AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಮನೆ ಗೋಡೆ ಏರಿ ಪರಾರಿಗೆ ಯತ್ನಿಸಿದ ಸ್ಪರ್ಧಿ

ಬಿಗ್​​ಬಾಸ್ ಸೀಸನ್ ಹಲವು ಭಾಷೆಗಳಲ್ಲಿ ಶುರುವಾಗಿದೆ. ನಾನಾ ರೀತಿಯ ಸ್ಪರ್ಧಿಗಳು ಶೋನಲ್ಲಿ ಭಾಗವಹಿಸಿದ್ದಾರೆ. ಇದೀಗ ಬಿಗ್​​ಬಾಸ್ ಸ್ಪರ್ಧಿಯೊಬ್ಬ ಸೀಸನ್ ಶುರುವಾಗಿ ಎರಡೇ ದಿನಕ್ಕೆ ಮನೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಬಿಗ್​​ಬಾಸ್ ಮನೆಯ ಮುಖ್ಯ ದ್ವಾರದ ಬದಿಯ ಗೋಡೆಗಳನ್ನು ಏರಿ ಪರಾರಿ ಆಗಲು ಯತ್ನಿಸಿದ್ದಾನೆ, ವಿಡಿಯೋ ನೋಡಿ...

ಬಿಗ್​​ಬಾಸ್ ಮನೆ ಗೋಡೆ ಏರಿ ಪರಾರಿಗೆ ಯತ್ನಿಸಿದ ಸ್ಪರ್ಧಿ
Bigg Boss Tamil
ಮಂಜುನಾಥ ಸಿ.
| Edited By: |

Updated on:Sep 09, 2026 | 12:04 PM

Share

ಮುಖ್ಯಾಂಶಗಳು

  • ಬಿಗ್​​ಬಾಸ್ ಶೋ ಶುರುವಾಗಿ ಕೆಲವೇ ದಿನಗಾಗಿವೆ
  • ಅಷ್ಟರಲ್ಲೇ ಸ್ಪರ್ಧಿಯೊಬ್ಬ ಮನೆಯಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾನೆ
  • ಬಿಗ್​ಬಾಸ್ ಮನೆಯ ಗೋಡೆಗಳನ್ನು ಏರಿದ್ದಾನೆ ಸ್ಪರ್ಧಿ

ಬಿಗ್​​ಬಾಸ್ ಸೀಸನ್​​ ಪ್ರಾರಂಭವಾಗಿದೆ. ಕನ್ನಡ ಮಾತ್ರವೇ ಅಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಗ್​​ಬಾಸ್ ಸೀಸನ್ ಪ್ರಾರಂಭ ಆಗಿದ್ದು, ಎಲ್ಲೆಡೆ ಒಂದೇ ದಿನ ಕಾರ್ಯಕ್ರಮ ಶುರುವಾಗಿದೆ. ಬಿಗ್​​ಬಾಸ್​​ನಲ್ಲಿ ನಾನಾ ರೀತಿಯ ವ್ಯಕ್ತಿತ್ವದ ಸ್ಪರ್ಧಿಗಳು ಬರುತ್ತಾರೆ. ಜನರ ಗಮನ ಸೆಳೆಯಲು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ತಮಿಳು ಬಿಗ್​​ಬಾಸ್​​ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಬಿಗ್​​ಬಾಸ್ ಶುರು ಆಗಿ ಒಂದೇ ದಿನಕ್ಕೆ ಸ್ಪರ್ಧಿಯೊಬ್ಬ ಬಿಗ್​​ಬಾಸ್ ಮನೆಯಿಂದ ಎಸ್ಕೇಪ್​​ ಆಗಲು ಯತ್ನಿಸಿದ್ದಾನೆ.

