AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

21 ಭಾರತೀಯರಿದ್ದ ಬ್ರಿಟಿಷ್ ಹಡಗಿನ ಮೇಲೆ ಹೌತಿ ಬಂಡುಕೋರರ ದಾಳಿ, ಸಹಾಯಕ್ಕೆ ಧಾವಿಸಿದ ಭಾರತೀಯ ನೌಕಾಪಡೆ

ಬ್ರಿಟಿಷ್ ತೈಲ ಟ್ಯಾಂಕರ್​​ಗಳನ್ನು ಹೊತ್ತು ಬರುತ್ತಿದ್ದ ಮಾರ್ಲಿನ್ ಲುವಾಂಡಾ ಹಡಗಿನ ಮೇಲೆ ನೆನ್ನೆ ರಾತ್ರಿ (ಜ.26) ಯೆಮೆನ್‌ನ ಹೌತಿ ಬಂಡುಕೋರರು ದಾಳಿಯ ಮಾಡಿದ್ದಾರೆ. ಈ ಹಡಗಿನಲ್ಲಿ 21 ಭಾರತೀಯ ಸಿಬ್ಬಂದಿಗಳು ಹಾಗೂ ಒಬ್ಬ ಬಾಂಗ್ಲಾದೇಶದ ಸಿಬ್ಬಂದಿ ಇದ್ದರು ಎಂದು ಹೇಳಲಾಗಿದೆ. ಇದೀಗ ಭಾರತೀಯ ನೌಕಾಪಡೆಯು ತನ್ನ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ - INS ವಿಶಾಖಪಟ್ಟಣಂನ್ನು ಏಡೆನ್ ಕೊಲ್ಲಿಯಲ್ಲಿ ನಿಯೋಜಿಸಿದೆ ಎಂದು ಹೇಳಲಾಗಿದೆ.

21 ಭಾರತೀಯರಿದ್ದ ಬ್ರಿಟಿಷ್ ಹಡಗಿನ ಮೇಲೆ ಹೌತಿ ಬಂಡುಕೋರರ ದಾಳಿ, ಸಹಾಯಕ್ಕೆ ಧಾವಿಸಿದ ಭಾರತೀಯ ನೌಕಾಪಡೆ
ಮಾರ್ಲಿನ್ ಲುವಾಂಡಾ (MV Marlin Luanda) ಹಡಗಿನ ಮೇಲೆ ದಾಳಿ
Follow us
ಅಕ್ಷಯ್​ ಪಲ್ಲಮಜಲು​​
|

Updated on: Jan 27, 2024 | 6:06 PM

ಬ್ರಿಟಿಷ್ ತೈಲ ಟ್ಯಾಂಕರ್​​ಗಳನ್ನು ಹೊತ್ತು ಬರುತ್ತಿದ್ದ ಮಾರ್ಲಿನ್ ಲುವಾಂಡಾ (MV Marlin Luanda) ಹಡಗಿನ ಮೇಲೆ ನೆನ್ನೆ ರಾತ್ರಿ (ಜ.26) ಯೆಮೆನ್‌ನ ಹೌತಿ ಬಂಡುಕೋರರು ದಾಳಿಯ ಮಾಡಿದ್ದಾರೆ. ಈ ಹಡಗಿನಲ್ಲಿ 21 ಭಾರತೀಯ ಸಿಬ್ಬಂದಿಗಳು ಹಾಗೂ ಒಬ್ಬ ಬಾಂಗ್ಲಾದೇಶದ ಸಿಬ್ಬಂದಿ ಇದ್ದರು ಎಂದು ಹೇಳಲಾಗಿದೆ. ಮಾರ್ಲಿನ್ ಲುವಾಂಡಾ ಹಡಗು ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಬಗ್ಗೆ ಭಾರತೀಯ ನೌಕದಳಕ್ಕೆ ಕರೆ ಬಂದಿದೆ. ಇದೀಗ ಈ ಕರೆಗೆ ಸ್ಪಂದಿಸಿದ ಭಾರತೀಯ ನೌಕಾಪಡೆಯು (Indian Navy) ತನ್ನ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ – INS ವಿಶಾಖಪಟ್ಟಣಂನ್ನು ಏಡೆನ್ ಕೊಲ್ಲಿಯಲ್ಲಿ ನಿಯೋಜಿಸಿದೆ ಎಂದು ಹೇಳಲಾಗಿದೆ.

