​​ನಲ್ಲಿ ಹೆಚ್ಚುತ್ತಿದೆ ಆಶಿಕಾ ಬೇಡಿಕೆ; ಸಾಲು ಸಾಲು ಸಿನಿಮಾದಲ್ಲಿ ಕನ್ನಡತಿ ಬ್ಯುಸಿ
ಆಶಿಕಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 12, 2026 | 11:29 AM

Share

ಮುಖ್ಯಾಂಶಗಳು

  • ಕ್ರೇಜಿ ಬಾಯ್​ನಿಂದ ಆರಂಭವಾದ ಪಯಣ
  • ಸ್ಯಾಂಡಲ್‌ವುಡ್‌ನ ಲಕ್ಕಿ ಗರ್ಲ್ ಆಶಿಕಾ
  • 'ಚುಟು ಚುಟು' ಗಿಮಿಕ್ ಟು ಸೈಮಾ ಅವಾರ್ಡ್

ಚಿತ್ರರಂಗದಲ್ಲಿ ಕೇವಲ ಸೌಂದರ್ಯದಿಂದಷ್ಟೇ ಅಲ್ಲದೆ, ತಮ್ಮ ನಟನಾ ಸಾಮರ್ಥ್ಯದಿಂದಲೂ ಗುರುತಿಸಿಕೊಳ್ಳುವುದು ಸುಲಭವಲ್ಲ. ಸತತವಾಗಿ ಸಾಲು ಸಾಲು ಸಿನಿಮಾಗಳನ್ನು ಮಾಡುವುದಕ್ಕಿಂತ, ನೆನಪಿನಲ್ಲಿ ಉಳಿಯುವಂತಹ ಪ್ರಮುಖ ಪಾತ್ರಗಳನ್ನು ಮಾಡುವುದು ಮುಖ್ಯ ಎಂಬ ನಿಲುವು ತಳೆದವರು ನಟಿ ಆಶಿಕಾ ರಂಗನಾಥ್. ಆಶಿಕಾ ಈಗ ಪರಭಾಷೆಯಲ್ಲಿ ಬ್ಯುಸಿ ಆಗಿದ್ದಾರೆ.

ಆಗಸ್ಟ್ 5, 1996ರಂದು ತುಮಕೂರಿನಲ್ಲಿ ರಂಗನಾಥ್ ಮತ್ತು ಸುಧಾ ದಂಪತಿಗೆ ಜನಿಸಿದ ಆಶಿಕಾ, ಸಣ್ಣ ವಯಸ್ಸಿನಲ್ಲೇ ನೃತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಫ್ರೀಸ್ಟೈಲ್, ಬೆಲ್ಲಿ ಹಾಗೂ ವೆಸ್ಟರ್ನ್ ಡ್ಯಾನ್ಸ್‌ನಲ್ಲಿ ಪರಿಣತಿ ಪಡೆದಿರುವ ಇವರು, 2014ರ ‘ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್’ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿ ಸೌಂದರ್ಯ ಲೋಕಕ್ಕೆ ಹೆಜ್ಜೆ ಇಟ್ಟರು. ಇವರ ಅಕ್ಕ ಅನುಷಾ ರಂಗನಾಥ್ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಕನ್ನಡ ಸಿನಿ ಪಯಣ ಮತ್ತು ಸ್ಯಾಂಡಲ್‌ವುಡ್ ಯಶಸ್ಸು:

2016ರಲ್ಲಿ ನಿರ್ದೇಶಕ ಮಹೇಶ್ ಬಾಬು ಅವರ ‘ಕ್ರೇಜಿ ಬಾಯ್’ ಸಿನಿಮಾ ಮೂಲಕ ಆಶಿಕಾ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಮೊದಲ ಚಿತ್ರದಲ್ಲೇ ತಮ್ಮ ಅಭಿನಯದ ಮೂಲಕ ‘ಸೈಮಾ’ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಆದರೆ, ಅವರಿಗೆ ನಿಜವಾದ ಬ್ರೇಕ್ ಸಿಕ್ಕಿದ್ದು ಶರಣ್ ಜೋಡಿಯಾಗಿ ನಟಿಸಿದ ‘ರ್ಯಾಂಬೋ 2’ ಚಿತ್ರದಿಂದ. ಈ ಸಿನಿಮಾದ ‘ಚುಟು ಚುಟು’ ಹಾಡು ಸೃಷ್ಟಿಸಿದ ದಾಖಲೆ ಆಶಿಕಾ ಅವರನ್ನು ‘ಆಶಿಕಾ ರಂಗನಾಥ್’ ಎನ್ನುವ ಬ್ರ್ಯಾಂಡ್ ಆಗಿ ಬದಲಾಯಿಸಿತು.

