PSLV-C62: 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ ಇಸ್ರೋದ ಪಿಎಸ್‌ಎಲ್‌ವಿ-ಸಿ62 ರಾಕೆಟ್‌ನಲ್ಲಿ ತಾಂತ್ರಿಕ ದೋಷ
ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ PSLV-C62 ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಇಸ್ರೋದ ಮಹತ್ವಾಕಾಂಕ್ಷೆಯ ಪಿಎಸ್‌ಎಲ್‌ವಿ ಸಿ-62 ರಾಕೆಟ್ ಉಡಾವಣೆಯ ಮೂರನೇ ಹಂತದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ರಾಕೆಟ್ ಪಥ ಬದಲಾಯಿಸಿದೆ. 16 ಉಪಗ್ರಹಗಳನ್ನು ಹೊತ್ತೊಯ್ದಿದ್ದ ಈ ರಾಕೆಟ್‌ನ ದತ್ತಾಂಶವನ್ನು ಇಸ್ರೋ ವಿಶ್ಲೇಷಿಸುತ್ತಿದೆ.
ಶ್ರೀಹರಿಕೋಟ, ಜನವರಿ 12: ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ PSLV-C62 ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಇಸ್ರೋದ ಮಹತ್ವಾಕಾಂಕ್ಷೆಯ ಪಿಎಸ್‌ಎಲ್‌ವಿ ಸಿ-62 ರಾಕೆಟ್ ಉಡಾವಣೆಯ ಮೂರನೇ ಹಂತದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ರಾಕೆಟ್ ಪಥ ಬದಲಾಯಿಸಿದೆ.
16 ಉಪಗ್ರಹಗಳನ್ನು ಹೊತ್ತೊಯ್ದಿದ್ದ ಈ ರಾಕೆಟ್‌ನ ದತ್ತಾಂಶವನ್ನು ಇಸ್ರೋ ವಿಶ್ಲೇಷಿಸುತ್ತಿದೆ. ಡಿಆರ್‌ಡಿಒ ನಿರ್ಮಿತ ಅನ್ವೇಷ ಉಪಗ್ರಹ ಸೇರಿದಂತೆ ಈ ವರ್ಷದ ಇಸ್ರೋದ ಮೊದಲ ಉಡಾವಣೆ ಇದಾಗಿದೆ. ಬೆಳಗ್ಗೆ 10:17ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಗೊಂಡ ಈ ರಾಕೆಟ್ 16 ಉಪಗ್ರಹಗಳನ್ನು ಹೊತ್ತೊಯ್ಯುತ್ತಿತ್ತು. ಡಿಆರ್‌ಡಿಒ ನಿರ್ಮಿತ ಅನ್ವೇಷ ಹೆಸರಿನ ಭೂ ವೀಕ್ಷಣಾ ಉಪಗ್ರಹ (EOS-N) ಮತ್ತು ವಿವಿಧ ದೇಶಗಳಿಗೆ ಸೇರಿದ ಒಟ್ಟು 15 ಉಪಗ್ರಹಗಳು ಈ ರಾಕೆಟ್‌ನಲ್ಲಿ ಅಂತರಿಕ್ಷಕ್ಕೆ ಸೇರ್ಪಡೆಯಾಗಬೇಕಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

