AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನ; ಡೆಡ್​ಲೈನ್ ಮಿಸ್ ಆದರೆ ಏನೆಲ್ಲಾ ದಂಡ, ಶುಲ್ಕಗಳಿವೆ ಗೊತ್ತಾ?

Effects of missing ITR deadline: 2025-26ನೇ ಸಾಲಿನ ವರ್ಷದ ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಈ ಡೆಡ್​ಲೈನ್​ನೊಳಗೆ ರಿಟರ್ನ್ ಫೈಲ್ ಮಾಡದಿದ್ದರೆ ವಿವಿಧ ರೀತಿಯ ದಂಡಗಳು ಅನ್ವಯ ಆಗುತ್ತವೆ. ತಡಪಾವತಿ ಶುಲ್ಕ, ಬಡ್ಡಿ ಅನ್ವಯ ಆಗುತ್ತದೆ. ರೀಫಂಡ್, ನಷ್ಟದ ಕ್ಯಾರಿ ಫಾರ್ವರ್ಡ್ ಇತ್ಯಾದಿ ಸೌಲಭ್ಯಗಳಿಂದ ವಂಚಿತರಾಗಬಹುದು.

ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನ; ಡೆಡ್​ಲೈನ್ ಮಿಸ್ ಆದರೆ ಏನೆಲ್ಲಾ ದಂಡ, ಶುಲ್ಕಗಳಿವೆ ಗೊತ್ತಾ?
ಆದಾಯ ತೆರಿಗೆ ರಿಟರ್ನ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 16, 2026 | 4:06 PM

Share

ಮುಖ್ಯಾಂಶಗಳು

  • 2025-26ನೇ ಸಾಲಿನ ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ.
  • ಈ ಡೆಡ್​ಲೈನ್​ನೊಳಗೆ ರಿಟರ್ನ್ ಫೈಲ್ ಮಾಡದಿದ್ದರೆ ದಂಡಗಳು ಅನ್ವಯ ಆಗುತ್ತವೆ.
  • ತಡಪಾವತಿ ಶುಲ್ಕ, ಬಡ್ಡಿ ಅನ್ವಯ ಆಗುತ್ತದೆ. ರೀಫಂಡ್, ನಷ್ಟದ ಕ್ಯಾರಿ ಫಾರ್ವರ್ಡ್ ಸಿಗದಿರಬಹುದು.

ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಕೊನೆಯ ದಿನಾಂಕ ಜುಲೈ 31ಕ್ಕೆ ಇದೆ. ನೀವು ಇನ್ನೂ ರಿಟರ್ನ್ ಸಲ್ಲಿಸಿಲ್ಲ ಎಂದಾದಲ್ಲಿ ತ್ವರಿತ ಮಾಡಿ. ಡೆಡ್​ಲೈನ್ ತಪ್ಪಿಸಿಕೊಂಡರೆ ನಿಮ್ಮ ಜೇಬಿಗೆ ಕತ್ತರಿ ಬಿದ್ದೀತು. ಐಟಿಆರ್ ಅನ್ನು ನಿಗದಿತ ಅವಧಿಯೊಳಗೆ ಸಲ್ಲಿಸಿಲ್ಲವೆಂದರೆ ದಂಡ, ಬಡ್ಡಿ ಇತ್ಯಾದಿ ತಲೆನೋವು ಭರಿಸಬೇಕಾಗುತ್ತದೆ. ಈ ಬಾರಿ ಗಡುವನ್ನು ವಿಸ್ತರಿಸುವ ಸಾಧ್ಯತೆಗಳು ತೀರಾ ಕಡಿಮೆ ಇರುವುದರಿಂದ, ತೆರಿಗೆದಾರರು ಕೊನೆಯ ದಿನದವರೆಗೂ ಕಾಯದೆ ತಕ್ಷಣವೇ ಐಟಿಆರ್ ಸಲ್ಲಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಜುಲೈ 31ರ ಒಳಗಾಗಿ ನಿಮ್ಮ ತೆರಿಗೆ ರಿಟರ್ನ್ ಫೈಲ್ ಮಾಡದಿದ್ದರೆ ನೀವು ಎಷ್ಟು ದಂಡ ತೆರಬೇಕಾಗಬಹುದು ಹಾಗೂ ಏನೆಲ್ಲಾ ನಷ್ಟಗಳನ್ನು ಅನುಭವಿಸಬೇಕಾಗಬಹುದು ಎಂಬ ಪೂರ್ಣ ಮಾಹಿತಿ ಇಲ್ಲಿದೆ.

