AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡುಗಡೆಗೆ ಮೂರು ದಿನ ಮೊದಲೇ 10 ಕೋಟಿ ಗಳಿಸಿದ ‘ದೃಶ್ಯಂ 3’

ಅತಿ ಹೆಚ್ಚು ಭಾಷೆಗೆ ರೀಮೇಕ್ ಆದ ಭಾರತೀಯ ಸಿನಿಮಾ ಎನಿಸಿಕೊಂಡಿದೆ ‘ದೃಶ್ಯಂ’. ಅಂದಹಾಗೆ ಈ ವರೆಗೆ ‘ದೃಶ್ಯಂ’ ಸಿನಿಮಾದ ಮೂರು ಸರಣಿಗಳು ರಿಲೀಸ್ ಆಗಿವೆ. ಇತ್ತೀಚೆಗೆ ‘ದೃಶ್ಯಂ 3’ ಸಿನಿಮಾ ರಿಲೀಸ್ ಆಗಿ ಒಳ್ಳೆಯ ಗಳಿಕೆ ಮಾಡಿತ್ತು. ಇದೀಗ ಹಿಂದಿಯಲ್ಲಿ ‘ದೃಶ್ಯಂ 3’ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾ ಬಿಡುಗಡೆಗೆ ಮೊದಲೇ ಒಳ್ಳೆಯ ಮೊತ್ತ ಗಳಿಕೆ ಮಾಡಿದೆ.

ಬಿಡುಗಡೆಗೆ ಮೂರು ದಿನ ಮೊದಲೇ 10 ಕೋಟಿ ಗಳಿಸಿದ ‘ದೃಶ್ಯಂ 3’
Drishyam 3
ಮಂಜುನಾಥ ಸಿ.
|

Updated on: Sep 29, 2026 | 3:29 PM

Share

ಮುಖ್ಯಾಂಶಗಳು

  • ಹಿಂದಿ ಸಿನಿಮಾ ‘ದೃಶ್ಯಂ 3’ ರಿಲೀಸ್ ಆಗಲಿದೆ
  • ಅಜಯ್ ದೇವಗನ್ ನಟನೆಯ ‘ದೃಶ್ಯಂ 3’ ಸಿನಿಮಾ
  • ಬಿಡುಗಡೆಗೆ ಮುನ್ನ 10 ಕೋಟಿ ಗಳಿಕೆ ಮಾಡಿದೆ

‘ದೃಶ್ಯಂ’ ಮಲಯಾಳಂ ಜನಪ್ರಿಯ ಸಿನಿಮಾ ಸರಣಿ. 2013 ರಲ್ಲಿ ಬಿಡುಗಡೆ ಆಗಿದ್ದ ಮೋಹನ್​​ಲಾಲ್ ನಟನೆಯ ‘ದೃಶ್ಯಂ’ ದಾಖಲೆ ಬರೆದಿತ್ತು. ಅತಿ ಹೆಚ್ಚು ಭಾಷೆಗೆ ರೀಮೇಕ್ ಆದ ಭಾರತೀಯ ಸಿನಿಮಾ ಎನಿಸಿಕೊಂಡಿದೆ ‘ದೃಶ್ಯಂ’. ಅಂದಹಾಗೆ ಈ ವರೆಗೆ ‘ದೃಶ್ಯಂ’ ಸಿನಿಮಾದ ಮೂರು ಸರಣಿಗಳು ರಿಲೀಸ್ ಆಗಿವೆ. ಇತ್ತೀಚೆಗೆ ‘ದೃಶ್ಯಂ 3’ ಸಿನಿಮಾ ರಿಲೀಸ್ ಆಗಿ ಒಳ್ಳೆಯ ಗಳಿಕೆ ಮಾಡಿತ್ತು. ಇದೀಗ ಹಿಂದಿಯಲ್ಲಿ ‘ದೃಶ್ಯಂ 3’ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾ ಬಿಡುಗಡೆಗೆ ಮೊದಲೇ ಒಳ್ಳೆಯ ಮೊತ್ತ ಗಳಿಕೆ ಮಾಡಿದೆ.

