Video: ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಇರಾನ್‌ನಲ್ಲಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಇದುವರೆಗೆ 500 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕ್ರಮ ಕೈಗೊಳ್ಳುವಂತೆ ನಿರಂತರವಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಏತನ್ಮಧ್ಯೆ, ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಅಪಘಾತವೊಂದು ಸಭವಿಸಿದೆ. ಇರಾನ್‌ನ ಗಡಿಪಾರುಗೊಂಡ ರಾಜಕುಮಾರ ಮೊಹಮ್ಮದ್ ರೆಜಾ ಪಹ್ಲವಿ ಅವರ ಬೆಂಬಲಿಗರು ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರನ್ನು ಬೆಂಬಲಿಸಿ ಬೀದಿಗಿಳಿದಾಗ ಈ ಘಟನೆ ಸಂಭವಿಸಿದೆ.
ವಾಷಿಂಗ್ಟನ್, ಜನವರಿ 12: ಇರಾನ್‌ನಲ್ಲಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಇದುವರೆಗೆ 500 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕ್ರಮ ಕೈಗೊಳ್ಳುವಂತೆ ನಿರಂತರವಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಏತನ್ಮಧ್ಯೆ, ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಅಪಘಾತವೊಂದು ಸಭವಿಸಿದೆ. ಇರಾನ್‌ನ ಗಡಿಪಾರುಗೊಂಡ ರಾಜಕುಮಾರ ಮೊಹಮ್ಮದ್ ರೆಜಾ ಪಹ್ಲವಿ ಅವರ ಬೆಂಬಲಿಗರು ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರನ್ನು ಬೆಂಬಲಿಸಿ ಬೀದಿಗಿಳಿದಾಗ ಈ ಘಟನೆ ಸಂಭವಿಸಿದೆ.
ಟ್ರಕ್ ಮೆರಣಿಗೆಯಲ್ಲಿ ಪಾಲ್ಗಂಡಿದ್ದ ಜನರ ಮೇಲೆ ಹರಿದಿದೆ. ಹಲವು ಮಂದಿ ಗಾಯಗೊಂಡಿದ್ದಾರೆ.ಲಾಸ್ ಏಂಜಲೀಸ್‌ನ ವೆಸ್ಟ್‌ವುಡ್ ಪ್ರದೇಶದ ವಿಲ್‌ಶೈರ್ ಫೆಡರಲ್ ಕಟ್ಟಡದ ಹೊರಗೆ ಜನರು ಜಮಾಯಿಸಿದ್ದರು. ಎಂಇಕೆಯ ಸ್ಟಿಕ್ಕರ್ ಹೊಂದಿರುವ ಟ್ರಕ್ ಪ್ರತಿಭಟನಾಕಾರರ ಮೇಲೆ ನುಗ್ಗಿ ವೇಗವಾಗಿ ಓಡಿತು. ದಾಳಿಯಲ್ಲಿ ಹಲವಾರು ಪ್ರತಿಭಟನಾಕಾರರು ಗಾಯಗೊಂಡರು. ಆ ಟ್ರಕ್ 1953 ರ ದಂಗೆಯ ಚರ್ಚೆ ಸೇರಿದಂತೆ ಇರಾನ್‌ನ ಇತಿಹಾಸಕ್ಕೆ ಸಂಬಂಧಿಸಿದ ರಾಜಕೀಯ ಸಂದೇಶವನ್ನು ಹೊಂದಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

