ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟ ಇರಾನ್ ಮೀನುಗಾರಿಕಾ ಹಡಗನ್ನು ರಕ್ಷಿಸಿದ ಭಾರತೀಯ ನೌಕಾಪಡೆ INS ಸುಮಿತ್ರ
ಸೊಮಾಲಿ ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ ಮೀನುಗಾರಿಕಾ ಹಡಗು ಇಮಾನ್ನ್ನು ಇಂದು ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಸುಮಿತ್ರಾ ಸುರಕ್ಷಿತವಾಗಿ ರಕ್ಷಿಸಿದೆ ಎಂದು ರಕ್ಷಣಾ ಅಧಿಕಾರಿಗಳ ಹೇಳಿದ್ದಾರೆ. ಅಧಿಕಾರಿಗಳು ನೀಡಿದ ಹೇಳಿಕೆ ಪ್ರಕಾರ, ಇರಾನ್ ಮೀನುಗಾರಿಕಾ ಹಡಗು ಎಂವಿ ಇಮಾನ್ನ್ನು ಸೊಮಾಲಿ ಕಡಲ್ಗಳ್ಳರು ಅಪಹರಿಸಿದ್ದರು.
ಅರಬ್ಬೀ ಸಮುದ್ರದಲ್ಲಿ ಸೊಮಾಲಿ ( Somali) ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ ಮೀನುಗಾರಿಕಾ ಹಡಗು ಇಮಾನ್ನ್ನು ಇಂದು (ಜ.29) ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಸುಮಿತ್ರಾ (INS Sumitra) ಸುರಕ್ಷಿತವಾಗಿ ರಕ್ಷಿಸಿದೆ ಎಂದು ರಕ್ಷಣಾ ಅಧಿಕಾರಿಗಳ ಹೇಳಿದ್ದಾರೆ. ಅಧಿಕಾರಿಗಳು ನೀಡಿದ ಹೇಳಿಕೆ ಪ್ರಕಾರ, ಇರಾನ್ ಮೀನುಗಾರಿಕಾ ಹಡಗು ಎಂವಿ ಇಮಾನ್ನ್ನು ಸೊಮಾಲಿ ಕಡಲ್ಗಳ್ಳರು ಅಪಹರಿಸಿದ್ದರು. ಈ ಹಡಗಿನಲ್ಲಿ 17 ಜನ ಭಾರತೀಯ ಮೀನುಗಾರರಿದ್ದರು ಎಂದು ಹೇಳಲಾಗಿದೆ.
ಇದೀಗ ಈ ಪ್ರದೇಶದಲ್ಲಿ ಭಾರತೀಯ ನೌಕಪಡೆಗಳು ಭದ್ರತೆಯನ್ನು ಹೆಚ್ಚಿಸಿದ್ದು, ಭಾರತಕ್ಕೆ ಹೋಗುವ ವ್ಯಾಪಾರಿ ಹಡಗುಗಳ ಮೇಲೆ ಹೆಚ್ಚಿನ ಕಾಳಜಿಯನ್ನು ವಹಿಸಲಾಗಿದೆ ಎಂದು ಹೇಳಿದೆ. ಅಪಾಯ ಇರುವ ಅಥವಾ ದಾಳಿ ನಡೆಸುವ ಪ್ರದೇಶಗಳಲ್ಲಿ 10 ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಲಾಗಿದೆ.
Indian Navy warship INS Sumitra has safely rescued the fishing vessel Iman from Somali pirates. The pirates have been disarmed and asked to move towards Somalia. The INS Sumitra has now moved out from the area. The ALH Dhruv choppers on board the warship had encircled the… pic.twitter.com/nnxDIlP8eT
— ANI (@ANI) January 29, 2024
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂತಹ ದಾಳಿಗಳು ನಡೆಯುವುದು ಕಡಿಮೆಯಾಗಿತ್ತು. ಆದರೆ ಇಸ್ರೇಲ್-ಹಮಾಸ್ ಯುದ್ಧದ ನಂತರ ಇಂತಹ ದಾಳಿಗಳು ಹೆಚ್ಚಾಗಿದೆ ಎಂದು ಹೇಳಲಾಗಿದೆ. ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಮಿಲಿಷಿಯಾ ಭಯೋತ್ಪಾದನೆ ಸಂಘಟನೆಗಳು ವಾಣಿಜ್ಯ ಹಡಗುಗಳನ್ನು ಗುರಿಯಾಗಿ ದಾಳಿಯನ್ನು ನಡೆಸಿದೆ. ಅದರಲ್ಲೂ ಭಾರತಕ್ಕೆ ಬರುವ ಹಡಗುಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 21 ಭಾರತೀಯರಿದ್ದ ಬ್ರಿಟಿಷ್ ಹಡಗಿನ ಮೇಲೆ ಹೌತಿ ಬಂಡುಕೋರರ ದಾಳಿ, ಸಹಾಯಕ್ಕೆ ಧಾವಿಸಿದ ಭಾರತೀಯ ನೌಕಾಪಡೆ
ಬ್ರಿಟಿಷ್ ಹಡಗಿನ ಮೇಲೆ ಯೆಮೆನ್‌ನ ಹೌತಿ ಬಂಡುಕೋರರ ದಾಳಿ
ಬ್ರಿಟಿಷ್ ತೈಲ ಟ್ಯಾಂಕರ್ಗಳನ್ನು ಹೊತ್ತು ಬರುತ್ತಿದ್ದ ಮಾರ್ಲಿನ್ ಲುವಾಂಡಾ ಹಡಗಿನ ಮೇಲೆ ಜ.26 ಯೆಮೆನ್‌ನ ಹೌತಿ ಬಂಡುಕೋರರು ದಾಳಿಯ ಮಾಡಿದ್ದರು. ಈ ಹಡಗಿನಲ್ಲಿ 21 ಭಾರತೀಯ ಸಿಬ್ಬಂದಿಗಳು ಹಾಗೂ ಒಬ್ಬ ಬಾಂಗ್ಲಾದೇಶದ ಸಿಬ್ಬಂದಿ ಇದ್ದರು ಎಂದು ಹೇಳಲಾಗಿತ್ತು. ಮಾರ್ಲಿನ್ ಲುವಾಂಡಾ ಹಡಗು ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಬಗ್ಗೆ ಭಾರತೀಯ ನೌಕದಳಕ್ಕೆ ಕರೆ ಬಂದಿದೆ. ಈ ಕರೆಗೆ ಸ್ಪಂದಿಸಿ ಭಾರತೀಯ ನೌಕಾಪಡೆಯು (Indian Navy) ತನ್ನ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ – INS ವಿಶಾಖಪಟ್ಟಣಂನ್ನು ಏಡೆನ್ ಕೊಲ್ಲಿಯಲ್ಲಿ ನಿಯೋಜಿಸಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Mon, 29 January 24