2015 ರಿಂದಲೂ ಮಲಯಾಳಂ ‘ದೃಶ್ಯಂ’ ಸಿನಿಮಾಗಳನ್ನು ಅಜಯ್ ದೇವಗನ್ ನಾಯಕತ್ವದಲ್ಲಿ ಅದೇ ಹೆಸರಿನಲ್ಲಿ ಹಿಂದಿಯಲ್ಲಿ ರೀಮೇಕ್ ಮಾಡುತ್ತಾ ಬರಲಾಗುತ್ತಿದ್ದು ಇದೀಗ ‘ದೃಶ್ಯಂ 3’ ಸಿನಿಮಾದ ರೀಮೇಕ್ ಮಾಡಲಾಗಿದ್ದು, ಸಿನಿಮಾ ಅಕ್ಟೋಬರ್ 2 ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಮೂರು ದಿನಗಳು ಇರುವಾಗಲೇ ಸಿನಿಮಾದ ಮುಂಗಡ ಬುಕಿಂಗ್ ಜೋರಾಗಿದ್ದು, ಈಗಾಗಲೇ ಸಿನಿಮಾ 10 ಕೋಟಿ ಗೂ ಹೆಚ್ಚು ಮೊತ್ತವನ್ನು ಅಡ್ವಾನ್ಸ್ ಬುಕಿಂಗ್ ಮಾತ್ರದಿಂದಲೇ ಗಳಿಕೆ ಮಾಡಿದೆ.

ಮಲಯಾಳಂನ ‘ದೃಶ್ಯಂ 3’ ಸಿನಿಮಾದ ಚಿತ್ರೀಕರಣ ಶುರುವಾದಲೇ ಹಿಂದಿ ‘ದೃಶ್ಯಂ 3’ಸಿನಿಮಾದ ಪ್ರೀ ಪ್ರೊಡಕ್ಷನ್ ಆರಂಭವಾಗಿತ್ತು. ಆದರೆ ಮಲಯಾಳಂನ ‘ದೃಶ್ಯಂ 3’ ಸಿನಿಮಾಕ್ಕೂ ಹಿಂದಿಯ ‘ದೃಶ್ಯಂ 3’ ಸಿನಿಮಾಕ್ಕೂ ಸಾಕಷ್ಟು ಭಿನ್ನತೆ ಇರಲಿದೆ ಎಂದು ಚಿತ್ರತಂಡ ಈಗಾಗಲೇ ಹೇಳಿದೆ. ಹಿಂದಿಯಲ್ಲಿ ‘ದೃಶ್ಯಂ 3’ ಮೂಲಕ ಈ ಸಿನಿಮಾದ ಕತೆ ಪೂರ್ಣಗೊಳ್ಳಲಿದೆ. ಹಾಗಾಗಿ ‘ದೃಶ್ಯಂ 3’ ಸಿನಿಮಾಕ್ಕೆ ‘ದಿ ಕನ್​​ಕ್ಲೂಷನ್’ ಎಂಬ ಅಡಿಬರಹ ಇಡಲಾಗಿದೆ.

ಇದನ್ನೂ ಓದಿ:‘ಅವೇಂಜರ್ಸ್’ ರೀ ರಿಲೀಸ್: ಗಳಿಕೆಯಲ್ಲಿ ಮತ್ತೆ ದಾಖಲೆ ಬರೆದ ಸಿನಿಮಾ

‘ದೃಶ್ಯಂ’ ಸಿನಿಮಾನಲ್ಲಿ ಯಥಾವತ್ತು ಅಜಯ್ ದೇವಗನ್, ಶ್ರೆಯಾ ಶರಣ್ ಅವರುಗಳು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಟಬು ಮತ್ತು ಜಯದೀಪ್ ಅಲ್ಹಾವತ್ ಸಹ ಇದ್ದಾರೆ. ‘ದೃಶ್ಯಂ 2’ ಸಿನಿಮಾನಲ್ಲಿ ಅಕ್ಷಯ್ ಖನ್ನಾ ನಟಿಸಿದ್ದ ಪಾತ್ರದಲ್ಲಿ ಜಯದೀಪ್ ಅಲ್ಹಾವತ್ ನಟಿಸಿದ್ದಾರೆ. ಮಲಯಾಳಂ ಸಿನಿಮಾಗಿಂತಲೂ ಭಿನ್ನವಾದ ಕತೆ ಈ ಸಿನಿಮಾನಲ್ಲಿ ಇರಲಿದ್ದು, ಸಿನಿಮಾ ಅನ್ನು ಅಭಿಷೇಕ್ ಪಾಠಕ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More