ಓಡಿಬಂದು ನಟ ಅಜಿತ್ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್; ಫ್ಯಾನ್ಸ್ ಫಿದಾ
ಬ್ರಿಟನ್‌ನ ಸಿಲ್ವರ್‌ಸ್ಟೋನ್ ರೇಸಿಂಗ್ ಟ್ರ್ಯಾಕ್‌ನಲ್ಲಿ ತಮಿಳು ಚಿತ್ರರಂಗದ ಇಬ್ಬರು ದೈತ್ಯ ಸೂಪರ್‌ಸ್ಟಾರ್‌ಗಳಾದ ತಮಿಳುನಾಡು ಮುಖ್ಯಮಂತ್ರಿ 'ದಳಪತಿ' ವಿಜಯ್ ಮತ್ತು 'ತಲಾ' ಅಜಿತ್ ಕುಮಾರ್ ಅಪರೂಪದ ಹಾಗೂ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಮಿಚೆಲಿನ್ ಲೀ ಮ್ಯಾನ್ಸ್ ಕಪ್ ರೇಸಿಂಗ್ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತಿರುವ ಅಜಿತ್ ಕುಮಾರ್ ಅವರನ್ನು ಕಂಡ ತಮಿಳುನಾಡು ಸಿಎಂ ವಿಜಯ್, ರೇಸಿಂಗ್ ಸರ್ಕ್ಯೂಟ್‌ನಲ್ಲಿ ಓಡಿಬಂದು ಅವರನ್ನು ತಬ್ಬಿಕೊಂಡಿದ್ದಾರೆ.
ಲಂಡನ್, ಸೆಪ್ಟೆಂಬರ್ 12: ಬ್ರಿಟನ್‌ನ ಸಿಲ್ವರ್‌ಸ್ಟೋನ್ ರೇಸಿಂಗ್ ಟ್ರ್ಯಾಕ್‌ನಲ್ಲಿ ತಮಿಳು ಚಿತ್ರರಂಗದ ಇಬ್ಬರು ಸೂಪರ್‌ಸ್ಟಾರ್‌ಗಳಾದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮತ್ತು ‘ತಲಾ’ ಅಜಿತ್ ಕುಮಾರ್ ಅಪರೂಪದ ಹಾಗೂ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಮಿಚೆಲಿನ್ ಲೀ ಮ್ಯಾನ್ಸ್ ಕಪ್ ರೇಸಿಂಗ್ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತಿರುವ ಅಜಿತ್ ಕುಮಾರ್ ಅವರನ್ನು ಕಂಡ ತಮಿಳುನಾಡು ಸಿಎಂ ವಿಜಯ್, ರೇಸಿಂಗ್ ಸರ್ಕ್ಯೂಟ್‌ನಲ್ಲಿ ಓಡಿಬಂದು ತಬ್ಬಿಕೊಂಡಿದ್ದಾರೆ.
ಈ ಇಬ್ಬರು ನಟರ ಆತ್ಮೀಯ ಭೇಟಿಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಮಿಳು ಚಿತ್ರಾಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ತಮಿಳು ಚಿತ್ರರಂಗದಲ್ಲಿ ಕಳೆದ 3 ದಶಕಗಳಿಂದ ಭಾರೀ ಪೈಪೋಟಿ ಹೊಂದಿದ್ದ ಈ ಇಬ್ಬರು ನಾಯಕರು ಸಾರ್ವಜನಿಕ ವೇದಿಕೆಯಲ್ಲಿ ಒಂದಾಗಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

