ಬಿಗ್ ಬಾಸ್ 20: ಹಳೆಯ ದಾಖಲೆ ಮುರಿದ ಸಲ್ಮಾನ್ ಖಾನ್ ಶರ್ಟ್‌ಲೆಸ್ ಸಂಚಿಕೆ
ಇತ್ತೀಚಿನ ಬಿಗ್ ಬಾಸ್ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಅವರು ಶರ್ಟ್‌ಲೆಸ್ ಆಗಿ ಕಾಣಿಸಿಕೊಂಡು ಗುಡುಗಿದ್ದರು. ಅದರ ಪರಿಣಾಮವಾಗಿ ಭರ್ಜರಿ ಟಿಆರ್ಪಿ ಸಿಕ್ಕಿದೆ. ಈ ಮೊದಲಿನ ಅನೇಕ ದಾಖಲೆಗಳನ್ನು ಈ ಸಂಚಿಕೆ ಮುರಿದಿದೆ. ವೀಕ್ಷಕರ ವಲಯದಲ್ಲಿ ಸಲ್ಮಾನ್ ಖಾನ್ ಅವರಿಗೆ ಯಾವ ಮಟ್ಟದ ಕ್ರೇಜ್ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ನಿರೂಪಣೆ ಮಾಡುವ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಹೈ-ವೋಲ್ಟೇಜ್ ಡ್ರಾಮಾಗೆ ಕೊರತೆಯೇ ಇರುವುದಿಲ್ಲ. ಇತ್ತೀಚೆಗೆ ‘ಬಿಗ್ ಬಾಸ್ ಸೀಸನ್ 20’ ರಿಯಾಲಿಟಿ ಶೋ ಅತ್ಯಂತ ಗ್ರ್ಯಾಂಡ್ ಆಗಿ ಆರಂಭವಾಗಿದ್ದು, ಕಿರುತೆರೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಬಾರಿಯ ಸೀಸನ್ ಪ್ರಸಾರವಾದ ಕೆಲವೇ ದಿನಗಳಲ್ಲಿ ಈ ಮೊದಲಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. ಆ ಮೂಲಕ ಇತ್ತೀಚಿನ ಅತ್ಯಂತ ದೊಡ್ಡ ರಿಯಾಲಿಟಿ ಶೋ ಆಗಿ ಇದು ಹೊರಹೊಮ್ಮಿದೆ. ಅದಕ್ಕೆ ಕಾರಣ ಆಗಿರುವುದು ಸಲ್ಮಾನ್ ಖಾನ್ ಅವರ ಶರ್ಟ್‌ಲೆಸ್ ಸಂಚಿಕೆ.
ವರದಿಗಳ ಪ್ರಕಾರ, ‘ಬಿಗ್ ಬಾಸ್ 20’ ಶೋನ ಇತ್ತೀಚಿನ ಸಂಚಿಕೆಯು ಭರ್ಜರಿ 2.1 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕ್ರಿಕೆಟ್ ಪಂದ್ಯಾವಳಿಗಳನ್ನು ಹೊರತುಪಡಿಸಿ, ಮನರಂಜನಾ ಕಾರ್ಯಕ್ರಮಗಳ ಪೈಕಿ ಇಷ್ಟು ವೀಕ್ಷಕರ ಸಂಖ್ಯೆಯನ್ನು ಪಡೆದ ಈ ಶೋ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದು ಸಲ್ಮಾನ್ ಖಾನ್ ಅವರ ಅದ್ಭುತ ಮಾಸ್ ಅಪೀಲ್ ಹಾಗೂ ಭಾರತೀಯ ಕಿರುತೆರೆಯಲ್ಲಿ ಅವರಿಗಿರುವ ಕ್ರೇಜ್‌ಗೆ ಸಾಕ್ಷಿಯಾಗಿದೆ.
ಟ್ರೋಲಿಗರಿಗೆ ಸಲ್ಮಾನ್ ಶರ್ಟ್‌ಲೆಸ್ ತಿರುಗೇಟು:
ಈ ಬಾರಿಯ ಶೋನಲ್ಲಿ ಅತ್ಯಂತ ಹೆಚ್ಚು ಚರ್ಚೆಯಾಗಿದ್ದು ಸಲ್ಮಾನ್ ಖಾನ್ ಅವರ ರೌದ್ರಾವತಾರ. ತಮಗೆ ಹಾಗೂ ಬಾಲಿವುಡ್ ತಾರೆಯರಾದ ಕತ್ರಿನಾ ಕೈಫ್ ಸೇರಿದಂತೆ ಇತರರಿಗೆ ನಿರಂತರವಾಗಿ ಟ್ರೋಲ್ ಮಾಡುತ್ತಿದ್ದವರಿಗೆ ಸಲ್ಮಾನ್ ಖಾನ್ ವೇದಿಕೆಯಲ್ಲೇ ಶರ್ಟ್ ಬಿಚ್ಚಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ತಮ್ಮದೇ ಶೈಲಿಯಲ್ಲಿ ಟ್ರೋಲಿಗರಿಗೆ ತರಾಟೆ ತೆಗೆದುಕೊಂಡ ಈ ವಿಡಿಯೋ ಕ್ಲಿಪ್‌ಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗಿವೆ.
ಸೀಸನ್‌ಗೆ 120 ಕೋಟಿ ಸಂಭಾವನೆ:
ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಬಿಗ್ ಬಾಸ್ ನಡೆಸಿಕೊಡುತ್ತಿರುವ ಸಲ್ಮಾನ್ ಖಾನ್, ಭಾರತೀಯ ಕಿರುತೆರೆಯಲ್ಲೇ ಅತ್ಯಂತ ದುಬಾರಿ ನಿರೂಪಕ ಎನಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ‘ಬಿಗ್ ಬಾಸ್ 20’ ಸೀಸನ್‌ಗಾಗಿ ಸಲ್ಮಾನ್ ಖಾನ್ ಅವರು ಬರೋಬ್ಬರಿ 120 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ವಾರ್ನಿಂಗ್ ಕೊಟ್ಟ ಬಳಿಕ ಕತ್ರಿನಾಗೆ ಕ್ಷಮೆ ಕೇಳಿದ ಪಾಕಿಸ್ತಾನಿ ಆರ್‌ಜೆ
ದೊಡ್ಡ ಮಟ್ಟದ ಓಪನಿಂಗ್ ಪಡೆಯುವ ಮೂಲಕ ‘ಬಿಗ್ ಬಾಸ್ 20’ ಕಾರ್ಯಕ್ರಮ ಭಾರತದ ನಂಬರ್ ಒನ್ ಎಂಟರ್‌ಟೇನ್‌ಮೆಂಟ್ ಬ್ರಾಂಡ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಆರಂಭದಲ್ಲೇ ಈ ಮಟ್ಟದ ಹೈಪ್ ಸೃಷ್ಟಿಸಿರುವುದರಿಂದ, ಮುಂದಿನ ದಿನಗಳಲ್ಲಿ ಈ ಸೀಸನ್ ಇನ್ನಷ್ಟು ರೋಚಕ ತಿರುವುಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




