AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಮಧ್ಯಪ್ರಾಚ್ಯದ ಸೋಲೊಪ್ಪಿದ ರಾಷ್ಟ್ರ”: ಇಂದೇ ಆಗುತ್ತ ಇರಾನ್​​​ನ ಸರ್ವನಾಶ? ಮಹತ್ವದ ಹೇಳಿಕೆ ನೀಡಿದ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಅನ್ನು 'ಮಧ್ಯಪ್ರಾಚ್ಯದ ಸೋಲಪ್ಪಿದ ರಾಷ್ಟ್ರ' ಎಂದು ಲೇವಡಿ ಮಾಡಿ, 'ಭೀಕರ ದಾಳಿ' ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ನ ನಿರಂತರ ದಾಳಿಯಿಂದಾಗಿ ಇರಾನ್ ಶರಣಾಗಬೇಕು ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಶರಣಾಗತಿ ನಿರಾಕರಿಸಿದ್ದಾರೆ. ಈ ಬೆಳವಣಿಗೆಗಳ ನಡುವೆ, ದುಬೈನಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ವಿಮಾನ ನಿಲ್ದಾಣವನ್ನು ತೆರವುಗೊಳಿಸಲಾಗಿದೆ.

ಮಧ್ಯಪ್ರಾಚ್ಯದ ಸೋಲೊಪ್ಪಿದ ರಾಷ್ಟ್ರ: ಇಂದೇ ಆಗುತ್ತ ಇರಾನ್​​​ನ ಸರ್ವನಾಶ? ಮಹತ್ವದ ಹೇಳಿಕೆ ನೀಡಿದ ಟ್ರಂಪ್
ಡೊನಾಲ್ಡ್ ಟ್ರಂಪ್
ಅಕ್ಷಯ್​ ಪಲ್ಲಮಜಲು​​
|

Updated on:Mar 07, 2026 | 6:41 PM

Share

ವಾಷಿಂಗ್ಟನ್ ಮಾ.7: ಇಸ್ರೇಲ್ ಮತ್ತು ಅಮೆರಿಕದ ದಾಳಿಯಿಂದ ಜರ್ಜರಿತವಾಗಿರುವ ಇರಾನ್ ಅನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಮಧ್ಯಪ್ರಾಚ್ಯದ ಸೋಲೊಪ್ಪಿದ ರಾಷ್ಟ್ರ” (Loser of the Middle East) ಎಂದು ಲೇವಡಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇಂದು (ಮಾರ್ಚ್ 7) ಇರಾನ್ ಮೇಲೆ “ಅತ್ಯಂತ ಭೀಕರ ದಾಳಿ” ನಡೆಯಲಿದೆ ಎಂದು ಅವರು ಎಚ್ಚರಿಸಿದ್ದಾರೆ.

“ನರಕದಂತೆ ಹೊಡೆತ ತಿಂದಿರುವ ಇರಾನ್, ಈಗ ನೆರೆರಾಷ್ಟ್ರಗಳ ಕ್ಷಮೆಯಾಚಿಸಿ ಶರಣಾಗಿದೆ. ಅಮೆರಿಕ ಮತ್ತು ಇಸ್ರೇಲ್‌ನ ನಿರಂತರ ದಾಳಿಯಿಂದಾಗಿ ಮಾತ್ರ ಇರಾನ್ ಈ ಭರವಸೆ ನೀಡಿದೆ,” ಎಂದು ಟ್ರಂಪ್ ಬರೆದಿದ್ದಾರೆ. ಇರಾನ್ ಇನ್ನು ಮುಂದೆ ಮಧ್ಯಪ್ರಾಚ್ಯದ ದಬಾಯಿಸುವ ರಾಷ್ಟ್ರವಾಗಿ ಉಳಿದಿಲ್ಲ, ಅದು ಸಂಪೂರ್ಣವಾಗಿ ಕುಸಿಯುವವರೆಗೂ ‘ಲೂಸರ್’ ಆಗಿಯೇ ಇರಲಿದೆ ಎಂದು ಟ್ರಂಪ್ ಕಿಚಾಯಿಸಿದ್ದಾರೆ.

ಶುಕ್ರವಾರವಷ್ಟೇ ಇರಾನ್ ಮುಂದೆ ಕಠಿಣ ಷರತ್ತು ವಿಧಿಸಿದ್ದ ಟ್ರಂಪ್, “ಬೇಷರತ್ ಶರಣಾಗತಿ” ಮಾತ್ರ ಯುದ್ಧ ಅಂತ್ಯಕ್ಕೆ ಇರುವ ಏಕೈಕ ದಾರಿ ಎಂದಿದ್ದಾರೆ.ಇರಾನ್ ಶರಣಾಗಿ ಹೊಸ ನಾಯಕತ್ವವನ್ನು ಒಪ್ಪಿಕೊಂಡರೆ, ಆ ದೇಶದ ಆರ್ಥಿಕತೆಯನ್ನು ಮತ್ತೆ ಕಟ್ಟಲು ಅಮೆರಿಕ ಸಹಾಯ ಮಾಡಲಿದೆ ಎಂಬ ಆಮಿಷವನ್ನೂ ಒಡ್ಡಿದ್ದಾರೆ.ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ನೆರೆರಾಷ್ಟ್ರಗಳ ಕ್ಷಮೆ ಕೇಳಿದ್ದರೂ, “ಶರಣಾಗತಿಯ ಕನಸನ್ನು ಶತ್ರುಗಳು ತಮ್ಮ ಸಮಾಧಿಗೆ ತೆಗೆದುಕೊಂಡು ಹೋಗಲಿ” ಎಂದು ಹೇಳುವ ಮೂಲಕ ಶರಣಾಗತಿಯನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: ನಮ್ಮನ್ನು ಕ್ಷಮಿಸಿ: ಮುಂದೆ ಈ ತಪ್ಪು ನಡೆಯುವುದಿಲ್ಲ, ಆದರೆ ಈ ದೇಶಗಳನ್ನು ಬಿಡುವುದಿಲ್ಲ ಎಂದ ಇರಾನ್

