ಲಕ್ಕುಂಡಿಯಲ್ಲಿ ಎಲ್ಲೇ ಆಗೆದರೂ ಸಿಗುತ್ತಂತೆ ಬಂಗಾರ! ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಈರಪ್ಪ ಕಣವಿ
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮಳೆ ಬಂದಾಗಲೆಲ್ಲ ಚಿನ್ನ ಸಿಗುತ್ತಿತ್ತು, ಆದರೆ ನಿಧಿಗೆ ಆಸೆಪಟ್ಟವರು ರಕ್ತಕಾರಿ ಸಾವನ್ನಪ್ಪಿದ್ದಾರೆ ಎಂದು ಗ್ರಾಮದ ಹಿರಿಯರೊಬ್ಬರು ಹೇಳಿದ್ದಾರೆ. ಈರಪ್ಪ ಕಣವಿ ಅವರು ಚಿಕ್ಕವರಿದ್ದಾಗ ಕಂಡ ಇಕ್ಕೇರಿ ವರಹದಂತಹ ನಾಣ್ಯಗಳು ಮತ್ತು ಸರ್ಕಾರದ ನಿಧಿ ಹುಡುಕಾಟದ ಪ್ರಯತ್ನಗಳ ಬಗ್ಗೆ ವಿವರಿಸಿದ್ದಾರೆ. ಈ ನಿಧಿ ರಹಸ್ಯವು ಆಕರ್ಷಣೆ ಮತ್ತು ಅಪಾಯ ಎರಡನ್ನೂ ಒಳಗೊಂಡಿದೆ ಎನ್ನುತ್ತಾರವರು.
ಗದಗ, ಜನವರಿ 12: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯ ಅಗೆಯುವಾಗ ನಿಧಿ ಸಿಕ್ಕ ವಿಚಾರ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಈರಪ್ಪ ಕಣವಿ ಎಂಬವರು ‘ಟಿವಿ9’ ಜತೆ ಮಾತನಾಡಿದ್ದು, ಈ ಗ್ರಾಮದಲ್ಲಿ ಮಳೆಗಾಲದಲ್ಲಿ ಹಿಂದೆಲ್ಲ ಮಣ್ಣು ಅಗೆಯುವಾಗ ಚಿನ್ನದ ತುಂಡುಗಳು ಕಾಣಿಸುತ್ತಿದ್ದವು ಎಂದಿದ್ದಾರೆ. ಗ್ರಾಮದಲ್ಲಿ ಎಲ್ಲೇ ಅಗೆದರೂ ಬಂಗಾರ ಸಿಗುತ್ತಿತ್ತು. ಆದರೆ, ಈ ನಿಧಿ ಆಸೆಯ ಹಿಂದೆ ಹೋದವರು ರಕ್ತಕಾರಿ ಸತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಕಾರಣದಿಂದಾಗಿ, ನಿಧಿ ದೊರೆತರೂ ಅದನ್ನು ಸ್ವೀಕರಿಸುವುದು ಒಳ್ಳೆಯದಲ್ಲ ಎಂಬ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ, ಕೇಂದ್ರ ಸರ್ಕಾರದಿಂದಲೂ ಚಿನ್ನ ಶೋಧಿಸುವ ಪ್ರಯತ್ನ ನಡೆದಿತ್ತು, ಆದರೆ ಅದು ವಿಫಲವಾಗಿತ್ತು. ಇಂದಿಗೂ ಗ್ರಾಮದಲ್ಲಿ ಚಿನ್ನ ನಿಕ್ಷೇಪವಿದೆ ಎಂಬ ನಂಬಿಕೆ ಬಲವಾಗಿದೆ ಎಂದು ಮೂಲಗಳು ತಿಳಿಸಿವೆ.
