AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್ ವಾರ್ನಿಂಗ್ ಕೊಟ್ಟ ಬಳಿಕ ಕತ್ರಿನಾಗೆ ಕ್ಷಮೆ ಕೇಳಿದ ಪಾಕಿಸ್ತಾನಿ ಆರ್‌ಜೆ

ಇತ್ತೀಚೆಗೆ ಅಂಬಾನಿ ಕುಟುಂಬ ಆಯೋಜಿಸಿದ್ದ ಗಣೇಶ ಚತುರ್ಥಿ ಆಚರಣೆಯಲ್ಲಿ ಕತ್ರಿನಾ ಕೈಫ್ ಅವರು ಪತಿ ವಿಕ್ಕಿ ಕೌಶಲ್ ಅವರೊಂದಿಗೆ ಭಾಗವಹಿಸಿದ್ದರು. ಈ ವೇಳೆ ಕತ್ರಿನಾ ಅವರ ದೇಹದ ತೂಕದ ಬಗ್ಗೆ ಆರ್‌ಜೆ ಇಜಾಜ್ ವಾರಿಸ್ ಸೇರಿದಂತೆ ಅನೇಕರು ನಿಂದಾತ್ಮಕವಾಗಿ ಟ್ರೋಲ್ ಮಾಡಿದ್ದರು. ಸಲ್ಮಾನ್ ಖಾನ್ ವಾರ್ನಿಂಗ್ ಕೊಟ್ಟ ಬಳಿಕ ಅವರಿಗೆ ತಪ್ಪಿನ ಅರಿವಾಗಿದೆ.

ಸಲ್ಮಾನ್ ಖಾನ್ ವಾರ್ನಿಂಗ್ ಕೊಟ್ಟ ಬಳಿಕ ಕತ್ರಿನಾಗೆ ಕ್ಷಮೆ ಕೇಳಿದ ಪಾಕಿಸ್ತಾನಿ ಆರ್‌ಜೆ
Katrina Kaif, Salman KhanImage Credit source: PTI, ColorsTV
ಮದನ್​ ಕುಮಾರ್​
|

Updated on: Sep 21, 2026 | 3:14 PM

Share

ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಹೆರಿಗೆ ನಂತರದ ತೂಕ ಹೆಚ್ಚಳದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿ ಬಾಡಿ ಶೇಮಿಂಗ್ ಮಾಡಿದ್ದ ಪಾಕಿಸ್ತಾನಿ ರೇಡಿಯೋ ಜಾಕಿ ಮತ್ತು ಇನ್ಫ್ಲುಯೆನ್ಸರ್ ಇಜಾಜ್ ವಾರಿಸ್ ಈಗ ಕ್ಷಮೆ ಕೇಳಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಗರಂ ಆದ ಬೆನ್ನಲ್ಲೇ ಸಾರ್ವಜನಿಕವಾಗಿ ಕತ್ರಿನಾ ಅವರಲ್ಲಿ ಇಜಾಜ್ ವಾರಿಸ್ ಕ್ಷಮೆ ಯಾಚಿಸಿದ್ದಾರೆ. ‘ಬಿಗ್ ಬಾಸ್ 20’ರ ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಅವರು ಗರಂ ಮಾತನಾಡಿದ್ದರು.

