AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Atif Aslam: ಮತ್ತೆ ಹಿಂದಿ ಚಿತ್ರರಂಗಕ್ಕೆ ಮರಳಿದ ಪಾಕ್ ಗಾಯಕ ಆತಿಫ್ ಅಸ್ಲಾಂ

ಆತಿಫ್ ಅವರು ನಿಷೇಧದ ನಂತರ ಹಿಂದಿ ಚಿತ್ರರಂಗದಿಂದ ದೂರ ಇದ್ದಿದ್ದರು. ಆದರೆ, ಈಗ ಮತ್ತೆ ಹಿಂದಿ ಚಿತ್ರರಂಗದಲ್ಲಿ ಹಾಡಲು ನಿರ್ಧರಿಸಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

Atif Aslam: ಮತ್ತೆ ಹಿಂದಿ ಚಿತ್ರರಂಗಕ್ಕೆ ಮರಳಿದ ಪಾಕ್ ಗಾಯಕ ಆತಿಫ್ ಅಸ್ಲಾಂ
ಆತಿಫ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 31, 2024 | 10:34 AM

Share

ಆತಿಫ್ ಅಸ್ಲಾಂ (Atif Aslam) ಹಿಂದಿ ಚಿತ್ರರಂಗಕ್ಕೆ ಹಲವು ಸೂಪರ್ ಹಿಟ್ ಸಾಂಗ್​ಗಳನ್ನು ನೀಡಿದ್ದಾರೆ. ಪಾಕ್ ಗಾಯಕ ಎನ್ನುವ ಕಾರಣಕ್ಕೆ ಕೆಲವು ವರ್ಷಗಳ ಕಾಲ ಅವರು ಬಾಲಿವುಡ್​​ನಲ್ಲಿ ನಿಷೇಧಕ್ಕೊಳಗಾಗಿದ್ದರು. ಅವರ ಹಾಡುಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ಆತಿಫ್ ಅಸ್ಲಾಂ ಅವರ ಅಭಿಮಾನಿ ಬಳಗ ತುಂಬಾ ದೊಡ್ಡದಿದೆ. ಇದೀಗ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದು ಸಿಕ್ಕಿದೆ. ಅವರು ಮತ್ತೊಮ್ಮೆ ಬಾಲಿವುಡ್‌ಗೆ ಬರಲಿದ್ದಾರೆ. ಮುಂಬರುವ ಚಿತ್ರಕ್ಕಾಗಿ ಹಾಡೊಂದನ್ನು ಹಾಡಲಿದ್ದಾರೆ.

ಕೆಲವು ವರ್ಷಗಳ ಹಿಂದೆ ಪಾಕಿಸ್ತಾನಿ ಕಲಾವಿದರು ಭಾರತದಲ್ಲಿ ಕೆಲಸ ಮಾಡುವುದರ ಮೇಲೆ ನಿಷೇಧ ಹೇರಲಾಯಿತು. ಆದರೆ, ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿಷೇಧದ ಅರ್ಜಿಯನ್ನು ತಿರಸ್ಕರಿಸಿತು. ಇದಾದ ಬಳಿಕ ಬಾಲಿವುಡ್​ನ ಬಾಗಿಲನ್ನು ತೆರೆಯಲಾಗಿದೆ. ಈ ಆದೇಶ ಬಂದ ವರ್ಷಗಳ ನಂತರ ಬಾಲಿವುಡ್‌ಗೆ ಎಂಟ್ರಿ ಕೊಡಲಿರುವ ಪಟ್ಟಿಯಲ್ಲಿ ಮೊದಲ ಹೆಸರು ಆತಿಫ್ ಅಸ್ಲಾಂ ಅವರದ್ದು. 7 ವರ್ಷಗಳ ವಿರಾಮದ ನಂತರ ಆತಿಫ್ ಅಸ್ಲಾಂ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅಮಿತ್ ಕಸಾರಿಯಾ ಅವರ ನಿರ್ದೇಶನದ ‘ಲವ್ ಸ್ಟೋರಿ ಆಫ್ 90s’ ಚಿತ್ರದ ಮೂಲಕ ಆತಿಫ್ ಕಂಬ್ಯಾಕ್ ಮಾಡುತ್ತಿದ್ದಾರೆ.

