AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ಈಗ 6 ಪ್ಯಾಕ್ ಇಲ್ಲ’: ನೇರವಾಗಿ ಒಪ್ಪಿಕೊಂಡ ಸಲ್ಮಾನ್ ಖಾನ್

ಕಳೆದ ವಾರದ ‘ಬಿಗ್ ಬಾಸ್ 20’ ಕಾರ್ಯಕ್ರಮದ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಗುಡುಗಿದ್ದರು. ಟ್ರೋಲರ್​ಗಳಿಗೆ ಸಲ್ಲು ಕ್ಲಾಸ್ ತೆಗೆದುಕೊಂಡಿದ್ದರು. ಆ ವೇಳೆ ಕೋಪದಲ್ಲಿ ಅವರು ಶರ್ಟ್ ಬಿಚ್ಚಿದ್ದರು. ಆ ಘಟನೆಯ ಬಗ್ಗೆ ಈಗ ಅವರು ಮತ್ತೆ ಮಾತನಾಡಿದ್ದಾರೆ.

‘ನನಗೆ ಈಗ 6 ಪ್ಯಾಕ್ ಇಲ್ಲ’: ನೇರವಾಗಿ ಒಪ್ಪಿಕೊಂಡ ಸಲ್ಮಾನ್ ಖಾನ್
Salman Khan Image Credit source: colorstv
ಮದನ್​ ಕುಮಾರ್​
|

Updated on: Sep 29, 2026 | 3:34 PM

Share

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ‘ಬಿಗ್ ಬಾಸ್ 20’ ವೇದಿಕೆಯಲ್ಲಿ ಶರ್ಟ್‌ಲೆಸ್ ಆಗಿ ಮಿಂಚಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅವರು, ತಾವು ಶರ್ಟ್ ಬಿಚ್ಚಿದ್ದು ಬಾಡಿ ಪ್ರದರ್ಶಿಸುವುದಕ್ಕಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ತಾವು ಇನ್ನೂ ಫಿಟ್ ಆಗಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.

ಕಳೆದ ವಾರ ಬಿಗ್ ಬಾಸ್ ವೇದಿಕೆಯಲ್ಲಿ ಸಾಮಾಜಿಕ ಜಾಲತಾಣಗಳ ಟ್ರೋಲರ್‌ಗಳಿಗೆ ತಕ್ಕ ಉತ್ತರ ನೀಡುವ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ಶರ್ಟ್ ತೆರೆದು ತಮ್ಮ ಬಾಡಿ ಹೇಗಿದೆ ಎಂದು ತೋರಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಬಾಡಿ ಶೇಮಿಂಗ್ ಮಾಡುವವರ ವಿಕೃತ ಮನಸ್ಥಿತಿಯನ್ನು ಪ್ರಶ್ನಿಸಲು ಅವರು ಈ ಹಂತಕ್ಕೆ ಹೋಗಿದ್ದರು.

ಇತ್ತೀಚಿನ ಸಂಚಿಕೆಯಲ್ಲಿ ಈ ವೈರಲ್ ಪ್ರಸಂಗದ ಕುರಿತು ತಮಾಷೆಯಾಗಿ ಮಾತನಾಡಿದ ಸಲ್ಮಾನ್, ‘ನಾನು ಶರ್ಟ್ ತೆಗೆದದ್ದು ನನ್ನ ಬಳಿ ಈಗ ಸಿಕ್ಸ್ ಪ್ಯಾಕ್ ಇಲ್ಲ ಎಂಬುದನ್ನು ತೋರಿಸಲು. ನಾನು ಪೂರ್ತಿ ಫಿಟ್ ಆಗಿದ್ದೇನೆ ಎಂದು ಬಿಲ್ಡಪ್ ಕೊಡಲು ಆ ರೀತಿ ಮಾಡಲಿಲ್ಲ’ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಅವರು ಫಿಟ್ ಆಗಿ ಜನರ ಮುಂದೆ ಬರುವುದಾಗಿ ತಿಳಿಸಿದ್ದಾರೆ.

‘ಜನರಿಗೆ ನನ್ನ ಬಾಡಿ ಯಾಕೆ ಇಷ್ಟವಾಯಿತೋ ನನಗಂತೂ ಗೊತ್ತಿಲ್ಲ. ನಿಜ ಹೇಳಬೇಕೆಂದರೆ ನಾನಿನ್ನೂ ಫಿಟ್ ಆಗಿಲ್ಲ. ಮುಂದಿನ ಸಿನಿಮಾಗಾಗಿ ಬಾಡಿ ರೆಡಿ ಮಾಡಲು ನನಗಿನ್ನೂ 1ರಿಂದ 2 ತಿಂಗಳ ಕಾಲಾವಕಾಶ ಬೇಕಿದೆ. ಇದು ಇನ್ನೂ ‘ವರ್ಕ್ ಇನ್ ಪ್ರೋಗ್ರೆಸ್’ನಲ್ಲಿದೆ. ನಾನು ಫಿಟ್ ಆದ ಮೇಲೆ ತೋರಿಸಲಿಲ್ಲ, ಬದಲಾಗಿ ಅನ್‌ಫಿಟ್ ಆಗಿದ್ದಾಗಲೇ ತೋರಿಸಿದೆ’ ಎಂದು ಸಲ್ಮಾನ್ ಖಾನ್ ನಗುತ್ತಾ ವಿವರಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ 20: ಹಳೆಯ ದಾಖಲೆ ಮುರಿದ ಸಲ್ಮಾನ್ ಖಾನ್ ಶರ್ಟ್‌ಲೆಸ್ ಸಂಚಿಕೆ

‘ಜನರನ್ನು ಏಕೆ ಟ್ರೋಲ್ ಮಾಡುತ್ತೀರಿ? ಟ್ರೋಲ್ ಮಾಡುವ ಮನಸ್ಥಿತಿ ಏನು? ನನ್ನ ಮೇಲೂ ಈ ರೀತಿ ನಡೆದಿದೆ. ಬಾಯ್ ದಪ್ಪ ಆಗಿದ್ದಾನೆ ಎಂದು ಕಾಮೆಂಟ್ ಮಾಡುತ್ತಾರೆ. ಬನ್ನಿ, ಈಗ ನನ್ನನ್ನು ಟ್ರೋಲ್ ಮಾಡಿ’ ಎಂದು ಸವಾಲು ಎಸೆಯುತ್ತಾ ಸಲ್ಮಾನ್ ಖಾನ್ ಅವರು ತಮ್ಮ ಹ್ಯಾಟ್, ಜಾಕೆಟ್ ಮತ್ತು ಶರ್ಟ್ ತೆಗೆದು ಬಾಡಿ ಪ್ರದರ್ಶಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More