ವಾಸುಕಿಯ ಪ್ರತಿಭೆ ಕೊಂಡಾಡಿದ ಸಂದೀಪ್ ರೆಡ್ಡಿ ವಂಗಾ, ವಿಜಯ್
ವಾಸುಕಿ ವೈಭವ್, ಕನ್ನಡದ ಜನಪ್ರಿಯ, ಪ್ರತಿಭಾವಂತ ಯುವ ಸಂಗೀತ ನಿರ್ದೇಶಕ ಮತ್ತು ಗಾಯಕ. ಕನ್ನಡಕ್ಕೆ ಹಲವು ಅದ್ಭುತ ಹಾಡುಗಳನ್ನು ವಾಸುಕಿ ವೈಭವ್ ನೀಡಿದ್ದಾರೆ. ಆದರೆ ಅವರ ಪ್ರತಿಭೆಗೆ ತಕ್ಕುದಾದಷ್ಟು ಯಶಸ್ಸು, ಗುರುತು, ಗೌರವಗಳು ಕನ್ನಡದಲ್ಲಿ ಈ ವರೆಗೆ ಲಭಿಸಿಲ್ಲ ಎಂದೇ ಹೇಳಬೇಕು. ಆದರೆ ತೆಲುಗು ಚಿತ್ರರಂಗದಲ್ಲಿ ವಾಸುಕಿ ಕಾಲಿಟ್ಟ ಕೂಡಲೇ ಅವರಿಗೆ ಗುರುತು, ಖ್ಯಾತಿ ದೊರಕುತ್ತಿದೆ.

ಮುಖ್ಯಾಂಶಗಳು
- ವಾಸುಕಿ ವೈಭವ ಜನಪ್ರಿಯ ಸಂಗೀತ ನಿರ್ದೇಶಕ
- ಸಂದೀಪ್ ರೆಡ್ಡಿ ವಂಗಾ, ವಿಜಯ್ ದೇವರಕೊಂಡ ಕೊಂಡಾಡಿದ್ದಾರೆ.
- ವಾಸುಕಿ ಅವರಿಗೆ ತೆಲುಗಿನಲ್ಲಿ ಸಖತ್ ಬೇಡಿಕೆ ಗಿಟ್ಟಲಿದೆಯಂತೆ
ವಾಸುಕಿ ವೈಭವ್ ಕನ್ನಡದ ಪ್ರತಿಭಾವಂತ ಯುವ ಗಾಯಕ ಮತ್ತು ಸಂಗೀತ ನಿರ್ದೇಶಕ. ಕೆಲವು ಅದ್ಭುತ ಹಾಡುಗಳನ್ನು ವಾಸುಕಿ ನೀಡಿದ್ದಾರೆ. ವಾಸುಕಿ ಅವರ ಪ್ರತಿಭೆ ಇದೀಗ ಕನ್ನಡದ ಗಡಿ ತೆಲುಗಿಗೆ ಸಹ ತಲುಪಿದೆ. ಈ ಹಿಂದೆಯೇ ಅವರು ಕನ್ನಡದ ‘ರಾಮಾ ರಾಮಾ ರೇ’ ಸಿನಿಮಾದ ತೆಲುಗು ರೀಮೇಕ್ಗೆ ಸಂಗೀತ ನೀಡಿದ್ದರು. ಆದರೆ ಇದೀಗ ತೆಲುಗಿಗೆ ದೊಡ್ಡ ಮಟ್ಟದಲ್ಲಿ ಕಾಲಿರಿಸಿದ್ದಾರೆ. ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾಕ್ಕೆ ವಾಸುಕಿ ವೈಭವ್ ಹಾಡು ಮಾಡಿಕೊಟ್ಟಿದ್ದು, ಆ ಹಾಡು ನಿರ್ದೇಶಕ ಸಂದೀಪ್ ಅವರಿಗೆ ಬಹಳ ಹಿಡಿಸಿದೆಯಂತೆ.