ನಿಷೇಧದ ನಂತರ ಆತಿಫ್ ಅವರು ಹಿಂದಿ ಚಿತ್ರರಂಗದಿಂದ ದೂರ ಇದ್ದಿದ್ದರು. ಆದರೆ, ಈಗ ಮತ್ತೆ ಹಿಂದಿ ಚಿತ್ರರಂಗದಲ್ಲಿ ಹಾಡಲು ನಿರ್ಧರಿಸಿದ್ದಾರೆ. ಆತಿಫ್ 2002ರಲ್ಲಿ ‘ಜಲ್’ ಎಂಬ ಆಲ್ಬಂನೊಂದಿಗೆ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಅವರ ‘ವೋ ಲಮ್ಹೆ..’ ಹಾಡು ಜನರಿಗೆ ತುಂಬಾ ಇಷ್ಟವಾಯಿತು. ಆತಿಫ್ ಅಸ್ಲಾಂಗೆ ಜನಪ್ರಿಯತೆಯ ರುಚಿ ಕೊಟ್ಟ ಹಾಡು ಇದಾಗಿತ್ತು. ಇದರ ನಂತರ ಅವರು ಅನೇಕ ಹಿಟ್ ಹಾಡುಗಳನ್ನು ನೀಡಿದರು.

ಆತಿಫ್ ಹಿಂದಿ ಚಲನಚಿತ್ರಗಳಲ್ಲಿ ‘ತು ಜಾನೆ ನಾ..’, ‘ಪೆಹ್ಲಿ ನಜರ್ ಮೇ..’, ‘ತೇರಾ ಹೋನೆ ಲಗಾ ಹೂ..’, ಬದ್ಲಾಪುರದ ‘ಜೀನಾ ಜೀನಾ..’ ಅಂಥ ಅನೇಕ ಹಾಡುಗಳನ್ನು ಹಾಡಿದ್ದಾರೆ. 2017ರಲ್ಲಿ ‘ಟೈಗರ್ ಜಿಂದಾ ಹೈ’ ಚಿತ್ರಕ್ಕಾಗಿ ಅವರು ಹಾಡಿದ ‘ದಿಲ್ ದಿಯಾ ಗಲ್ಲನ್..’ ಸಾಂಗ್ ಜನರಿಗೆ ತುಂಬಾ ಇಷ್ಟವಾಗಿತ್ತು.

ಇದನ್ನೂ ಓದಿ: ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ 19 ಪಾಕ್ ನಾವಿಕರನ್ನು ರಕ್ಷಿಸಿದ ಭಾರತೀಯ ನೌಕಾಪಡೆ

ಆತಿಫ್ ಹೊರತಾಗಿ ಈ ತಾರೆಯರು ಕೂಡ ಕಮ್ ಬ್ಯಾಕ್ ಮಾಡ್ತಾರಾ?

ಆತಿಫ್ ಅಸ್ಲಾಂ ಹೊರತುಪಡಿಸಿ ನಿಷೇಧಕ್ಕೆ ಒಳಗಾದ ಅನೇಕ ತಾರೆಯರಿದ್ದಾರೆ. ಆತಿಫ್ ಅವರಂತೆ ಈ ತಾರೆಯರು ಭಾರತದಲ್ಲೂ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ಮುಂದೆಯೂ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುವ ಆಸೆ ಇದೆ. ಪಾಕಿಸ್ತಾನಿ ಕಲಾವಿದ ಫವಾದ್ ಖಾನ್ ಕೂಡ ಕೆಲ ವರ್ಷಗಳ ಹಿಂದೆ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಫವಾದ್ ಕೆಲವು ಪಾಕಿಸ್ತಾನಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, ಅವರು ಹಿಂದಿ ಚಿತ್ರರಂಗದಲ್ಲಿಯೂ ಕೆಲಸ ಮಾಡಿದ್ದಾರೆ. ಈ ರೀತಿ ಅನೇಕ ಕಲಾವಿದರು ಮತ್ತೆ ಕಂಬ್ಯಾಕ್ ಮಾಡೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:03 am, Wed, 31 January 24