- TV9 Kannada Photo gallery Cricket photos Ishan Kishan's Record-Breaking 270: Duleep Trophy Final Double Century Feat
ತ್ರಿಶತಕ ವಂಚಿತರಾದರೂ ಹಲವು ದಾಖಲೆ ನಿರ್ಮಿಸಿದ ಇಶಾನ್ ಕಿಶನ್
ಇಶಾನ್ ಕಿಶನ್ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಪೂರ್ವ ವಲಯ ಪರ 270 ರನ್ ಸಿಡಿಸಿ ಹಲವು ದಾಖಲೆ ಬರೆದಿದ್ದಾರೆ. ಕೇವಲ 30 ರನ್‌ಗಳಿಂದ ತ್ರಿಶತಕ ವಂಚಿತರಾದರೂ, ಅವರು ವಿಕೆಟ್ ಕೀಪರ್-ನಾಯಕನಾಗಿ ದ್ವಿಶತಕ ಗಳಿಸಿದ ಮೊದಲ ಆಟಗಾರರಾದರು. ಈ ಭರ್ಜರಿ ಇನ್ನಿಂಗ್ಸ್ ತಂಡಕ್ಕೆ 708 ರನ್ ಗಳಿಸಲು ನೆರವಾಯಿತು. ಕಿಶನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4000 ರನ್ ಪೂರೈಸಿದ ಸಾಧನೆ ಮಾಡಿದರು.
Updated on: Sep 07, 2026 | 7:01 PM

ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತಂಡದ ನಾಯಕ ಇಶಾನ್ ಕಿಶನ್ 270 ರನ್‌ಗಳ ಇನ್ನಿಂಗ್ಸ್ ಆಡಿದರು. ಅವರ ಈ ಇನ್ನಿಂಗ್ಸ್ನಿಂದಾಗಿ ಪೂರ್ವ ವಲಯ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ದಾಖಲೆಯ 708 ರನ್ ಕಲೆಹಾಕಿತು. ಆದಾಗ್ಯೂ ಈ ಪಂದ್ಯದಲ್ಲಿ ಕಿಶನ್ಗೆ ತ್ರಿಶತಕ ಬಾರಿಸುವ ಅವಕಾಶವಿತ್ತು. ಆದರೆ ಕಿಶನ್ ತ್ರಿಶತಕದಂಚಿನಲ್ಲಿ ಎಡವಿ ಮತ್ತೊಂದು ದಾಖಲೆಯಿಂದ ವಂಚಿತರಾದರು(PC-Star sports).

ಆದಾಗ್ಯೂ ತ್ರಿಶತಕ ವಂಚಿತರಾದರೂ ಇಶಾನ್ ಕಿಶನ್ ಹಲವು ದಾಖಲೆಗಳನ್ನು ನಿರ್ಮಿಸಿದರು. ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಪೂರ್ವ ವಲಯ ತಂಡದ ಪರವಾಗಿ ದ್ವಿಶತಕ ಬಾರಿಸಿದ ಮೊದಲ ವಿಕೆಟ್ ಕೀಪರ್-ನಾಯಕ ಎಂಬ ಹೆಗ್ಗಳಿಕೆಗೆ ಕಿಶನ್ ಪಾತ್ರರಾಗಿದ್ದಾರೆ. ಅಲ್ಲದೆ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ದ್ವಿಶತಕ ಸಿಡಿಸಿದ ಏಳನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯೂ ಕಿಶನ್ ಪಾಲಾಗಿದೆ(PC-Star sports).

ಫೈನಲ್‌ನಲ್ಲಿ ಇಶಾನ್ 334 ಎಸೆತಗಳಲ್ಲಿ 270 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ಕೇವಲ 30 ರನ್‌ಗಳಿಂದ ತಮ್ಮ ತ್ರಿಶತಕವನ್ನು ತಪ್ಪಿಸಿಕೊಂಡರು. ತಮ್ಮ ಇನ್ನಿಂಗ್ಸ್ನಲ್ಲಿ 30 ಬೌಂಡರಿ ಮತ್ತು ಏಳು ಸಿಕ್ಸರ್‌ಗಳನ್ನು ಬಾರಿಸಿದ ಕಿಶನ್ ಇನ್ನೂ 30 ರನ್‌ಗಳನ್ನು ಗಳಿಸಿದ್ದರೆ, ಈ ಪಂದ್ಯಾವಳಿಯಲ್ಲಿ ತ್ರಿಶತಕ ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಆಗುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ(PC-PTI).

ಇಶಾನ್ ಕಿಶನ್ಗೂ ಮೊದಲು, ರಮಣ್ ಲಂಬಾ ಮತ್ತು ಗಗನ್ ಖೋಡಾ ಮಾತ್ರ ದುಲೀಪ್ ಟ್ರೋಫಿಯಲ್ಲಿ ತ್ರಿಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ರಮಣ್ ಲಂಬಾ ಅವರ ಅತ್ಯಧಿಕ 320 ರನ್‌ಗಳ ಇನ್ನಿಂಗ್ಸ್ ಆಡಿದ್ದರೆ, ಗಗನ್ ಖೋಡಾ ಕೂಡ ದುಲೀಪ್ ಟ್ರೋಫಿಯಲ್ಲಿ ಅಜೇಯ 300 ರನ್ ಬಾರಿಸಿದ್ದರು(PC-PTI).

ಇನ್ನು ದುಲೀಪ್ ಟ್ರೋಫಿಯ ಇನ್ನಿಂಗ್ಸ್ವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕಿಶನ್ 7ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಇಶಾನ್ ಕಿಶನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನಾಲ್ಕು ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದ ಸಾಧನೆಯನ್ನು ಮಾಡಿದರು(PC-PTI).