ತಮಿಳಿನಲ್ಲಿ ಬಿಗ್ ಬಾಸ್ ಸೀಸನ್ 10 ಅನ್ನು ನಟ ವಿಜಯ್ ಸೇತುಪತಿ ನಿರೂಪಣೆ ಮಾಡುತ್ತಿದ್ದಾರೆ. ಈ ಬಾರಿಯ ಸೀಸನ್ ಒಳ್ಳೆಯ ಆರಂಭವನ್ನು ಪಡೆದುಕೊಂಡಿದೆ. ಆದರೆ ಶೋ ಶುರುವಾಗಿ ಒಂದು ದಿನ ಮುಗಿಯುತ್ತಿದ್ದಂತೆ ಒಬ್ಬ ಸ್ಪರ್ಧಿ ಮನೆಯಿಂದಲೇ ಎಸ್ಕೇಪ್ ಆಗುವ ಯತ್ನ ಮಾಡಿದ್ದಾನೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕನ್ನಡ ಬಿಗ್​​ಬಾಸ್ ಆರಂಭವಾದ ದಿನವೇ ತಮಿಳು ಸೀಸನ್​​ ಸಹ ಆರಂಭವಾಗಿದ್ದು 19 ಸ್ಪರ್ಧಿಗಳು ಶೋನಲ್ಲಿ ಭಾಗವಹಿಸಿದ್ದಾರೆ. ಇವರುಗಳಲ್ಲಿ ‘ಕುಕ್ ವಿತ್ ಕೋಮಲಿ’ ಕಾರ್ಯಕ್ರಮದ ಮೂಲಕ ಜನಪ್ರಿಯರಾದ ಅನ್ಸರ್ ಕೂಡ ಇದರಲ್ಲಿ ಪಾಲ್ಗೊಂಡಿದ್ದರು. ಆದರೆ ಕಾರ್ಯಕ್ರಮ ಆರಂಭವಾದ ಎರಡೇ ದಿನಕ್ಕೆ ಅನ್ಸರ್, ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗುವ ಪ್ರಯತ್ನ ಮಾಡಿದ್ದಾರೆ. ಅನ್ಸರ್, ಮೊದಲಿಗೆ ಬಿಗ್​​ಬಾಸ್​​ನ ಮುಖ್ಯ ಗೇಟನ್ನು ತಟ್ಟಿದ್ದಾರೆ. ಯಾರೂ ತೆರೆಯದಿದ್ದಾಗ ಗೋಡೆ ಹತ್ತಿ ಮೇಲೆ ಹೋಗಿದ್ದಾರೆ. ಆದರೆ ಅವರು ಹೊರಗೆ ಹೋಗಲು ಯಶಸ್ವಿ ಆಗಿದ್ದಾರೆ ಇಲ್ಲವೋ ಎಂಬುದು ಖಾತ್ರಿ ಆಗಿಲ್ಲ.

ಅನ್ಸರ್, ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗುವ ಪ್ರಯತ್ನ ಮಾಡಿದ್ದರ ವಿಡಿಯೋ

ಅನ್ಸರ್, ಗೋಡೆ ಹತ್ತಿ ಹೊರಗೆ ಹೋಗುವ ಪ್ರಯತ್ನ ಮಾಡುತ್ತಿರುವ ವಿಡಿಯೋ ಅನ್ನು ತಮಿಳು ಬಿಗ್​​ಬಾಸ್ ಹಂಚಿಕೊಂಡಿದೆ. ಆದರೆ ಅನ್ಸರ್ ಹೊರಗೆ ಹೋಗಲು ಯಶಸ್ವಿ ಆಗಿದ್ದಾರಾ ಇಲ್ಲವಾ ಎಂಬುದು ತಿಳಿದಿಲ್ಲ. ಆದರೆ ವಿಡಿಯೋನಲ್ಲಿ ತೋರಿಸಿರುವಂತೆ ಅನ್ಸರ್ ಗೋಡೆಯನ್ನು ಹತ್ತಿ ಬಹುತೇಕ ಮೇಲೆ ತಲುಪಿದ್ದಾರೆ. ಆದರೆ ಅಲ್ಲಿಂದ ಆಚೆ ಬದಿಗೆ ಇಳಿಯಲು ಯಶಸ್ವಿ ಆಗಿದ್ದಾರೆಯೇ ಇಲ್ಲವೇ ಎಂಬುದು ತಿಳಿದು ಬಂದಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:23 am, Wed, 9 September 26

Follow Us
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