ಮಹಾ ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕುಂಭಾಭಿಷೇಕದ ಹಿನ್ನೆಲೆಯಲ್ಲಿ ದೇವಾಲಯದ ಪ್ರಸಿದ್ಧ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ರಾಜಗೋಪುರಗಳು ಹಾಗೂ ಅಮ್ಮನವರ (ಮೀನಾಕ್ಷಿ ದೇವಿ) ಸನ್ನಿಧಿಯ ಗೋಪುರಕ್ಕೆ ನೂತನವಾಗಿ ಬಣ್ಣ ಬಳಿಯಲಾಗಿದ್ದು ನವವಧುವಿನಂತೆ ಶೃಂಗರಿಸಲಾಗಿದೆ. ರಾತ್ರಿಯ ವೇಳೆಯಲ್ಲಿ ಈ ಎಲ್ಲಾ ಗೋಪುರಗಳು ಕಣ್ಣುಕೋರೈಸುವ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಹಲವು ವರ್ಷಗಳ ನಂತರ ನಡೆಯುತ್ತಿರುವ ಈ ಬೃಹತ್ ಕುಂಭಾಭಿಷೇಕ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಮಧುರೈ, ಸೆಪ್ಟೆಂಬರ್ 8: ತಮಿಳುನಾಡಿನ ಐತಿಹಾಸಿಕ ಹಾಗೂ ಜಗತ್ಪ್ರಸಿದ್ಧ ಮಧುರೈ ‘ಅರುಳ್ಮಿಗು ಮೀನಾಕ್ಷಿ ಸುಂದರೇಶ್ವರರ್’ ದೇವಾಲಯದ ಮಹಾ ಕುಂಭಾಭಿಷೇಕ ಮಹೋತ್ಸವವು ಸೆಪ್ಟೆಂಬರ್ 17ರಂದು ವೈಭವೋಪೇತವಾಗಿ ನೆರವೇರಲಿದೆ. ಈ ಧಾರ್ಮಿಕ ಮಹೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ಸಾಂಪ್ರದಾಯಿಕ ಯಾಗಶಾಲೆ ಪೂಜಾ ವಿಧಿವಿಧಾನಗಳು ಅಧಿಕೃತವಾಗಿ ಚಾಲನೆ ಪಡೆದುಕೊಂಡಿವೆ. ಹಾಗೇ, ಮೀನಾಕ್ಷಿ ದೇವಸ್ಥಾನಕ್ಕೆ ಹೊಸ ಪೇಂಟಿಂಗ್ ಮಾಡಲಾಗಿದ್ದು, ದೇವಾಲಯ ಇನ್ನಷ್ಟು ಕಂಗೊಳಿಸುತ್ತಿದೆ.
ಕುಂಭಾಭಿಷೇಕದ ಹಿನ್ನೆಲೆಯಲ್ಲಿ ದೇವಾಲಯದ ಪ್ರಸಿದ್ಧ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ರಾಜಗೋಪುರಗಳು ಹಾಗೂ ಅಮ್ಮನವರ (ಮೀನಾಕ್ಷಿ ದೇವಿ) ಸನ್ನಿಧಿಯ ಗೋಪುರಕ್ಕೆ ನೂತನವಾಗಿ ಬಣ್ಣ ಬಳಿಯಲಾಗಿದ್ದು ನವವಧುವಿನಂತೆ ಶೃಂಗರಿಸಲಾಗಿದೆ. ರಾತ್ರಿಯ ವೇಳೆಯಲ್ಲಿ ಈ ಎಲ್ಲಾ ಗೋಪುರಗಳು ಕಣ್ಣುಕೋರೈಸುವ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಹಲವು ವರ್ಷಗಳ ನಂತರ ನಡೆಯುತ್ತಿರುವ ಈ ಬೃಹತ್ ಕುಂಭಾಭಿಷೇಕ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