ಶನಿವಾರ ಬೆಳಿಗ್ಗೆ ದುಬೈನಲ್ಲಿ ಭಾರಿ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ಯುಎಇ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ. ವಿಶ್ವದ ಅತ್ಯಂತ ಜನನಿಬಿಡ ದುಬೈ ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಸುರಕ್ಷಿತ ಸುರಂಗಗಳಿಗೆ ಸ್ಥಳಾಂತರಿಸಲಾಗಿದೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:32 pm, Sat, 7 March 26

Follow Us
ದೇವರಂತಿರಬೇಕಾದ ವೈದ್ಯನಿಂದಲೇ ವೃದ್ಧ ರೋಗಿ ಮೇಲೆ ಮಾರಣಾಂತಿಕ ಹಲ್ಲೆ
ದೇವರಂತಿರಬೇಕಾದ ವೈದ್ಯನಿಂದಲೇ ವೃದ್ಧ ರೋಗಿ ಮೇಲೆ ಮಾರಣಾಂತಿಕ ಹಲ್ಲೆ
ಕೋಪವೇ ಮನುಷ್ಯನ ದಾರಿದ್ರ್ಯಕ್ಕೆ ಕಾರಣವಾ?
ಕೋಪವೇ ಮನುಷ್ಯನ ದಾರಿದ್ರ್ಯಕ್ಕೆ ಕಾರಣವಾ?
ಇಂದು ಈ ರಾಶಿಯವರು ಕಡಿಮೆ ಚರ್ಚೆ ಮಾಡಿದರೆ ಒಳಿತು
ಇಂದು ಈ ರಾಶಿಯವರು ಕಡಿಮೆ ಚರ್ಚೆ ಮಾಡಿದರೆ ಒಳಿತು
ಆಲ್ಕೋಹಾಲ್ ಸೇವಿಸುತ್ತಾ ಪ್ರಶ್ನೆ ಪತ್ರಿಕೆ ಪರಿಶೀಲಿಸುತ್ತಿರುವ ಶಿಕ್ಷಕ!
ಆಲ್ಕೋಹಾಲ್ ಸೇವಿಸುತ್ತಾ ಪ್ರಶ್ನೆ ಪತ್ರಿಕೆ ಪರಿಶೀಲಿಸುತ್ತಿರುವ ಶಿಕ್ಷಕ!
ಧ್ರುವ ಸರ್ಜಾ, ದರ್ಶನ್ ಮುನಿಸಿಗೆ ಕಾರಣ ಏನು? ಮಾಜಿ ಮ್ಯಾನೇಜರ್​ಗೆ ಪ್ರಶ್ನೆ
ಧ್ರುವ ಸರ್ಜಾ, ದರ್ಶನ್ ಮುನಿಸಿಗೆ ಕಾರಣ ಏನು? ಮಾಜಿ ಮ್ಯಾನೇಜರ್​ಗೆ ಪ್ರಶ್ನೆ
ಉಪಚುನಾವಣಾ ಫಲಿತಾಂಶದ ಬಗ್ಗೆ ಸಚಿವ ಜಮೀರ್​ ಎದುರು ಸಿಎಂ ಹೇಳಿದ್ದೇನು?
ಉಪಚುನಾವಣಾ ಫಲಿತಾಂಶದ ಬಗ್ಗೆ ಸಚಿವ ಜಮೀರ್​ ಎದುರು ಸಿಎಂ ಹೇಳಿದ್ದೇನು?
ಶ್ರೇಯಸ್ ಹಿಡಿದ ಕ್ಯಾಚ್ ನೋಡಿ ದಂಗಾದ ಮುಂಬೈ ಆಟಗಾರರು; ವಿಡಿಯೋ
ಶ್ರೇಯಸ್ ಹಿಡಿದ ಕ್ಯಾಚ್ ನೋಡಿ ದಂಗಾದ ಮುಂಬೈ ಆಟಗಾರರು; ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮಿ; ಕ್ಯಾಮೆರಾ ನೋಡಿ ಪ್ರತಿಕ್ರಿಯೆ
ದರ್ಶನ್ ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮಿ; ಕ್ಯಾಮೆರಾ ನೋಡಿ ಪ್ರತಿಕ್ರಿಯೆ
ಅಮಿತ್ ಶಾರನ್ನು ನೋಡಿ ಚಾಣಕ್ಯನೂ ಶಾಕ್ ಆಗುತ್ತಿದ್ದ;ಪ್ರಿಯಾಂಕಾ ಗಾಂಧಿ ಲೇವಡಿ
ಅಮಿತ್ ಶಾರನ್ನು ನೋಡಿ ಚಾಣಕ್ಯನೂ ಶಾಕ್ ಆಗುತ್ತಿದ್ದ;ಪ್ರಿಯಾಂಕಾ ಗಾಂಧಿ ಲೇವಡಿ
ಐಪಿಎಲ್‌ನಲ್ಲಿ ವಿಶೇಷ ಶತಕ ಪೂರೈಸಿದ ಅರ್ಶ್‌ದೀಪ್ ಸಿಂಗ್
ಐಪಿಎಲ್‌ನಲ್ಲಿ ವಿಶೇಷ ಶತಕ ಪೂರೈಸಿದ ಅರ್ಶ್‌ದೀಪ್ ಸಿಂಗ್