AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

80ರ ಟ್ರೆಂಡಿಂಗ್ ಫೋಟೋ: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಮುನ್ನೆಚ್ಚರಿಕೆ ಸಂದೇಶ

80ರ ಟ್ರೆಂಡಿಂಗ್ ಫೋಟೋ: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಮುನ್ನೆಚ್ಚರಿಕೆ ಸಂದೇಶ

ಮಂಜುನಾಥ ಎಚ್​. ವಿ.
| Edited By: |

Updated on: Sep 12, 2026 | 12:00 PM

Share

80ರ ದಶಕದ ಟ್ರೆಂಡಿಂಗ್ ಫೋಟೋಗಳ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಪರಿಚಿತ ಆಪ್‌ಗಳು ಮತ್ತು ಲಿಂಕ್‌ಗಳ ಮೂಲಕ ಫೋಟೋ ಎಡಿಟ್ ಮಾಡುವಾಗ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ಸೈಬರ್ ವಂಚಕರು ಈ ಅವಕಾಶವನ್ನು ಬಳಸಿಕೊಂಡು ಮೋಸ ಮಾಡಬಹುದು. ಹೀಗಾಗಿ, ಸಾರ್ವಜನಿಕರು ಹುಷಾರಾಗಿರುವಂತೆ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸರು ಸೂಚಿಸಿದ್ದಾರೆ.

ನೆಲಮಂಗಲ, ಸೆಪ್ಟೆಂಬರ್ 12: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ 80ರ ದಶಕದ ಫೋಟೋ ಎಡಿಟಿಂಗ್ ಟ್ರೆಂಡ್ ಕುರಿತು ಪೊಲೀಸರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಈ ಟ್ರೆಂಡ್ ಅನ್ನು ಬಳಸಿಕೊಂಡು ಸೈಬರ್ ವಂಚಕರು ಜನರನ್ನು ಮೋಸಗೊಳಿಸುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ. ಜನರು ಫೋಟೋಗಳನ್ನು ಹಳೆಯ ಶೈಲಿಯಲ್ಲಿ ಪರಿವರ್ತಿಸಲು ಅಪರಿಚಿತ ಅಪ್ಲಿಕೇಶನ್‌ಗಳು ಅಥವಾ ಲಿಂಕ್‌ಗಳನ್ನು ಬಳಸಿದರೆ ವೈಯಕ್ತಿಕ ಮಾಹಿತಿಯು ಸೋರಿಕೆಯಾಗಬಹುದು. ಈ ಮಾಹಿತಿಯನ್ನು ಬಳಸಿ ಸೈಬರ್ ಖದೀಮರು ಹಣಕಾಸಿನ ವಂಚನೆ ಅಥವಾ ಇತರ ದುಷ್ಕೃತ್ಯಗಳನ್ನು ಎಸಗಬಹುದು ಎಂದು ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸರು ಹೇಳಿದ್ದು, ಈ ಸಂಬಂಧ ಜನಜಾಗೃತಿ ಸಂದೇಶ ಪ್ರಕಟಿಸಿದ್ದಾರೆ.

ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಅಥವಾ ಅಪರಿಚಿತ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳದಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಒಂದು ಕ್ಷಣದ ಟ್ರೆಂಡ್‌ನಿಂದ ನಿಮ್ಮ ವೈಯಕ್ತಿಕ ಮಾಹಿತಿ ಅಪಾಯಕ್ಕೆ ಸಿಲುಕಬಹುದು. ಸೈಬರ್ ವಂಚನೆಯಿಂದ ಪಾರಾಗಲು ಜಾಗರೂಕರಾಗಿರುವುದು ಅತಿಮುಖ್ಯವಾಗಿದೆ ಎಂದು ಪೊಲೀಸರು ಕಿವಿಮಾತು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us