AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಒಡೆದ ಕನ್ನಡಿ, ಮನೆಯಿಂದ ಹೊರಬಂದ ಇಬ್ಬರು

ನಾಮಿನೇಟ್ ಆದ ಹಲವರಲ್ಲಿ ಅಂತಿಮವಾಗಿ ನಾಲ್ಕು ಜನರನ್ನು ನಾಲ್ಕು ಕನ್ನಡಿಗಳ ಮುಂದೆ ನಿಲ್ಲಿಸಿ, ಅವರೊಟ್ಟಿಗೆ ಅವರೇ ಮಾತನಾಡುವಂತೆ ಬಿಗ್​​ಬಾಸ್ ಸೂಚಿಸಿದರು. ಅವಿನಾಶ್, ವೈಷ್ಣವಿ, ಶಾಸ್ತ್ರಿ ಮತ್ತು ಮಂಜ ಅವರುಗಳು ಕನ್ನಡಿ ಮುಂದೆ ನಿಂತರು. ಅವಿನಾಶ್, ತನ್ನ ಬಳಿ ತಾನೇ ಮಾತನಾಡುವಾಗ ಬಹಳ ಭಾವುಕರಾಗಿಬಿಟ್ಟರು. ಅದಾದ ಬಳಿಕ ವೈಷ್ಣವಿ ಮಾತನಾಡಿದರು. ಇಬ್ಬರ ಕನ್ನಡಿ ಒಡೆಯಲಿಲ್ಲ ಹಾಗಾಗಿ ಅವರನ್ನು ಸೇಫ್ ಎಂದು ಪರಿಗಣಿಸಿ ಮನೆಯ ಒಳಕ್ಕೆ ಕಳಿಸಲಾಯ್ತು.

Bigg Boss Kannada: ಒಡೆದ ಕನ್ನಡಿ, ಮನೆಯಿಂದ ಹೊರಬಂದ ಇಬ್ಬರು
Bigg Boss Kannada 13
ಮಂಜುನಾಥ ಸಿ.
|

Updated on: Sep 20, 2026 | 10:54 PM

Share

ಬಿಗ್​​ಬಾಸ್ ಕನ್ನಡ ಸೀಸನ್ 13ರಲ್ಲಿ ಎರಡನೇ ವಾರ ಎಲಿಮಿನೇಷನ್ ಇರಲಿಲ್ಲ ಅದು ಪ್ರೇಕ್ಷಕರಿಗೆ ಮೊದಲೇ ತಿಳಿದಿತ್ತು. ಆದರೆ ಮನೆಯ ಸದಸ್ಯರ ಮುಂದೆ ಇಬ್ಬರು ಸದಸ್ಯರು ಮನೆಯಿಂದ ಹೊರಗೆ ಬಂದಿದ್ದಾರೆ. ಅವರಿಬ್ಬರು ಸೀಕ್ರೇಟ್ ರೂಂನಲ್ಲಿ ಮುಂದಿನ ಕೆಲ ದಿನಗಳ ಕಾಲ ಸಮಯ ಕಳೆಯಲಿದ್ದಾರೆ. ಅಸಲಿಗೆ ಈ ವಾರ ಹಲವಾರು ಮಂದಿ ನಾಮಿನೇಟ್ ಆಗಿದ್ದರು. ಆದರೆ ಈ ವಾರ ಎಲಿಮಿನೇಷನ್ ಇರಲಿಲ್ಲ. ಬದಲಿಗೆ ಮನೆಯ ಸದಸ್ಯರ ಎದುರು ಇಬ್ಬರು ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕರೆತರಲಾಯ್ತು.

ನಾಮಿನೇಟ್ ಆದ ಹಲವರಲ್ಲಿ ಅಂತಿಮವಾಗಿ ನಾಲ್ಕು ಜನರನ್ನು ನಾಲ್ಕು ಕನ್ನಡಿಗಳ ಮುಂದೆ ನಿಲ್ಲಿಸಿ, ಅವರೊಟ್ಟಿಗೆ ಅವರೇ ಮಾತನಾಡುವಂತೆ ಬಿಗ್​​ಬಾಸ್ ಸೂಚಿಸಿದರು. ಅವಿನಾಶ್, ವೈಷ್ಣವಿ, ಶಾಸ್ತ್ರಿ ಮತ್ತು ಮಂಜ ಅವರುಗಳು ಕನ್ನಡಿ ಮುಂದೆ ನಿಂತರು. ಅವಿನಾಶ್, ತನ್ನ ಬಳಿ ತಾನೇ ಮಾತನಾಡುವಾಗ ಬಹಳ ಭಾವುಕರಾಗಿಬಿಟ್ಟರು. ಅದಾದ ಬಳಿಕ ವೈಷ್ಣವಿ ಮಾತನಾಡಿದರು. ಇಬ್ಬರ ಕನ್ನಡಿ ಒಡೆಯಲಿಲ್ಲ ಹಾಗಾಗಿ ಅವರನ್ನು ಸೇಫ್ ಎಂದು ಪರಿಗಣಿಸಿ ಮನೆಯ ಒಳಕ್ಕೆ ಕಳಿಸಲಾಯ್ತು.

ಇದನ್ನೂ ಓದಿ:‘ದಿ ಪ್ಯಾರಡೈಸ್’ ಸಿನಿಮಾ ಪ್ರಚಾರದಿಂದ ದೂರ ಉಳಿದ ನಟಿ ಖಯಾದು ಲೋಹರ್

ಬಳಿಕ ಮಾಡರ್ನ್ ಕವಿ ಮಂಜ ಮತ್ತು ಕಿರಣ್ ಶಾಸ್ತ್ರಿ ಅವರುಗಳು ಕನ್ನಡಿ ಎದುರು ನಿಂತು ಮಾತನಾಡಿದರು. ಇಬ್ಬರ ಕನ್ನಡಿಗಳೂ ಸಹ ಒಡೆದು ಚೂರು ಚೂರಾದವು. ಆ ಮೂಲಕ ಇಬ್ಬರೂ ಹೊರಗೆ ಹೋಗಬೇಕಾಯ್ತು. ಕಿರಣ್ ಭಾವುಕನಾಗಿ ಹೊರಗೆ ಹೋದರೆ ಮಂಜ, ಹುಂಬತನದ ಮಾತುಗಳನ್ನಾಡಿ ಹೊರಗೆ ಹೋದ. ಅಸಲಿ ವಿಷಯ ಏನೆಂದರೆ ಈ ವಾರ ಯಾವುದೇ ನಾಮಿನೇಷನ್ ಇಲ್ಲ ಆದರೆ ಮನೆಯ ಸದಸ್ಯರ ಎದುರು ಮಾತ್ರ ಇಬ್ಬರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ.

ಬಹುಷಃ ಕಿರಣ್ ಶಾಸ್ತ್ರಿ ಮತ್ತು ಮಂಜನನ್ನು ಸೀಕ್ರೇಟ್ ರೂಮಿನಲ್ಲಿ ಇರಿಸಲಾಗುತ್ತದೆ. ಕಳೆದ ಸೀಸನ್​​ನಲ್ಲಿ ಇಬ್ಬರನ್ನು ಹೀಗೆಯೇ ಸೀಕ್ರೆಟ್ ರೂಮಿನಲ್ಲಿ ಇರಿಸಲಾಗಿತ್ತು. ಸೀಕ್ರೇಟ್ ರೂಮಿನಿಂದಲೇ ಆ ಇಬ್ಬರೂ ಆಟ ಆಡಿದ್ದರು. ಹಾಗೆಯೇ ಈ ಬಾರಿ ಶಾಸ್ತ್ರಿ ಮತ್ತು ಮಂಜ ಸಹ ಸೀಕ್ರೆಟ್ ರೂಮಿನಲ್ಲಿ ಇರಬಹುದೇನೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More