ಗಾಂಧಿ ಜಯಂತಿಗೆ ಒಟಿಟಿಗೆ ಬರಲಿದೆ ಡಾಲಿಯ ‘ಮದರ್ ಪ್ರಾಮಿಸ್’
‘ಮದರ್ ಪ್ರಾಮಿಸ್’, ಕ್ರೈಮ್, ಕಾಮಿಡಿ ಮತ್ತು ತಾಯಿ-ಮಗನ ಅಪರೂಪದ ಭಾವನಾತ್ಮಕ ಬಂಧವನ್ನು ಬಿಂಬಿಸುವ ವಿಭಿನ್ನ ಡಾರ್ಕ್ ಕಾಮಿಡಿ ಸಿನಿಮಾ ಆಗಿದೆ. ಚಿತ್ರಮಂದಿರಗಳಲ್ಲಿ ಸದ್ದು ಮಾಡಿದ ಬಳಿಕ, ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ಆಗಿರುವ ‘ಜೀ5 ಕನ್ನಡ’ದಲ್ಲಿ ಈ ಸಿನಿಮಾವನ್ನು ಅಕ್ಟೋಬರ್ 2ರ ಗಾಂಧಿ ಜಯಂತಿಯ ವಿಶೇಷ ದಿನದಂದು ಅಧಿಕೃತವಾಗಿ ಪ್ರಸಾರ ಆರಂಭಿಸಲಿದೆ.

ಮುಖ್ಯಾಂಶಗಳು
- ಡಾಲಿ ಧನಂಜಯ್ ನಟನೆಯ ‘ಮದರ್ ಪ್ರಾಮಿಸ್’ ಸಿನಿಮಾ
- ‘ಮದರ್ ಪ್ರಾಮಿಸ್’ ಸಿನಿಮಾ ಒಟಿಟಿಗೆ ಬರುತ್ತಿದೆ
- ‘ಮದರ್ ಪ್ರಾಮಿಸ್’ ಸಿನಿಮಾ ಅನ್ನು ಜೀ5ನಲ್ಲಿ ರಿಲೀಸ್ ಆಗಲಿದೆ.
ಡಾಲಿ ಧನಂಜಯ್ ನಿರ್ಮಾಣ ಮಾಡಿ ಮೈಸೂರು ಪೂರ್ಣ, ಅದಿತಿ ಸಾಗರ್ ನಟಿಸಿರುವ ‘ಹೆಗ್ಗಣ ಮುದ್ದು’ ಕಳೆದ ವಾರವಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದವರೆಲ್ಲ ಧನಾತ್ಮಕ ವಿಮರ್ಶೆಗಳನ್ನು ನೀಡಿದ್ದಾರೆ. ಹೀಗಿರುವಾಗ ಡಾಲಿ ಅವರೇ ನಿರ್ಮಾಣ ಮಾಡಿ ಖುದ್ದು ನಟನೆ ಸಹ ಮಾಡಿರುವ ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ‘ಮದರ್ ಪ್ರಾಮಿಸ್’ ಒಟಿಟಿಗೆ ಬರುತ್ತಿದೆ. ಕೆಲ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಆಗಿದ್ದ ಈ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದ್ದು, ಹೆಚ್ಚು ಪ್ರೇಕ್ಷಕರು ತಲುಪಲು ರೆಡಿಯಾಗಿದೆ.
‘ಮದರ್ ಪ್ರಾಮಿಸ್’, ಕ್ರೈಮ್, ಕಾಮಿಡಿ ಮತ್ತು ತಾಯಿ-ಮಗನ ಅಪರೂಪದ ಭಾವನಾತ್ಮಕ ಬಂಧವನ್ನು ಬಿಂಬಿಸುವ ವಿಭಿನ್ನ ಡಾರ್ಕ್ ಕಾಮಿಡಿ ಸಿನಿಮಾ ಆಗಿದೆ. ಚಿತ್ರಮಂದಿರಗಳಲ್ಲಿ ಸದ್ದು ಮಾಡಿದ ಬಳಿಕ, ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ಆಗಿರುವ ‘ಜೀ5 ಕನ್ನಡ’ದಲ್ಲಿ ಈ ಸಿನಿಮಾವನ್ನು ಅಕ್ಟೋಬರ್ 2ರ ಗಾಂಧಿ ಜಯಂತಿಯ ವಿಶೇಷ ದಿನದಂದು ಅಧಿಕೃತವಾಗಿ ಪ್ರಸಾರ ಆರಂಭಿಸಲಿದೆ.