ಇತ್ತೀಚೆಗಷ್ಟೆ ಸಂದೀಪ್ ರೆಡ್ಡಿ ವಂಗಾ, ತೆಲುಗಿನ ‘ರೋಮಾಂಚಕಂ’ಸಿನಿಮಾದ ಪ್ರಚಾರಕ್ಕಾಗಿ ಸಂದರ್ಶನೊಂದರಲ್ಲಿ ಭಾಗಿ ಆಗಿದ್ದರು. ‘ರೋಮಾಂಚಕಂ’ ಸಿನಿಮಾಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಸಿನಿಮಾದ ಬಗ್ಗೆ ಮಾತನಾಡುತ್ತಾ ಮಾತನಾಡಿದ ಸಂದೀಪ್ ರೆಡ್ಡಿ ವಂಗಾ, ‘ವಾಸುಕಿ ನಮ್ಮ ‘ಸ್ಪಿರಿಟ್’ ಸಿನಿಮಾಕ್ಕೂ ಒಂದು ಟ್ರ್ಯಾಕ್ ಕೊಟ್ಟಿದ್ದಾರೆ. ಅದ್ಭುತವಾಗಿದೆ ಆ ಟ್ರ್ಯಾಕ್, ನಮ್ಮ ಸಿನಿಮಾ ರಿಲೀಸ್ ಆದ ಬಳಿಕ ವಾಸುಕಿ ವೈಭವ್ ಬಹಳ ಬ್ಯುಸಿ ಆಗಿ ಬಿಡುತ್ತಾರೆ’ ಎಂದಿದ್ದಾರೆ. ಜೊತೆಗೆ ‘ವಾಸುಕಿ ಬಹಳ ಪ್ರತಿಭಾವಂತ ಕಲಾವಿದ’ ಎಂದು ಸಹ ಕೊಂಡಾಡಿದ್ದಾರೆ.
ಇನ್ನು ‘ರೋಮಾಂಚಕಂ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ನಲ್ಲಿ ಮಾತನಾಡಿದ ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ, ವಾಸುಕಿ ವೈಭವ್ ಅವರ ಹಾಡುಗಳನ್ನು ಕೊಂಡಾಡಿದ್ದಾರೆ. ವಾಸುಕಿ, ನಿಮ್ಮ ಹಾಡುಗಳು ನಮಗೆ ಬಹಳ ಇಷ್ಟ. ಅದರಲ್ಲೂ ನನ್ನ ಸಹೋದರ ಆನಂದ್ ಅಂತೂ ನಿಮ್ಮ ಫ್ಯಾನ್ ಆಗಿದ್ದಾರೆ. ಮನೆಯಲ್ಲಿ ಪದೇ-ಪದೇ ನಿಮ್ಮ ಹಾಡನ್ನು ಹಾಕುತ್ತಿರುತ್ತಾನೆ ಎಂದಿದ್ದಾರೆ.
ಇದನ್ನೂ ಓದಿ:‘ಕೋಟಿ’ ಹಾಡಿನಲ್ಲಿ ಯೋಗರಾಜ್ ಭಟ್, ವಾಸುಕಿ ವೈಭವ್, ಅರ್ಮಾನ್ ಮಲಿಕ್ ಸಂಗಮ
ವಾಸುಕಿ ವೈಭವ್ ಪ್ರತಿಭಾವಂತ ಗಾಯಕ ಮತ್ತು ಸಂಗೀತ ನಿರ್ದೇಶಕ. ಹಲವು ಅದ್ಭುತ ಹಾಡುಗಳನ್ನು ಅವರು ಕನ್ನಡಕ್ಕೆ ನೀಡಿದ್ದಾರೆ. ಆದರೆ ಅವರ ಪ್ರತಿಭೆಗೆ ತಕ್ಕುದಾದಷ್ಟು ಯಶಸ್ಸು, ಗುರುತು, ಗೌರವಗಳು ಕನ್ನಡದಲ್ಲಿ ಈ ವರೆಗೆ ಲಭಿಸಿಲ್ಲ ಎಂದೇ ಹೇಳಬೇಕು. ಆದರೆ ತೆಲುಗು ಚಿತ್ರರಂಗದಲ್ಲಿ ವಾಸುಕಿ ಕಾಲಿಟ್ಟ ಕೂಡಲೇ ಅವರಿಗೆ ಗುರುತು, ಖ್ಯಾತಿ ದೊರಕುತ್ತಿದೆ. ಸಂದೀಪ್ ರೆಡ್ಡಿ ವಂಗಾ ಅಂಥಹಾ ನಿರ್ದೇಶಕರೇ, ‘ವಾಸುಕಿ ಬಹಳ ಬೇಡಿಕೆಯ ಕಲಾವಿದ ಆಗಲಿದ್ದಾರೆ’ ಎಂದಿರುವುದು ನಿಜಕ್ಕೂ ದೊಡ್ಡ ಪ್ರಶಂಸೆ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




