AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITR Scam: ಐಟಿ ರಿಟರ್ನ್ ಸಲ್ಲಿಸುವಾಗ ಎಚ್ಚರ! ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ ನಕಲಿ ಆದಾಯ ತೆರಿಗೆ ನೋಟಿಸ್

ಐಟಿ ರಿಟರ್ನ್ (ITR) ಸಲ್ಲಿಕೆದಾರರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ವಾಟ್ಸಾಪ್‌ನಲ್ಲಿ ನಕಲಿ ಆದಾಯ ತೆರಿಗೆ ನೋಟಿಸ್‌ಗಳನ್ನು ಕಳುಹಿಸುತ್ತಿದ್ದಾರೆ. 'ITD.zip' ಎಂಬ ಫೈಲ್ ಡೌನ್‌ಲೋಡ್ ಮಾಡಿದ ತಕ್ಷಣ ಫೋನ್‌ಗೆ 'ಮಾಲ್‌ವೇರ್' ಪ್ರವೇಶಿಸಿ ಬ್ಯಾಂಕಿಂಗ್ ಒಟಿಪಿ ಹಾಗೂ ರಹಸ್ಯ ವಿವರಗಳನ್ನು ಕದಿಯುತ್ತದೆ. ಇಂತಹ ನಕಲಿ ವಾಟ್ಸಾಪ್ ಸಂದೇಶಗಳು ಹಾಗೂ ಅಪಾಯಕಾರಿ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಸೈಬರ್ ತಜ್ಞರು ತೀವ್ರ ಎಚ್ಚರಿಕೆ ನೀಡಿದ್ದಾರೆ.

ITR Scam: ಐಟಿ ರಿಟರ್ನ್ ಸಲ್ಲಿಸುವಾಗ ಎಚ್ಚರ! ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ ನಕಲಿ ಆದಾಯ ತೆರಿಗೆ ನೋಟಿಸ್
ಸಾಂದರ್ಭಿಕ ಚಿತ್ರImage Credit source: gettyimages.com
ಭಾವನಾ ಹೆಗಡೆ
|

Updated on:Aug 01, 2026 | 9:34 AM

Share

ಮುಖ್ಯಾಂಶಗಳು

  • ಆದಾಯ ತೆರಿಗೆ ಪಾವತಿದಾರರನ್ನು ಗುರಿಯಾಗಿಸಿಕೊಂಡು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ ನಕಲಿ ನೋಟಿಸ್.
  • ಫೈಲ್ ಡೌನ್‌ಲೋಡ್ ಮಾಡಿದ ತಕ್ಷಣ ಆಂಡ್ರಾಯ್ಡ್ ಫೋನ್‌ಗಳಿಗೆ ಬ್ಯಾಂಕಿಂಗ್ ಮಾಲ್‌ವೇರ್ ದಾಳಿ.
  • ಆದಾಯ ತೆರಿಗೆ ಇಲಾಖೆಯ ಹೆಸರಿನ ನಕಲಿ ವಾಟ್ಸಾಪ್ ನೋಟಿಸ್‌ಗಳ ಬಗ್ಗೆ ಎಚ್ಚರ.