ಬೆಂಗಳೂರಿನ ಕಾಲ್ಪನಿಕ ಭೂಗತ ಲೋಕದ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಈ ಕಥೆಯು, ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವ ‘ರೋಸ್ಸಿ’ ಎನ್ನುವ ವಿಚಿತ್ರ ಸ್ವಭಾವದ ಜೂಜುಕೋರನ ಸುತ್ತ ಸಾಗುತ್ತದೆ. ಈತನ ಎಡವಟ್ಟುಗಳು ನಗರದ ಪ್ರಭಾವಿ ಡಾನ್‌ಗಳು, ಕಳ್ಳಸಾಗಣೆದಾರರು ಮತ್ತು ಕುಖ್ಯಾತ ವ್ಯಕ್ತಿಗಳ ಜೊತೆ ಭೀಕರ ಬೆನ್ನಟ್ಟುವಿಕೆಗೆ ಕಾರಣವಾಗುತ್ತವೆ. ಈ ಹೈ-ವೋಲ್ಟೇಜ್ ಸಂಘರ್ಷದ ಮಧ್ಯೆ ಅನಿರೀಕ್ಷಿತವಾಗಿ ನಾಯಕನ ತಾಯಿಯೂ ಸಿಲುಕಿಕೊಳ್ಳುವುದರಿಂದ ಕಥೆಗೆ ಹೊಸ ತಿರುವು ಸಿಗುತ್ತದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹಾಗೂ ಕೌಟುಂಬಿಕ ಜವಾಬ್ದಾರಿಯನ್ನು ಕಾಪಾಡಿಕೊಳ್ಳಲು ಒಬ್ಬ ಮಗ ಎಷ್ಟೆಲ್ಲಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಚಿತ್ರದಲ್ಲಿ ರೋಚಕವಾಗಿ ಕಟ್ಟಿಕೊಡಲಾಗಿದೆ.
ಇದನ್ನೂ ಓದಿ:‘ಖಾಕಿ’ ಧರಿಸಿದರೆ ಜೋಶ್ ಬರುತ್ತೆ: ಪೊಲೀಸರ ಬಗ್ಗೆ ಡಾಲಿ ಧನಂಜಯ್ ಮಾತು
ಈ ಚಿತ್ರದಲ್ಲಿ ಧನಂಜಯ ಅವರೊಂದಿಗೆ ಪೂರ್ಣಚಂದ್ರ ಮೈಸೂರು, ಹಿರಿಯ ನಟಿಯರಾದ ವಿನಯಾ ಪ್ರಸಾದ್, ಗೀತಾ, ಹಾಗೂ ಪ್ರತಿಭಾವಂತ ನಟರಾದ ನಾಗಭೂಷಣ ಎನ್.ಎಸ್., ಚಿ ಗುರುದತ್, ಮಹಾದೇವ್ ಪ್ರಸಾದ್, ನರೇಶ್ ಡಿಂಗ್ರಿ ಮತ್ತು ಶ್ರೀವತ್ಸ ಶ್ಯಾಮ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಗ್ಯಾಂಗ್‌ಸ್ಟರ್ ಹಿನ್ನೆಲೆ, ಅನಿರೀಕ್ಷಿತ ತಿರುವುಗಳು ಮತ್ತು ಹ್ಯೂಮರ್ ಇದ್ದರೂ, ಇದರ ಒಡಲಿನಲ್ಲಿರುವ ತಾಯಿ-ಮಗನ ಸೆಂಟಿಮೆಂಟ್ ಇಡೀ ಸಿನಿಮಾಗೆ ಭದ್ರವಾದ ಬುನಾದಿಯಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