ದಾಳಿಗೆ ಒಳಾಗಿರುವ ಮಾರ್ಲಿನ್ ಲುವಾಂಡಾ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎನ್‌ಬಿಸಿಡಿ (Nuclear, Biological and Chemical Defence) ತಂಡವು ಅಗ್ನಿಶಾಮಕ ಸಾಧನಗಳೊಂದಿಗೆ ಮಾರ್ಲಿನ್ ಲುವಾಂಡಾ ಹಡಗಿನತ್ತ ತಲುಪಿದೆ. ಈಗಾಗಲೇ ಬೆಂಕಿಯನ್ನು ಹರಿಸುವ ಕಾರ್ಯಚರಣೆಯನ್ನು ನಡೆಸುತ್ತಿದೆ ಎಂದು ಹೇಳಲಾಗಿದೆ. ಮಾರ್ಲಿನ್ ಲುವಾಂಡಾ ಹಡಗಿನಲ್ಲಿರುವ ಸಿಬ್ಬಂದಿಗಳಿಗೆ ಕ್ಷಿಪಣಿ ವಿಧ್ವಂಸಕ – INS ವಿಶಾಖಪಟ್ಟಣಂ ಸಹಾಯ ಮಾಡುತ್ತಿದೆ ಎಂದು ವರದಿ ಹೇಳಿದೆ.

ಭಾರತೀಯ ನೌಕಾಪಡೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರಕ್ಷಣಾ ಕಾರ್ಯಚರಣೆಯನ್ನು ಮುಂದುವರಿಸಿದೆ. ಹಾಗೂ ವ್ಯಾಪಾರಿ ಹಡಗುಗಳನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ ಎಂದು ಯುಎಸ್​​​ ಹೇಳಿದ್ದಾರೆ. ಈ ದಾಳಿಯ ಹೊಣೆಯನ್ನು ಯೆಮೆನ್‌ನ ಹೌತಿ ಬಂಡುಕೋರರು ಹೊತ್ತುಕೊಂಡಿದ್ದಾರೆ. ಇನ್ನು ಈ ದಾಳಿಯನ್ನು ಯೆಮೆನ್‌ನ ಹೌತಿ ಬಂಡುಕೋರರೇ ನಡೆಸಿದ್ದಾರೆ ಎಂದು ಯುನೈಟೆಡ್ ಸ್ಟೇಟ್ಸ್ ದೃಢಪಡಿಸಿದೆ.

ಇದನ್ನೂ ಓದಿ: ಹಿಂದೂ ಮಹಾಸಾಗರದಲ್ಲಿ ಇಸ್ರೇಲ್‌ ಸರಕು-ಸಾಗಣೆ ಹಡಗಿನ ಮೇಲೆ ಡ್ರೋನ್ ದಾಳಿ

ಜನವರಿ 26 ರಂದು, ಸರಿಸುಮಾರು ರಾತ್ರಿ 7:45 ವೇಳೆ ಇರಾನ್ ಬೆಂಬಲಿತ ಹೌತಿ ಭಯೋತ್ಪಾದಕರು ಮಾರ್ಲಿನ್ ಲುವಾಂಡಾ ಹಡಗನ್ನು ಗುರಿಯಾಗಿಸಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ಮಾಡಿದ್ದಾರೆ. ಈ ಬಗ್ಗೆ US ಸೆಂಟ್ರಲ್ ಕಮಾಂಡ್ ಎಕ್ಸ್​​ನಲ್ಲಿ ಹಂಚಿಕೊಂಡಿದೆ. ದಾಳಿಗೆ ಒಳಗಾಗಿರುವ ಮಾರ್ಲಿನ್ ಲುವಾಂಡಾ ಹಡಗಿನ ಸಹಾಯಕ್ಕೆ USS ಕಾರ್ನಿ (DDG 64) ಮತ್ತು ಇತರ ಹಡಗುಗಳು ಧಾವಿಸಿದೆ. ಇತ್ತೀಚಿನ ದಿನಗಳಲ್ಲಿ ಹಡಗುಗಳ ಮೇಲೆ ದಾಳಿಗಳು ಹೆಚ್ಚಾಗುತ್ತಿದೆ ಎಂದು ಯುಎಸ್​​​​​​ ವರದಿಯನ್ನು ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