ಬೆಂಗಳೂರು, ಆಗಸ್ಟ್ 01: ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಅವಧಿ ಮುಕ್ತಾಯಗೊಳ್ಳುತ್ತಿರುವ ಬೆನ್ನಲ್ಲೇ ಸೈಬರ್ ವಂಚಕರು ಸಕ್ರಿಯರಾಗಿದ್ದು, ತೆರಿಗೆದಾರರನ್ನು ಗುರಿಯಾಗಿಸಿಕೊಂಡು ವಾಟ್ಸಾಪ್‌ನಲ್ಲಿ ನಕಲಿ ಆದಾಯ ತೆರಿಗೆ ನೋಟಿಸ್‌ಗಳನ್ನು ಕಳುಹಿಸುತ್ತಿದ್ದಾರೆ. ಸರ್ಕಾರಿ ಲಾಂಛನ ಹಾಗೂ ಅಧಿಕೃತ ದಾಖಲೆಗಳಂತೆ ಕಾಣುವ ನಕಲಿ ಪಿಡಿಎಫ್‌/ಫೈಲ್‌ಗಳನ್ನು ಕಳುಹಿಸಿ, ಬಳಕೆದಾರರ ಬ್ಯಾಂಕಿಂಗ್ ಪಾಸ್‌ವರ್ಡ್ ಹಾಗೂ ಒಟಿಪಿ (OTP) ಕದಿಯುವ ತಂತ್ರಜ್ಞಾನ ಆಧಾರಿತ ಅತಿ ದೊಡ್ಡ ಸೈಬರ್ ವಂಚನೆ ಜಾಲ ಬೆಳಕಿಗೆ ಬಂದಿದೆ.

ವಂಚನೆಯ ಜಾಲ ಹೇಗಿದೆ ಗೊತ್ತಾ?

‘ITD.zip’ ಎಂಬ ಹೆಸರಿನ ಫೈಲ್ ಒಂದನ್ನು ವಾಟ್ಸಾಪ್ ಸಂದೇಶದ ಜೊತೆ ಕಳುಹಿಸಲಾಗುತ್ತಿದ್ದು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 271(1)(c) ಅಡಿಯಲ್ಲಿ ನಿಮ್ಮ ಖಾತೆಯಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ನಮೂದಿಸಲಾಗುತ್ತದೆ. 72 ಗಂಟೆಗಳ ಒಳಗೆ ಪ್ರತಿಕ್ರಿಯಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭೀತಿ ಹುಟ್ಟಿಸಲಾಗುತ್ತದೆ.

ಈ ಫೈಲ್ ಅಥವಾ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಅಪಾಯಕಾರಿ ‘ಮಾಲ್‌ವೇರ್’ ಸಾಫ್ಟ್‌ವೇರ್ ಇನ್‌ಸ್ಟಾಲ್ ಆಗುತ್ತದೆ. ಇದು ಸ್ಮಾರ್ಟ್‌ಫೋನ್‌ನಲ್ಲಿ ಬರುವ ಬ್ಯಾಂಕಿಂಗ್ ಒಟಿಪಿ, ಎಸ್‌ಎಮ್‌ಎಸ್ ಹಾಗೂ ರಹಸ್ಯ ಪಾಸ್‌ವರ್ಡ್‌ಗಳನ್ನು ನೇರವಾಗಿ ವಂಚಕರಿಗೆ ತಲುಪಿಸುತ್ತದೆ. ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ ರೀತಿಯಲ್ಲೇ ಕಾಣುವ ಪೋರ್ಟಲ್‌ಗಳನ್ನು ಸೃಷ್ಟಿಸಿ, ಅಲ್ಲಿ ಪಾನ್ (PAN), ಆಧಾರ್ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸುವಂತೆ ಪ್ರಚೋದಿಸಲಾಗುತ್ತಿದೆ.

