Horoscope Today: ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಸೆಪ್ಟೆಂಬರ್ 9, ಬುಧವಾರದದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಸೆಪ್ಟೆಂಬರ್ 9, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ಕೃಷ್ಣ ಪಕ್ಷ, ಆಶ್ಲೇಷಾ ನಕ್ಷತ್ರ, ತ್ರಯೋದಶಿ ತಿಥಿಯೊಂದಿಗೆ ಶಿವಯೋಗ ಮತ್ತು ವಣಿಕಕರಣದಿಂದ ಕೂಡಿದೆ.
ಈ ದಿನದ ರಾಹುಕಾಲವು ಮಧ್ಯಾಹ್ನ 12 ಗಂಟೆ 16 ನಿಮಿಷದಿಂದ 1 ಗಂಟೆ 48 ನಿಮಿಷದವರೆಗೆ ಇರುತ್ತದೆ. ಹಾಗೆಯೇ, ಶುಭಕಾಲ ಅಥವಾ ಸರ್ವಸಿದ್ಧಿ ಕಾಲವು ಬೆಳಗ್ಗೆ 10 ಗಂಟೆ 44 ನಿಮಿಷದಿಂದ 12 ಗಂಟೆ 17 ನಿಮಿಷದವರೆಗೆ ಇರುತ್ತದೆ. ಮಾಸ ಶಿವರಾತ್ರಿ ಸೇರಿದಂತೆ ಹಲವು ವಿಶೇಷ ಉತ್ಸವಗಳು ನಡೆಯುವ ಪರ್ವದಿನ ಇದಾಗಿದೆ. ರವಿ ಸಿಂಹ ರಾಶಿಯಲ್ಲಿ ಮತ್ತು ಚಂದ್ರ ಕರ್ಕಾಟಕ ರಾಶಿಯ ಆಶ್ಲೇಷಾ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದಾನೆ. ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಗುರೂಜಿ ಅವರು ಶುಭ ಕೋರಿದ್ದಾರೆ.

