Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Navy: ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ 19 ಪಾಕ್ ನಾವಿಕರನ್ನು ರಕ್ಷಿಸಿದ ಭಾರತೀಯ ನೌಕಾಪಡೆ

INS Sumitra: ಭಾರತೀಯ ಯುದ್ಧನೌಕೆ INS ಸುಮಿತ್ರಾ ಸೋಮಾಲಿಯಾದ ಪೂರ್ವ ಕರಾವಳಿಯಲ್ಲಿ ಎರಡು ಕಾರ್ಯಚರಣೆಯನ್ನು ನಡೆಸಿದೆ. ಸೋಮಾಲಿದಲ್ಲಿ ಕಡಲ್ಗಳ್ಳರು ಪಾಕಿಸ್ತಾನಿಗಳಿದ್ದ ಮೀನುಗಾರಿಕಾ ಹಡಗುನ್ನು ಅಪಹರಿಸಿದ್ದರು. ಹಡಗನಲ್ಲಿದ್ದ 19 ಪಾಕಿಸ್ತಾನ ನಾವಿಕರನ್ನು ಭಾರತೀಯ ಯುದ್ಧನೌಕೆ INS ಸುಮಿತ್ರಾ ರಕ್ಷಿಸಿದೆ. ಇದು 36 ಗಂಟೆಗಳಲ್ಲಿ ಭಾರತೀಯ ಯುದ್ಧನೌಕೆ ನಡೆಸಿದ ಎರಡನೇ ಕಾರ್ಯಚರಣೆಯಾಗಿದೆ.

Indian Navy: ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ 19 ಪಾಕ್ ನಾವಿಕರನ್ನು ರಕ್ಷಿಸಿದ ಭಾರತೀಯ ನೌಕಾಪಡೆ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jan 30, 2024 | 12:24 PM

ಸೋಮಾಲಿಯಾದ ( Somali) ಪೂರ್ವ ಕರಾವಳಿಯಲ್ಲಿ ಕಡಲ್ಗಳ್ಳರು ಪಾಕಿಸ್ತಾನಿಗಳಿದ್ದ ಮೀನುಗಾರಿಕಾ ಹಡಗುನ್ನು ಅಪಹರಿಸಿದ್ದರು. ಇದೀಗ ಆ ಹಡಗನಲ್ಲಿದ್ದ 19 ಪಾಕಿಸ್ತಾನ ನಾವಿಕರನ್ನು ಭಾರತೀಯ ಯುದ್ಧನೌಕೆ INS ಸುಮಿತ್ರಾ ರಕ್ಷಿಸಿದೆ. ಇದು 36 ಗಂಟೆಗಳಲ್ಲಿ ಭಾರತೀಯ ಯುದ್ಧನೌಕೆ ನಡೆಸಿದ ಎರಡನೇ ಕಾರ್ಯಚರಣೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹನ್ನೊಂದು ಶಸ್ತ್ರಸಜ್ಜಿತ ಕಡಲ್ಗಳ್ಳರು ಇರಾನಿ ಧ್ವಜವುಳ್ಳ ಹಡಗನ್ನು ಅಪಹರಿಸಿದ್ದು, 19 ಪಾಕಿಸ್ತಾನ ನಾವಿಕರನ್ನು ಒತ್ತೆಯಾಳುಗಳಾಗಿ ಇರಿಸಿದರು. ಈ ಬಗ್ಗೆ ಮಾಹಿತಿ ಪಡೆದ ಭಾರತೀಯ ಯುದ್ಧನೌಕೆ ಕಡಲ್ಗಳ್ಳರು ವಶದಲ್ಲಿದ್ದ ಹಡಗನ್ನು ತಡೆದು, 19 ಪಾಕಿಸ್ತಾನ ಒತ್ತೆಯಾಳುಗಳನ್ನು ರಕ್ಷಿಸಿದ್ದಾರೆ.

ಮತ್ತೊಂದು ಕಡೆ ಅರಬ್ಬೀ ಸಮುದ್ರದ ಸೊಮಾಲಿ ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ ಮೀನುಗಾರಿಕಾ ಹಡಗು ಇಮಾನ್​​​ನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಸುಮಿತ್ರಾ ರಕ್ಷಣೆ ಮಾಡಿದೆ. ಈ ಹಡಗಿನಲ್ಲಿ 17 ಜನ ಭಾರತೀಯ ಮೀನುಗಾರರಿದ್ದರು ಎಂದು ಹೇಳಲಾಗಿದೆ. ಈ ಪ್ರದೇಶದಲ್ಲಿ ಭಾರತೀಯ ನೌಕಪಡೆಗಳು ಭದ್ರತೆಯನ್ನು ಹೆಚ್ಚಿಸಿದ್ದು, ಭಾರತಕ್ಕೆ ಹೋಗುವ ವ್ಯಾಪಾರಿ ಹಡಗುಗಳ ಮೇಲೆ ಹೆಚ್ಚಿನ ಕಾಳಜಿಯನ್ನು ವಹಿಸಲಾಗಿದೆ.

ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಸುಮಿತ್ರಾ 36 ಗಂಟೆಗಳಲ್ಲಿ ಎರಡು ಕಾರ್ಯಚರಣೆಯನ್ನು ಮಾಡಿದೆ. ಈ ಕಾರ್ಯಚರಣೆಯಲ್ಲಿ ಒಟ್ಟು 36 ಜನರನ್ನು ರಕ್ಷಣೆ ಮಾಡಿದೆ (17 ಭಾರತೀಯರು ಹಾಗೂ 19 ಪಾಕಿಸ್ತಾನದ ನಾವಿಕರನ್ನು ರಕ್ಷಣೆ ಮಾಡಲಾಗಿದೆ) ಯುದ್ಧನೌಕೆ ಐಎನ್‌ಎಸ್ ಸುಮಿತ್ರಾದ ನಿರಂತರ ಹಾಗೂ ಕ್ಷಿಪ್ರ ಪ್ರಯತ್ನದಿಂದ ಈ ಕಾರ್ಯಚರಣೆ ಯಶಸ್ವಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಮುದ್ರ ಮಟ್ಟದಲ್ಲಿ ಇಂತಹ ಕೃತ್ಯಗಳು ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು INS ಸುಮಿತ್ರಾ ಭಾರತೀಯ ನೌಕಾಪಡೆಯ ಸ್ಥಳೀಯ ಕಡಲಾಚೆಯ ಗಸ್ತು ನೌಕೆಯಾಗಿದ್ದು, ಸೋಮಾಲಿಯಾ ಮತ್ತು ಗಲ್ಫ್ ಆಫ್ ಅಡೆನ್‌ನ ಪೂರ್ವದಲ್ಲಿ ಕಡಲ್ಗಳ್ಳತನ ಮತ್ತು ಕಡಲ ಭದ್ರತಾ ಕಾರ್ಯಾಚರಣೆಗಳಿಗಾಗಿ ನಿಯೋಜಿಸಲಾಗಿದೆ.

ಇದನ್ನೂ ಓದಿ: ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟ ಇರಾನ್ ಮೀನುಗಾರಿಕಾ ಹಡಗನ್ನು ರಕ್ಷಿಸಿದ ಭಾರತೀಯ ನೌಕಾಪಡೆ INS ಸುಮಿತ್ರ

ಬ್ರಿಟಿಷ್ ಹಡಗಿನ ಮೇಲೆ ಯೆಮೆನ್‌ನ ಹೌತಿ ಬಂಡುಕೋರರ ದಾಳಿ

ಬ್ರಿಟಿಷ್ ತೈಲ ಟ್ಯಾಂಕರ್​​ಗಳನ್ನು ಹೊತ್ತು ಬರುತ್ತಿದ್ದ ಮಾರ್ಲಿನ್ ಲುವಾಂಡಾ ಹಡಗಿನ ಮೇಲೆ ಜ.26 ಯೆಮೆನ್‌ನ ಹೌತಿ ಬಂಡುಕೋರರು ದಾಳಿಯ ಮಾಡಿದ್ದರು. ಈ ಹಡಗಿನಲ್ಲಿ 21 ಭಾರತೀಯ ಸಿಬ್ಬಂದಿಗಳು ಹಾಗೂ ಒಬ್ಬ ಬಾಂಗ್ಲಾದೇಶದ ಸಿಬ್ಬಂದಿ ಇದ್ದರು ಎಂದು ಹೇಳಲಾಗಿತ್ತು. ಮಾರ್ಲಿನ್ ಲುವಾಂಡಾ ಹಡಗು ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಬಗ್ಗೆ ಭಾರತೀಯ ನೌಕದಳಕ್ಕೆ ಕರೆ ಬಂದಿದೆ. ಈ ಕರೆಗೆ ಸ್ಪಂದಿಸಿ ಭಾರತೀಯ ನೌಕಾಪಡೆಯು (Indian Navy) ತನ್ನ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ – INS ವಿಶಾಖಪಟ್ಟಣಂನ್ನು ಏಡೆನ್ ಕೊಲ್ಲಿಯಲ್ಲಿ ನಿಯೋಜಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:22 pm, Tue, 30 January 24

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್