ಆ ನಂತರ ಆಶಿಕಾ ಹಿಂತಿರುಗಿ ನೋಡಲೇ ಇಲ್ಲ. ‘ಮಾಸ್ ಲೀಡರ್’, ‘ಮುಗುಳು ನಗೆ’, ‘ತಾಯಿಗೆ ತಕ್ಕ ಮಗ’, ‘ಅವತಾರ ಪುರುಷ’, ‘ರೆಮೋ’ ಹಾಗೂ ಶ್ರೀಮುರಳಿ ಜೋಡಿಯಾಗಿ ನಟಿಸಿದ ‘ಮದಗಜ’ ಸಿನಿಮಾಗಳು ಅವರ ಜನಪ್ರಿಯತೆಯನ್ನು ಹೆಚ್ಚಿಸಿದವು. ‘ಮದಗಜ’ ಚಿತ್ರದ ನಟನೆಗಾಗಿ ಅವರು ಅತ್ಯುತ್ತಮ ನಟಿ ‘ಸೈಮಾ’ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಗ್ಲಾಮರ್ ಜೊತೆಗೆ ನಟನೆಗೂ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ, ಕನ್ನಡದ ಸಾಲು ಸಾಲು ಸ್ಟಾರ್ ನಟರ ಜೊತೆ ಅಭಿನಯಿಸಿ ಸ್ಯಾಂಡಲ್‌ವುಡ್‌ನ ಬೇಡಿಕೆಯ ನಟಿಯಾದರು.

ಟಾಲಿವುಡ್‌ನಲ್ಲೂ ಭಾರಿ ಬೇಡಿಕೆ:

ಕನ್ನಡದಲ್ಲಿ ಯಶಸ್ಸಿನ ಅಲೆಯಲ್ಲಿದ್ದಾಗಲೇ ಆಶಿಕಾ ಟಾಲಿವುಡ್‌ಗೆ ಕಾಲಿಟ್ಟರು. 2023ರಲ್ಲಿ ನಂದಮೂರಿ ಕಲ್ಯಾಣ್ ರಾಮ್ ಜೊತೆ ‘ಅಮಿಗೋಸ್’ ಚಿತ್ರದ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟರು. ತದನಂತರ ಅಕ್ಕಿನೇನಿ ನಾಗಾರ್ಜುನ ಅಭಿನಯದ ‘ನಾ ಸಾಮಿ ರಂಗ’ (2024) ಸಿನಿಮಾದಲ್ಲಿ ವರಲಕ್ಷ್ಮಿ ಎಂಬ ವಿಭಿನ್ನ ಪಾತ್ರದ ಮೂಲಕ ತೆಲುಗು ಪ್ರೇಕ್ಷಕರ ಮನ ಗೆದ್ದರು. ನಿರ್ದೇಶಕ ಗುಣಶೇಖರ್ ಅವರಂತಹ ದಿಗ್ಗಜರೇ ಆಶಿಕಾ ಅವರ ನಟನೆ ಮತ್ತು ವ್ಯಕ್ತಿತ್ವವನ್ನು ನೋಡಿ “ಈ ನಾಯಕಿಯನ್ನು ನೋಡಿದರೆ ಗೌರವ ಕೊಡಬೇಕು ಎನಿಸುತ್ತದೆ” ಎಂದು ಬಹಿರಂಗವಾಗಿ ಹೊಗಳಿದ್ದರು.

ಇದನ್ನೂ ಓದಿ: ಟಾಲಿವುಡ್​​ನಲ್ಲಿ ಮತ್ತೊಂದು ಆಫರ್​​ ಗಿಟ್ಟಿಸಿಕೊಂಡ ನಟಿ ಆಶಿಕಾ ರಂಗನಾಥ್

ಸದ್ಯ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ‘ವಿಶ್ವಂಭರ’ ಸಿನಿಮಾದಲ್ಲಿಯೂ ಆಶಿಕಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!