AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಡಿಗೋ ತರಬೇತಿ ಪೈಲಟ್‌ನಿಂದ ಜಾತಿ ನಿಂದನೆ ಆರೋಪ; ಕ್ಲಿಯರೆನ್ಸ್ ನಿರಾಕರಿಸಿದ ಬೆನ್ನಲ್ಲೇ ಹಿರಿಯ ಅಧಿಕಾರಿಗಳ ವಿರುದ್ಧ ದೂರು

ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋ ತರಬೇತಿ ಪೈಲಟ್ ಒಬ್ಬರು ತಮ್ಮ ಹಿರಿಯ ಅಧಿಕಾರಿಗಳು ಹಾಗೂ ಪರಿಶೀಲನಾ ಅಧಿಕಾರಿಯ ವಿರುದ್ಧ ಗಂಭೀರ ಜಾತಿ ನಿಂದನೆ ಮತ್ತು ಕಿರುಕುಳದ ಆರೋಪ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವಿಮಾನ ಹಾರಾಟದ ಕ್ಲಿಯರೆನ್ಸ್ ನಿರಾಕರಿಸಲ್ಪಟ್ಟ ನಂತರ ಈ ದೂರು ದಾಖಲಾಗಿದೆ. ತಮ್ಮ ಪರಿಶಿಷ್ಟ ಜಾತಿ (ಎಸ್​ಸಿ) ಹಿನ್ನೆಲೆಯನ್ನು ಉಲ್ಲೇಖಿಸಿ ಪದೇಪದೆ ಕೀಳಾಗಿ ಮಾತನಾಡುತ್ತಿದ್ದರು. ಉದ್ದೇಶಪೂರ್ವಕವಾಗಿ ತಮ್ಮ ವೃತ್ತಿಪರ ಮೌಲ್ಯಮಾಪನದಲ್ಲಿ ತಾರತಮ್ಯ ಎಸಗಿದ್ದಾರೆ ಎಂದು ದೂರುದಾರ ಪೈಲಟ್ ಆರೋಪಿಸಿದ್ದಾರೆ.

ಇಂಡಿಗೋ ತರಬೇತಿ ಪೈಲಟ್‌ನಿಂದ ಜಾತಿ ನಿಂದನೆ ಆರೋಪ; ಕ್ಲಿಯರೆನ್ಸ್ ನಿರಾಕರಿಸಿದ ಬೆನ್ನಲ್ಲೇ ಹಿರಿಯ ಅಧಿಕಾರಿಗಳ ವಿರುದ್ಧ ದೂರು
ಇಂಡಿಗೋImage Credit source: Getty Images
ಸುಷ್ಮಾ ಚಕ್ರೆ
|

Updated on: Oct 03, 2026 | 5:05 PM

Share

ನವದೆಹಲಿ, ಅಕ್ಟೋಬರ್ 3: ಭಾರತದ ಖಾಸಗಿ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಕಂಪನಿಯ ತರಬೇತಿ ಪೈಲಟ್ ಒಬ್ಬರು, ತಮ್ಮ ತರಬೇತಿಯ ಚೆಕ್ ರೈಡ್ ಮೌಲ್ಯಮಾಪನದಲ್ಲಿ ಕ್ಲಿಯರೆನ್ಸ್ ನಿರಾಕರಿಸಿದ ಬಳಿಕ ತಮ್ಮ ಮೂವರು ಹಿರಿಯ ಪೈಲಟ್‌ಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದೂರು ನೀಡಿದ್ದಾರೆ. ತಮ್ಮ ಮೌಲ್ಯಮಾಪನ ನಡೆಸಿದ ಮೂವರು ಹಿರಿಯ ತರಬೇತುದಾರ ಪೈಲಟ್‌ಗಳು ತಮ್ಮ ಜಾತಿಯ (ಎಸ್​ಸಿ) ಹಿನ್ನೆಲೆಯನ್ನು ಗುರಿಯಾಗಿಸಿಕೊಂಡು ಶೋಷಣೆ ಮಾಡಿದ್ದಾರೆ, ಜಾತಿ ನಿಂದನೆ ಮಾಡಿದ್ದಾರೆ ಮತ್ತು ತಮಗೆ ಮಾನಸಿಕ ಯಾತನೆ ನೀಡಿದ್ದಾರೆ ಎಂದು ದೂರುದಾರ ತರಬೇತಿ ಪೈಲಟ್ ಆರೋಪಿಸಿದ್ದಾರೆ.

ತಾವು ಅರ್ಹತೆ ಹೊಂದಿದ್ದರೂ ಸಹ ಹಿರಿಯ ಪೈಲಟ್‌ಗಳು ಉದ್ದೇಶಪೂರ್ವಕವಾಗಿಯೇ ತಮ್ಮ ಫ್ಲೈಯಿಂಗ್ ಕ್ಲಿಯರೆನ್ಸ್ ಮತ್ತು ಅನುಮೋದನೆಯನ್ನು ತಡೆಹಿಡಿದಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಾತಿ ನಿಂದನೆ ಆರೋಪ:

ತರಬೇತಿ ಅವಧಿಯಲ್ಲಿ ತಮಗೆ ಮಾನಸಿಕ ಕಿರುಕುಳ ನೀಡಲಾಗಿದೆ ಮತ್ತು ಪರಿಶೀಲನೆ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಫೇಲ್ ಮಾಡಿ, ವಿಮಾನ ಹಾರಾಟದ ಕ್ಲಿಯರೆನ್ಸ್ ನಿರಾಕರಿಸಲಾಗಿದೆ ಎಂದು ತರಬೇತಿ ಪೈಲಟ್ ಆರೋಪಿಸಿದ್ದಾರೆ. ಹಿರಿಯ ಅಧಿಕಾರಿಗಳು ತಮ್ಮ ಜಾತಿಯನ್ನು ಗುರಿಯಾಗಿಸಿಕೊಂಡು ಶೋಷಣೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕೋಲ್ಕತ್ತಾ-ಚೆನ್ನೈ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ರನ್‌ವೇ 25ರಲ್ಲಿ ತುರ್ತು ಭೂಸ್ಪರ್ಶ

ವಿಮಾನಯಾನ ಸಂಸ್ಥೆಯ ಸ್ಪಷ್ಟನೆ:

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಇಂಡಿಗೋ ಸಂಸ್ಥೆಯು, ವಿಮಾನಯಾನದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ವೃತ್ತಿಪರ ಮಾನದಂಡಗಳಿಗೆ ಅತ್ಯುನ್ನತ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದೆ. ತರಬೇತಿ ಪೈಲಟ್‌ಗಳ ಮೌಲ್ಯಮಾಪನವನ್ನು ಡಿಸಿಜಿಎ ಮಾನದಂಡಗಳು ಮತ್ತು ಸುರಕ್ಷತಾ ನಿಯಮಗಳ ಪ್ರಕಾರವೇ ಸಂಪೂರ್ಣ ಪಾರದರ್ಶಕವಾಗಿ ನಡೆಸಲಾಗುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಅಂತರಿಕ ತನಿಖೆಗೆ ಸೂಚನೆ:

ತರಬೇತಿ ಪೈಲಟ್ ನೀಡಿದ ದೂರಿನ ಆಧಾರದ ಮೇಲೆ ಸಂಸ್ಥೆಯು ಆಂತರಿಕ ತನಿಖಾ ಸಮಿತಿಯನ್ನು ರಚಿಸಿದ್ದು, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಮಾರ್ಗದರ್ಶಿ ಸೂತ್ರಗಳಡಿ ತನಿಖೆ ಮುಂದುವರಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More