AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ವೇದಿಕೆಯಲ್ಲಿ ರಾಜಕೀಯ ಸದ್ದು; ‘ಟಿವಿಕೆ’ ಜಪಕ್ಕೆ ಪ್ರತಿಕ್ರಿಯಿಸಿದ ಜೇಸನ್ ಸಂಜಯ್

ತಮಿಳು ನಟ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ಪ್ರೀ-ರಿಲೀಸ್ ಈವೆಂಟ್‌ನಲ್ಲಿ 'ಟಿವಿಕೆ' ರಾಜಕೀಯ ಪಕ್ಷದ ಘೋಷಣೆಗಳು ಮೊಳಗಿವೆ. ವೇದಿಕೆಯಲ್ಲಿ ಧನ್ಯವಾದ ತಿಳಿಸುವಾಗ ಅಭಿಮಾನಿಗಳು ತಂದೆಯ ಪಕ್ಷದ ಪರ ಕೂಗಿದಾಗ, ಜೇಸನ್ ಸಂಜಯ್ 'ಥಂಬ್ಸ್ ಅಪ್' ತೋರಿಸಿ ನಗುಮುಖದಿಂದ ಸ್ವೀಕರಿಸಿದ್ದಾರೆ. 

ಸಿನಿಮಾ ವೇದಿಕೆಯಲ್ಲಿ ರಾಜಕೀಯ ಸದ್ದು; ‘ಟಿವಿಕೆ’ ಜಪಕ್ಕೆ ಪ್ರತಿಕ್ರಿಯಿಸಿದ ಜೇಸನ್ ಸಂಜಯ್
ಜೇಸನ್-ವಿಜಯ್
ರಾಜೇಶ್ ದುಗ್ಗುಮನೆ
|

Updated on: Sep 09, 2026 | 1:30 PM

Share

ಮುಖ್ಯಾಂಶಗಳು

  • ಸೇಲಂ ಈವೆಂಟ್‌ನಲ್ಲಿ ಟಿವಿಕೆ ಜಪ
  • ವಿಜಯ್ ಮಗ ಜೇಸನ್ ಸಂಜಯ್ ನೀಡಿದ ರಿಯಾಕ್ಷನ್ ಏನು
  • ತಂದೆ-ಮಗನ ವಿವಾದದ ನಡುವೆ ರಾಜಕೀಯ ಸದ್ದು 

ತಮಿಳು ನಟ ಹಾಗೂ ಅಲ್ಲಿನ ಸಿಎಂ ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಸಾರ್ವಜನಿಕ ವೇದಿಕೆಯಲ್ಲಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಅವರು ನಿರ್ದೇಶಿಸುತ್ತಿರುವ ‘ಸಿಗ್ಮಾ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ ಸೇಲಂನಲ್ಲಿ ಮಂಗಳವಾರ ನಡೆಯಿತು. ಈ ವೇಳೆ ಪ್ರೇಕ್ಷಕರು ಹಠಾತ್ತನೆ ವಿಜಯ್ ಅವರ ‘ಟಿವಿಕೆ’ ಪಕ್ಷದ ಪರವಾಗಿ ಘೋಷಣೆ ಕೂಗಲು ಪ್ರಾರಂಭಿಸಿದರು. ಈ ಘಟನೆ ಕಾರ್ಯಕ್ರಮದಲ್ಲಿದ್ದ ಎಲ್ಲರ ಗಮನ ಸೆಳೆಯಿತು.

ವೇದಿಕೆಯಲ್ಲಿ ಜೇಸನ್ ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಮಾತನಾಡುತ್ತಿದ್ದರು. ಚಿತ್ರತಂಡ ಹಾಗೂ ತಮ್ಮ ಕುಟುಂಬಕ್ಕೆ ಅವರು ಧನ್ಯವಾದ ತಿಳಿಸಿದರು. ‘ಸೇಲಂ ನನಗೆ ಸಾಲು ಸಾಲು ಸಿಹಿ ನೆನಪುಗಳನ್ನು ನೀಡಿದೆ. ಬೆಂಬಲಿಸಿದ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆಗಳು’ ಎಂದು ಅವರು ಹೇಳಿದರು. ಈ ಮಾತುಗಳು ಕೇಳುತ್ತಿದ್ದಂತೆ ಸಭಿಕರ ಗದ್ದಲ ಮತ್ತು ಹರ್ಷೋದ್ಗಾರ ಮುಗಿಲುಮುಟ್ಟಿತ್ತು.

ಜನರ ಕೂಗಾಟದ ನಡುವೆ ಜೇಸನ್ ಮಾತು ನಿಲ್ಲಿಸಿದರು. ಸಭಿಕರತ್ತ ನೋಡಿ ನಗುತ್ತಾ ತಲೆಯಾಡಿಸಿದರು. ಆಗ ನೆರೆದಿದ್ದ ಜನ ‘ಟಿವಿಕೆ’ ‘ಟಿವಿಕೆ’ ಎಂದು ಗಟ್ಟಿಯಾಗಿ ಘೋಷಣೆ ಕೂಗಲು ಶುರು ಮಾಡಿದರು. ಜೇಸನ್ ನಗುಮುಖದಿಂದಲೇ ‘ಥಂಬ್ಸ್ ಅಪ್’ ಸೈನ್ ತೋರಿಸಿ ಕೃತಜ್ಞತೆ ಸಲ್ಲಿಸಿದರು. ಬಳಿಕ ವಾತಾವರಣ ಶಾಂತವಾದಾಗ ಅವರು ತಮ್ಮ ಮಾತನ್ನು ಮುಂದುವರಿಸಿದರು.

ಇತ್ತೀಚೆಗೆ ವಿಜಯ್ ಹಾಗೂ ಅವರ ಮಗ ಜೇಸನ್ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳು ಹರಡಿದ್ದವು. ಇನ್‌ಸ್ಟಾಗ್ರಾಮ್‌ನಲ್ಲಿ ತಂದೆಯನ್ನು ಅನ್‌ಫಾಲೋ ಮಾಡಿದ್ದು ಮತ್ತು ಹೆಸರಿನಿಂದ ‘ವಿ’ ಅಕ್ಷರ ತೆಗೆದುಹಾಕಿದ್ದು ಚರ್ಚೆಯಾಗಿತ್ತು. ಆದರೆ ಈ ಯಾವುದೇ ವದಂತಿಗಳಿಗೆ ಇಬ್ಬರೂ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ಕಾರ್ಯಕ್ರಮದಲ್ಲಿ ಟಿವಿಕೆ ಘೋಷಣೆ ಕೂಗಿರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ: ತಾಯಿ ಸಂಗೀತಾ ಹಾಗೂ ತಂದೆ ವಿಜಯ್ ಸಂಬಂಧದ ಬಗ್ಗೆ ಜೇಸನ್ ಸಂಜಯ್ ಮಾತು

‘ಸಿಗ್ಮಾ’ ಸಿನಿಮಾ ಮೂಲಕ ಜೇಸನ್ ಸಂಜಯ್ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೊಂದು ಆ್ಯಕ್ಷನ್, ಕಾಮಿಡಿ ಮತ್ತು ಟ್ರೆಷರ್ ಹಂಟ್ ಕಥಾಹಂದರ ಹೊಂದಿರುವ ಸಿನಿಮಾವಾಗಿದೆ. ಸಿನಿಮಾ ಯಶಸ್ವಿಗೊಳಿಸುವುದೇ ನನ್ನ ಮೊದಲ ಆದ್ಯತೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