AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಝಿಲೆಂಡ್​ನಲ್ಲಿ ‘ಟೀಮ್ ಇಂಡಿಯಾ ಎಫೆಕ್ಟ್​’

ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ ಹೈ-ವೋಲ್ಟೇಜ್ ಸರಣಿ ಅಕ್ಟೋಬರ್ 22 ರಿಂದ ಜರುಗಲಿದ್ದು, ಇದಕ್ಕೂ ಮೊದಲೇ ಕಿವೀಸ್ ನಾಡಿನಲ್ಲಿ ಕ್ರಿಕೆಟ್ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಸರಣಿ ಆರಂಭಕ್ಕೆ ಇನ್ನೂ ದಿನಗಣನೆ ಬಾಕಿ ಇರುವಂತೆಯೇ, ಪಂದ್ಯಗಳನ್ನು ಕಣ್ಣುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದು, ಟಿಕೆಟ್‌ಗಳು ದಾಖಲೆ ಮಟ್ಟದಲ್ಲಿ ಬಿಕರಿಯಾಗುತ್ತಿವೆ.

ನ್ಯೂಝಿಲೆಂಡ್​ನಲ್ಲಿ 'ಟೀಮ್ ಇಂಡಿಯಾ ಎಫೆಕ್ಟ್​'
ಟೀಮ್ ಇಂಡಿಯಾImage Credit source: GettyImages
ಝಾಹಿರ್ ಯೂಸುಫ್
|

Updated on: Sep 09, 2026 | 1:06 PM

Share

ಜಾಗತಿಕ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕಿರುವ ಕ್ರೇಝ್ ಎಂಥದ್ದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮುಂಬರುವ ಭಾರತ ಪುರುಷರ ಕ್ರಿಕೆಟ್ ತಂಡದ ನ್ಯೂಝಿಲೆಂಡ್ ಪ್ರವಾಸಕ್ಕಾಗಿ ಟಿಕೆಟ್ ವಿಂಡೋ ಓಪನ್ ಆದ ಕೇವಲ ಎರಡೇ ವಾರಗಳಲ್ಲಿ 50,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ ಎಂದು ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್​ ಅಧಿಕೃತವಾಗಿ ಪ್ರಕಟಿಸಿದೆ.

ಸುಮಾರು ಆರು ವರ್ಷಗಳ ನಂತರ ಟೀಮ್ ಇಂಡಿಯಾ ಪೂರ್ಣ ಪ್ರಮಾಣದ ಸರಣಿಗಾಗಿ ಕಿವೀಸ್ ನಾಡಿಗೆ ಕಾಲಿಡುತ್ತಿರುವುದರಿಂದ, ಅಲ್ಲಿನ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಸಂಚಲನ ಮೂಡಿದೆ. ಸ್ಥಳೀಯವಾಗಿ ಇದನ್ನು “ಇಂಡಿಯಾ ಎಫೆಕ್ಟ್” ಎಂದೇ ಬಣ್ಣಿಸಲಾಗುತ್ತಿದೆ.

ದಾಖಲೆ ಬರೆದ ಮುಂಗಡ ಟಿಕೆಟ್ ಬುಕಿಂಗ್:

ಕ್ರಿಕೆಟ್ ನೇಷನ್ ಸದಸ್ಯರು ಮತ್ತು ಕಾರ್ಪೊರೇಟ್ ಪಾಲುದಾರರಿಗಾಗಿ ಆರಂಭಿಸಲಾದ ಪ್ರಿ-ಸೇಲ್ ವಿಂಡೋ ಓಪನ್ ಆದ ಕೇವಲ 48 ಗಂಟೆಗಳಲ್ಲಿ 26,000 ಟಿಕೆಟ್‌ಗಳು ಬಿಕರಿಯಾಗಿದ್ದವು. ಸೆಪ್ಟೆಂಬರ್ 7 ರಿಂದ ಸಾರ್ವಜನಿಕರಿಗೆ ಟಿಕೆಟ್ ಖರೀದಿಸಲು ಮುಕ್ತ ಅವಕಾಶ ನೀಡಲಾಗಿದ್ದು, ಇದೀಗ ಒಟ್ಟು ಮಾರಾಟದ ಸಂಖ್ಯೆ 50 ಸಾವಿರದ ಗಡಿ ದಾಟಿದೆ.

ಇಡನ್ ಪಾರ್ಕ್‌ನ 6ನೇ ಟಿಯರ್ ಓಪನ್!

ಅಕ್ಟೋಬರ್ 30 ರಂದು ಆಕ್ಲೆಂಡ್‌ನ ಪ್ರಸಿದ್ಧ ಇಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯಕ್ಕೆ ಅಭೂತಪೂರ್ವ ಬೇಡಿಕೆ ವ್ಯಕ್ತವಾಗಿದೆ. ಪ್ರೇಕ್ಷಕರ ಒತ್ತಡವನ್ನು ನಿಭಾಯಿಸಲು ಕ್ರೀಡಾಂಗಣದ ಅತ್ಯುನ್ನತ ಮಟ್ಟದ ಆರನೇ ಆಸನ ಶ್ರೇಣಿಯನ್ನು ತೆರೆಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

2019ರ ಭಾರತ ಪ್ರವಾಸದ ನಂತರ ಈ ಗ್ಯಾಲರಿಯನ್ನು ಬಳಕೆ ಮಾಡುತ್ತಿರುವುದು ಇದೇ ಮೊದಲು. ಇದರೊಂದಿಗೆ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದ ಶೇ. 75 ರಷ್ಟು ಟಿಕೆಟ್‌ಗಳು ಈಗಾಗಲೇ ಖಾಲಿಯಾಗಿವೆ.