ಕತ್ರಿನಾ ಕೈಫ್ ಅವರ ದೇಹದ ಆಕಾರವನ್ನು ಹಾಸ್ಯಕ್ಕೀಡುಮಾಡಿದ್ದ ಟ್ರೋಲರ್‌ಗಳಿಗೆ ಸಲ್ಮಾನ್ ಖಾನ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಸಲ್ಮಾನ್ ಅವರ ಈ ಗಂಭೀರ ಎಚ್ಚರಿಕೆಯ ನಂತರ, ಪಾಕಿಸ್ತಾನಿ ಆರ್‌ಜೆ ಇಜಾಜ್ ವಾರಿಸ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಮತ್ತು ಸುದೀರ್ಘ ಸಂದೇಶ ಹಂಚಿಕೊಳ್ಳುವ ಮೂಲಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಗೂ ಸಂದೇಶ ಹಂಚಿಕೊಂಡಿರುವ ಇಜಾಜ್ ವಾರಿಸ್, ‘ನಾನು ಕತ್ರಿನಾ ಕೈಫ್ ಅವರಿಗೆ ಕ್ಷಮೆ ಕೇಳುತ್ತೇನೆ. ನಿನ್ನೆ ಬಿಗ್ ಬಾಸ್‌ನಲ್ಲಿ ಸಲ್ಮಾನ್ ಖಾನ್ ಈ ವಿಷಯವನ್ನು ಪ್ರಸ್ತಾಪಿಸಿದ ನಂತರ, ನಾನು ಮಾಡಿದ ತಪ್ಪಿನ ಅರಿವಾಯಿತು. ನನ್ನ ಮಾತುಗಳು ಕತ್ರಿನಾ ಮತ್ತು ಅವರ ಕೋಟ್ಯಂತರ ಅಭಿಮಾನಿಗಳಿಗೆ ನೋವುಂಟು ಮಾಡಿರಬಹುದು. ಯಾರನ್ನಾದರೂ ಬಾಡಿ ಶೇಮ್ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ, ‘ವಿಡಿಯೋದ ವೀಕ್ಷಣೆ ಹೆಚ್ಚಿಸಲು ನಾನು ತಮಾಷೆಯಾಗಿ ಆ ರೀತಿ ಮಾತನಾಡಿದ್ದೆ. ಆದರೆ ಅದು ಇಷ್ಟೊಂದು ಜನರ ಮನಸ್ಸಿಗೆ ನೋವುಂಟು ಮಾಡುತ್ತದೆ ಎಂದು ನಾನು ಭಾವಿಸಿರಲಿಲ್ಲ. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಇಬ್ಬರೂ ನನ್ನ ನೆಚ್ಚಿನ ಕಲಾವಿದರು. ಸಲ್ಮಾನ್ ಮಾತುಗಳನ್ನು ಕೇಳಿದ ಮೇಲೆ ನನ್ನ ತಪ್ಪಿನ ಅರಿವಾಯಿತು’ ಎಂದು ವಿಡಿಯೋದಲ್ಲಿ ಇಜಾಜ್ ವಾರಿಸ್ ತಿಳಿಸಿದ್ದಾರೆ.

ಇದನ್ನೂ ಓದಿ: ‘ಅಸಹ್ಯಕರವಾಗಿ ನಟಿಯರ ಫೋಟೋ ತೆಗೆಯುವವರಿಗೆ ಬಾರಿಸಿ’: ಖಾರವಾಗಿ ಹೇಳಿದ ಸಲ್ಮಾನ್ ಖಾನ್

ಬಿಗ್ ಬಾಸ್ ವೇದಿಕೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದ ಸಲ್ಮಾನ್ ಖಾನ್, ‘ಮಗು ಜನಿಸಿದ ನಂತರ ಯಾವುದೇ ಮಹಿಳೆಯ ತೂಕ ಹೆಚ್ಚಾಗುವುದು ಸಹಜ. ಕತ್ರಿನಾ ಈಗ ತಾಯಿಯಾಗಿದ್ದು, ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಸಿನಿಮಾಗಳಿಗೆ ಮರಳಿದಾಗ ಅವರು ಮತ್ತೆ ಫಿಟ್ ಆಗುತ್ತಾರೆ. ಸ್ವಂತ ಮುಖ ತೋರಿಸಲು ಧೈರ್ಯವಿಲ್ಲದ ಟ್ರೋಲರ್‌ಗಳು ಇತರರ ದೇಹದ ಬಗ್ಗೆ ಮಾತನಾಡುವುದು ಸರಿಯಲ್ಲ’ ಎಂದು ಕಿಡಿಕಾರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us