Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ಹತ್ಯೆ, ಸುತ್ತಿಗೆಯಿಂದ 50 ಬಾರಿ ಹೊಡೆದು ಕೊಲೆ

ಅಮೆರಿಕದ ಜಾರ್ಜಿಯಾದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಮಾಡಲಾಗಿದೆ. ವಿವೇಕ್ ಸೈನಿ(25) ಮೃತ ವಿದ್ಯಾರ್ಥಿ ಆತ ಹರ್ಯಾಣದ ಪಂಚಕುಲ ನಿವಾಸಿ. ವಿದ್ಯಾರ್ಥಿಯ ತಲೆಗೆ ವ್ಯಕ್ತಿಯೊಬ್ಬ ಸುತ್ತಿಗೆಯಿಂದ 50 ಬಾರಿ ಹೊಡೆದಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಆರಂಭಿಸಿದ್ದಾರೆ.

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ಹತ್ಯೆ, ಸುತ್ತಿಗೆಯಿಂದ 50 ಬಾರಿ ಹೊಡೆದು ಕೊಲೆ
ವಿದ್ಯಾರ್ಥಿImage Credit source: NDTV
Follow us
ನಯನಾ ರಾಜೀವ್
|

Updated on:Jan 30, 2024 | 8:01 AM

ಅಮೆರಿಕದ ಜಾರ್ಜಿಯಾದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಮಾಡಲಾಗಿದೆ. ವಿವೇಕ್ ಸೈನಿ(25) ಮೃತ ವಿದ್ಯಾರ್ಥಿ ಆತ ಹರ್ಯಾಣದ ಪಂಚಕುಲ ನಿವಾಸಿ. ಆರೋಪಿ ವಿದ್ಯಾರ್ಥಿಯ ತಲೆಗೆ ವ್ಯಕ್ತಿಯೊಬ್ಬ ಸುತ್ತಿಗೆಯಿಂದ 50 ಬಾರಿ ಹೊಡೆದಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಆರಂಭಿಸಿದ್ದಾರೆ.

ಆರೋಪಿಯನ್ನು ಜೂಲಿಯನ್ ಫಾಕ್ನರ್ ಎಂದು ಗುರುತಿಸಲಾಗಿದ್ದು, ಈತ ಜಾರ್ಜಿಯಾದ ಲಿಥೋನಿಯಾ ನಿವಾಸಿಯಾಗಿದ್ದಾರೆ. ಮಾದಕ ವ್ಯಸನಿ ಕೂಡ ಹೌದು. ಮೃತ ವಿದ್ಯಾರ್ಥಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಕಳೆದ ಕೆಲವು ದಿನಗಳಿಂದ ಈ ಯುವಕನ ಜತೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

ಆರೋಪಿಯು ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿ ಬಳಿ ಉಚಿತವಾಗಿ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಎಂದು ಸ್ನೇಹಿತ ಹೇಳಿದ್ದಾರೆ. ವಿವೇಕ್ ಸೈನಿ ಜನವರಿ 14ರಂದು ಆರೋಪಿಗೆ ಉಚಿತವಾಗಿ ವಸ್ತುಗಳನ್ನು ನೀಡಲು ನಿರಾಕರಿಸಿದ್ದಾನೆ, ಈ ಕಾರಣಕ್ಕೆ ಕೊಲೆಗೆ ಯೋಜನೆ ರೂಪಿಸಿ ವಿವೇಕ್ ತಲೆಗೆ ಸುತ್ತಿಗೆಯಿಂದ ಹೊಡೆದು ಕೆಳಗೆ ಬೀಳಿಸಿ ನಂತರ 50 ಬಾರಿ ಸುತ್ತಿಗೆಯಿಂದ ಹೊಡೆದಿದ್ದಾನೆ.

ಮತ್ತಷ್ಟು ಓದಿ: ನೆಲಮಂಗಲ: ಗುರಾಯಿಸಿ ನಿಂದಿಸಿದ ಯುವಕನಿಗೆ ಚಾಕು ಇರಿತ

ಮಾಹಿತಿ ಪ್ರಕಾರ ಸೈನಿ ಎಂಬಿಎ ಓದಲು ಅಮೆರಿಕಕ್ಕೆ ತೆರಳಿದ್ದ, ರಜೆ ಇದ್ದ ಕಾರಣ ಜನವರಿ 26ರಂದು ಭಾರತಕ್ಕೆ ಬರಬೇಕಿತ್ತು. ಸೈನಿ ಮೃತದೇಹವನ್ನು ಭಾರತಕ್ಕೆ ತರುವಂತೆ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ವಿವೇಕ ಸೈನಿ ಸಾವಿನಿಂದ ನಾವು ದುಃಖಿತರಾಗಿದ್ದೇವೆ ಮತ್ತು ಈ ದಾಳಿಯನ್ನು ಖಂಡಿಸುತ್ತೇವೆ , ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಭಾರತೀಯ ಧೂತಾವಾಸ ಕಚೇರಿ ತಿಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:00 am, Tue, 30 January 24