ಭರ್ಜರಿ 12 ಪಂದ್ಯಗಳ ಸರಣಿ:

ಈ ಸರಣಿಯಲ್ಲಿ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ 5 ಟಿ20, 5 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಟಿ20 ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಕ್ರೀಡಾಂಗಣ ಮತ್ತು ಸ್ಥಳ ಸಮಯ (IST)
1ನೇ ಟಿ20 ಅಕ್ಟೋಬರ್ 22, ಗುರುವಾರ ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್ ಮಧ್ಯಾಹ್ನ 1:30
2ನೇ ಟಿ20 ಅಕ್ಟೋಬರ್ 24, ಶನಿವಾರ ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್ ಮಧ್ಯಾಹ್ನ 1:30
3ನೇ ಟಿ20 ಅಕ್ಟೋಬರ್ 27, ಮಂಗಳವಾರ ಹೆನ್ರಿ ಸ್ಟೇಡಿಯಂ (ಸ್ಕೈ ಸ್ಟೇಡಿಯಂ), ವೆಲ್ಲಿಂಗ್ಟನ್ ಮಧ್ಯಾಹ್ನ 1:30
4ನೇ ಟಿ20 ಅಕ್ಟೋಬರ್ 30, ಶುಕ್ರವಾರ ಇಡನ್ ಪಾರ್ಕ್, ಆಕ್ಲೆಂಡ್ ಮಧ್ಯಾಹ್ನ 1:30
5ನೇ ಟಿ20 ನವೆಂಬರ್ 01, ಭಾನುವಾರ ಸೆಡನ್ ಪಾರ್ಕ್, ಹ್ಯಾಮಿಲ್ಟನ್ ಮಧ್ಯಾಹ್ನ 1:30

ಏಕದಿನ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಕ್ರೀಡಾಂಗಣ ಮತ್ತು ಸ್ಥಳ ಸಮಯ (IST)
1ನೇ ಏಕದಿನ ನವೆಂಬರ್ 04, ಬುಧವಾರ ಇಡನ್ ಪಾರ್ಕ್, ಆಕ್ಲೆಂಡ್ ಮುಂಜಾನೆ 6:30
2ನೇ ಏಕದಿನ ನವೆಂಬರ್ 07, ಶನಿವಾರ ಹೆನ್ರಿ ಸ್ಟೇಡಿಯಂ, ವೆಲ್ಲಿಂಗ್ಟನ್ ಮುಂಜಾನೆ 6:30
3ನೇ ಏಕದಿನ ನವೆಂಬರ್ 10, ಮಂಗಳವಾರ ಸೆಡನ್ ಪಾರ್ಕ್, ಹ್ಯಾಮಿಲ್ಟನ್ ಮುಂಜಾನೆ 6:30
4ನೇ ಏಕದಿನ ನವೆಂಬರ್ 13, ಶುಕ್ರವಾರ ಬೇ ಓವಲ್, ಮೌಂಟ್ ಮೌಂಗನುಯಿ ಮುಂಜಾನೆ 6:30
5ನೇ ಏಕದಿನ ನವೆಂಬರ್ 15, ಭಾನುವಾರ ಬೇ ಓವಲ್, ಮೌಂಟ್ ಮೌಂಗನುಯಿ ಮುಂಜಾನೆ 6:30

ಟೆಸ್ಟ್ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಕ್ರೀಡಾಂಗಣ ಮತ್ತು ಸ್ಥಳ ಸಮಯ (IST)
1ನೇ ಟೆಸ್ಟ್ ನವೆಂಬರ್ 19 ರಿಂದ 23 ಸೆಲ್ಲೋ ಬೇಸಿನ್ ರಿಸರ್ವ್, ವೆಲ್ಲಿಂಗ್ಟನ್ ಮುಂಜಾನೆ 3:30
2ನೇ ಟೆಸ್ಟ್ ನವೆಂಬರ್ 27 ರಿಂದ ಡಿಸೆಂಬರ್ 01 ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್ ಮುಂಜಾನೆ 3:30

ಇದನ್ನೂ ಓದಿ: ವುಮೆನ್ಸ್ ಏಷ್ಯಾಕಪ್ ಸೆಮಿಫೈನಲ್ ವೇಳಾಪಟ್ಟಿ ಪ್ರಕಟ

ಒಟ್ಟಿನಲ್ಲಿ ಹೇಳುವುದಾದರೆ, ಸರಣಿ ಆರಂಭಕ್ಕೆ ಇನ್ನೂ ಹಲವು ವಾರಗಳು ಬಾಕಿ ಇರುವಾಗಲೇ ಕಿವೀಸ್ ನಾಡಿನಲ್ಲಿ ಕ್ರಿಕೆಟ್ ಫೀವರ್​ ಗರಿಷ್ಠ ಮಟ್ಟ ತಲುಪಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಬ್ಯಾಟಿಂಗ್ ಅಬ್ಬರ ಹಾಗೂ ನ್ಯೂಝಿಲೆಂಡ್‌ನ ಹಸಿರು ಪಿಚ್‌ಗಳಲ್ಲಿನ ರೋಚಕ ಹೋರಾಟವನ್ನು ಕಣ್ಣುಂಬಿಕೊಳ್ಳಲು ಜಗತ್ತಿನಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ. ಟಿಕೆಟ್‌ಗಳ ಈ ಭಾರಿ ಬೇಡಿಕೆಯನ್ನು ನೋಡಿದರೆ, ಈ ಸರಣಿಯ ಬಹುತೇಕ ಪಂದ್ಯಗಳು ಹೌಸ್‌ಫುಲ್ ಸ್ಟೇಡಿಯಂನಲ್ಲಿ ನಡೆಯುವುದು ಈಗಲೇ ಗ್ಯಾರಂಟಿ ಆದಂತಿದೆ.

Follow Us
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