ಸೈಬರ್ ತಜ್ಞರು ನೀಡಿದ ಮುನ್ನೆಚ್ಚರಿಕೆ ಹಾಗೂ ಸಲಹೆಗಳು

1. ವಾಟ್ಸಾಪ್‌ನಲ್ಲಿ ನೋಟಿಸ್ ಬರಲ್ಲ: ಆದಾಯ ತೆರಿಗೆ ಇಲಾಖೆಯು ಎಂದಿಗೂ ವಾಟ್ಸಾಪ್ ಅಥವಾ ವಯಕ್ತಿಕ ಮೆಸೇಜ್ ಮೂಲಕ ಅಧಿಕೃತ ನೋಟಿಸ್‌ಗಳನ್ನು ಕಳುಹಿಸುವುದಿಲ್ಲ. 2. ನೇರ ವೆಬ್‌ಸೈಟ್ ಬಳಸಿ: ಯಾವುದೇ ನೋಟಿಸ್ ಬಂದರೂ ನೇರವಾಗಿ ಅಧಿಕೃತ ಇ-ಫೈಲಿಂಗ್ ಪೋರ್ಟಲ್ (incometax.gov.in) ಗೆ ಲಾಗಿನ್ ಆಗಿ ‘ಡಿಐಎನ್’ (Document Identification Number) ಪರಿಶೀಲಿಸಿ. 3. ಸಂದೇಹಾಸ್ಪದ ಲಿಂಕ್ ಕ್ಲಿಕ್ ಮಾಡಬೇಡಿ: ವಾಟ್ಸಾಪ್‌ನಲ್ಲಿ ಬರುವ ZIP ಅಥವಾ EXE ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. 4. ಸೈಬರ್ ದೂರು: ವಂಚನೆಗೆ ಒಳಗಾಗಿದ್ದರೆ ತಕ್ಷಣ 1930 ಸೈಬರ್ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿ ದೂರು ನೀಡಿ.

ಸೈಬರ್ ಭದ್ರತಾ ಸಂಸ್ಥೆ ‘ಕ್ಲೌಡ್‌ಸೆಕ್’ (CloudSek) ಈ ಕುರಿತು ತೀವ್ರ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ವಾಟ್ಸಾಪ್‌ನಲ್ಲಿ ಬರುವ ಇನ್-ಕಮ್ ಟ್ಯಾಕ್ಸ್ ನೋಟಿಸ್‌ಗಳನ್ನು ನಂಬಬೇಡಿ ಎಂದು ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:33 am, Sat, 1 August 26

Follow Us
ಮೆಟ್ರೋ ಕಾಮಗಾರಿ ವೇಳೆ ನೆಲಕ್ಕೆ ಬಿದ್ದ ಬೃಹತ್ ಶೀಟ್: ತಪ್ಪಿದ ಭಾರಿ ದುರಂತ
ಮೆಟ್ರೋ ಕಾಮಗಾರಿ ವೇಳೆ ನೆಲಕ್ಕೆ ಬಿದ್ದ ಬೃಹತ್ ಶೀಟ್: ತಪ್ಪಿದ ಭಾರಿ ದುರಂತ
ಕರ್ನಾಟಕ ಎಸ್‌ಐಆರ್ ಅವಧಿ ಆಗಸ್ಟ್ 8ರ ಬದಲು ಆಗಸ್ಟ್ 17ರ ತನಕ ವಿಸ್ತರಣೆ
ಕರ್ನಾಟಕ ಎಸ್‌ಐಆರ್ ಅವಧಿ ಆಗಸ್ಟ್ 8ರ ಬದಲು ಆಗಸ್ಟ್ 17ರ ತನಕ ವಿಸ್ತರಣೆ
ವೃಷಭ ರಾಶಿ ರೋಹಿಣಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ವೃಷಭ ರಾಶಿ ರೋಹಿಣಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಬಿಗ್​​ಬಾಸ್​ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ​​ಸ್ಪರ್ಧಿಗಳ ಕೆಲಸವೇನು?
ಬಿಗ್​​ಬಾಸ್​ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ​​ಸ್ಪರ್ಧಿಗಳ ಕೆಲಸವೇನು?
ಒಡಿಶಾದಲ್ಲಿ ಕೈಮಗ್ಗದ ಬಟ್ಟೆ ಖರೀದಿಸಿದ ಪ್ರಲ್ಹಾದ್ ಜೋಶಿ
ಒಡಿಶಾದಲ್ಲಿ ಕೈಮಗ್ಗದ ಬಟ್ಟೆ ಖರೀದಿಸಿದ ಪ್ರಲ್ಹಾದ್ ಜೋಶಿ
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