ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಬರ್ದ್ವಾನ್ ವಿವಿಯಿಂದ ಗೌರವ ಡಾಕ್ಟರೇಟ್
ಬರ್ದ್ವಾನ್ ವಿಶ್ವವಿದ್ಯಾಲಯವು ಮಿಥುನ್ ಚಕ್ರವರ್ತಿ ಅವರಿಗೆ ಗೌರವ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್) ಪದವಿ ನೀಡಿ ಸನ್ಮಾನಿಸಲಿದೆ. ವಿಶ್ವವಿದ್ಯಾಲಯದ 40ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ಮುಂದಿನ ತಿಂಗಳು ನಡೆಯಲಿದ್ದು, ಅದೇ ಸಂದರ್ಭದಲ್ಲಿ ಮಿಥಿನ್ ಚಕ್ರವರ್ತಿ ಅವರಿಗೆ ಈ ಪ್ರತಿಷ್ಠಿತ ಗೌರವವನ್ನು ಅವರಿಗೆ ಪ್ರದಾನ ಮಾಡಲಾಗುತ್ತದೆ. ಸಿನಿಮಾ ಕ್ಷೇತ್ರಕ್ಕೆ ಅವರು ನೀಡಿರುವ ಅಪ್ರತಿಮ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ.

ಹಿಂದಿ ಚಿತ್ರರಂಗದ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಬರ್ದ್ವಾನ್ ವಿಶ್ವವಿದ್ಯಾಲಯವು ಗೌರವ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್) ಪದವಿ ನೀಡಿ ಸನ್ಮಾನಿಸಲಿದೆ. ವಿಶ್ವವಿದ್ಯಾಲಯದ 40ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ಮುಂದಿನ ತಿಂಗಳು ನಡೆಯಲಿದ್ದು, ಅದೇ ಸಂದರ್ಭದಲ್ಲಿ ಮಿಥುನ್ ಚಕ್ರವರ್ತಿ ಅವರಿಗೆ ಈ ಪ್ರತಿಷ್ಠಿತ ಗೌರವವನ್ನು ಅವರಿಗೆ ಪ್ರದಾನ ಮಾಡಲಾಗುತ್ತದೆ. ಸಿನಿಮಾ ಕ್ಷೇತ್ರಕ್ಕೆ ಅವರು ನೀಡಿರುವ ಅಪ್ರತಿಮ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ.
40ನೇ ವಾರ್ಷಿಕ ಘಟಿಕೋತ್ಸವವು ಡಿಸೆಂಬರ್ 9ರಂದು ಬರ್ದ್ವಾನ್ ವಿಶ್ವವಿದ್ಯಾಲಯದ ಗೋಲಾಪ್‌ಬಾಗ್ ಆವರಣದ ಸಭಾಂಗಣದಲ್ಲಿ ನಡೆಯಲಿದೆ. ಚಕ್ರವರ್ತಿ ಅವರಿಗೆ ಗೌರವ ಡಿ.ಲಿಟ್. ಪದವಿ ನೀಡುವ ಪ್ರಸ್ತಾವನೆಗೆ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲರೂ ಆದ ಆರ್ಎನ್ ರವಿ ಅವರು ಅಧಿಕೃತವಾಗಿ ಅನುಮೋದನೆ ನೀಡಿದ್ದಾರೆ. ನಟ ಮಿಥುನ್ ಚಕ್ರವರ್ತಿ ಅವರೊಂದಿಗೆ, ಇಬ್ಬರು ಖ್ಯಾತ ಪ್ರಾಧ್ಯಾಪಕರಾದ ಜಿ. ಪಾರ್ಥಸಾರಥಿ ಮತ್ತು ಭೂಪೇಂದ್ರನಾಥ ಗೋಸ್ವಾಮಿ ಅವರಿಗೆ ಅದೇ ಸಮಾರಂಭದಲ್ಲಿ ಗೌರವ ಡಾಕ್ಟರ್ ಆಫ್ ಸೈನ್ಸ್ (ಡಿ.ಎಸ್ಸಿ.) ಪದವಿ ಪ್ರದಾನ ಮಾಡಲಾಗುತ್ತದೆ.
ಬಂಗಾಳಿ ಮತ್ತು ಹಿಂದಿ ಚಿತ್ರರಂಗ ಮಾತ್ರವೇ ಅಲ್ಲದೆ ಇನ್ನೂ ಕೆಲ ಚಿತ್ರರಂಗಗಳಲ್ಲಿ ನಟಿಸಿ ಐದು ದಶಕಗಳಿಗೂ ಹೆಚ್ಚು ಕಾಲದ ಸಿನಿಮಾ ಪಯಣ ಹೊಂದಿರುವ ಮಿಥುನ್ ಚಕ್ರವರ್ತಿ ಅವರು ತಮ್ಮ ಅಭಿನಯಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 1976ರಲ್ಲಿ ‘ಮೃಗಯಾ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅವರು, ಮೊದಲ ಚಿತ್ರದಲ್ಲೇ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದರು. ನಂತರ ‘ತಾಹಾದೇರ್ ಕಥಾ’ ಮತ್ತು ‘ಸ್ವಾಮಿ ವಿವೇಕಾನಂದ’ ಚಿತ್ರಗಳಿಗೂ ರಾಷ್ಟ್ರೀಯ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದಾರೆ. ‘ಡಿಸ್ಕೋ ಡ್ಯಾನ್ಸರ್’ ಚಿತ್ರದ ಮೂಲಕ ದೇಶ ಮತ್ತು ವಿದೇಶಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ರಾಜ್ಯಸಭೆಯ ಮಾಜಿ ಸದಸ್ಯರಾಗಿರುವ ಈ ಹಿರಿಯ ನಟನಿಗೆ 2024ರಲ್ಲಿ ಪದ್ಮಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ:Atif Aslam: ಮತ್ತೆ ಹಿಂದಿ ಚಿತ್ರರಂಗಕ್ಕೆ ಮರಳಿದ ಪಾಕ್ ಗಾಯಕ ಆತಿಫ್ ಅಸ್ಲಾಂ
ಗೌರವ ಪದವಿ ಪಡೆಯುವವರ ಆಯ್ಕೆಯನ್ನು ಮೊದಲು ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ (ಇಸಿ) ಸಭೆಯಲ್ಲಿ ಅಂತಿಮಗೊಳಿಸಲಾಯಿತು, ನಂತರ ಹೆಸರುಗಳನ್ನು ಕುಲಾಧಿಪತಿಗಳ ಅನುಮೋದನೆಗಾಗಿ ಕಳುಹಿಸಲಾಯಿತು. ನವೆಂಬರ್ 17ರಂದು ರಾಜ್ಯಪಾಲರ ಸಚಿವಾಲಯವು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊಫೆಸರ್ ಶಂಕರ್ ಕುಮಾರ್ ನಾಥ್ ಅವರಿಗೆ ಅಧಿಕೃತ ಪತ್ರ ಕಳುಹಿಸಿ, ಅನುಮೋದನೆಯನ್ನು ದೃಢಪಡಿಸಿದೆ.
ಮಿಥುನ್ ಚಕ್ರವರ್ತಿ ಅವರು ಇತ್ತೀಚೆಗಷ್ಟೆ ಬಿಡುಗಡೆ ಆದ ರಜನೀಕಾಂತ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಜೈಲರ್ 2’ ಸಿನಿಮಾನಲ್ಲೂ ಸಹ ನಟನೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:07 pm, Mon, 23 November 26