ತಡವಾಗಿ ಸಲ್ಲಿಕೆಗೆ ಬೀಳುವ ದಂಡ

ಆದಾಯ ತೆರಿಗೆ ಕಾನೂನಿನ ಸೆಕ್ಷನ್ 234F ಅಡಿಯಲ್ಲಿ ತಡಪಾವತಿ ಶುಲ್ಕ ವಿಧಿಸುವ ಅವಕಾಶ ಇರುತ್ತದೆ. ಜುಲೈ 31ರ ನಂತರವೂ ನೀವು ವಿಳಂಬಿತ ರಿಟರ್ನ್ (Belated Return) ಅನ್ನು ಡಿಸೆಂಬರ್ 31ರ ಒಳಗೆ ಸಲ್ಲಿಸಲು ಅವಕಾಶವಿದೆ. ಆದರೆ ಇದಕ್ಕೆ ದಂಡ ಪಾವತಿಸಬೇಕಾಗುತ್ತದೆ:

  • ರೂ. 5,00,000 ಕ್ಕಿಂತ ಹೆಚ್ಚು ಆದಾಯವಿದ್ದರೆ: ಜುಲೈ 31 ರ ನಂತರ ಐಟಿಆರ್ ಸಲ್ಲಿಸಿದರೆ ರೂ. 5,000 ತಡಪಾವತಿ ಶುಲ್ಕ (Late Fee) ವಿಧಿಸಲಾಗುತ್ತದೆ.
  • ರೂ. 5,00,000 ಅಥವಾ ಅದಕ್ಕಿಂತ ಕಡಿಮೆ ಆದಾಯವಿದ್ದರೆ: ವಿಳಂಬ ಶುಲ್ಕವನ್ನು ರೂ. 1,000 ಕ್ಕೆ ಸೀಮಿತಗೊಳಿಸಲಾಗಿದೆ.
  • ತೆರಿಗೆ ವಿನಾಯಿತಿ ಮಿತಿಗಿಂತ ಕಡಿಮೆ ಆದಾಯವಿದ್ದರೆ: ಯಾವುದೇ ದಂಡ ಇರುವುದಿಲ್ಲ (ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ).

ಇದನ್ನೂ ಓದಿ: ಹೊಸ ಐಆರ್​ಸಿಟಿಸಿ ವೆಬ್​ಸೈಟ್ ಸಿದ್ಧ; ಬೀಟಾ ಆವೃತ್ತಿ ಬಿಡುಗಡೆ; ರೈಲ್ವೆ ಟಿಕೆಟ್ ಬುಕಿಂಗ್ ಇನ್ಮುಂದೆ ಸರಳ

ಬಾಕಿ ತೆರಿಗೆಯ ಮೇಲೆ ಮಾಸಿಕ ಶೇ. 1 ಬಡ್ಡಿ

ಸೆಕ್ಷನ್ 234A ಪ್ರಕಾರ, ನೀವು ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಮೊತ್ತ ಇನ್ನೂ ಬಾಕಿ ಉಳಿದಿದ್ದರೆ ಮತ್ತು ನೀವು ಜುಲೈ 31 ರ ಒಳಗೆ ಐಟಿಆರ್ ಸಲ್ಲಿಸದಿದ್ದರೆ, ಆಗಸ್ಟ್ 1 ರಿಂದ ಐಟಿಆರ್ ಸಲ್ಲಿಸುವ ದಿನಾಂಕದವರೆಗೆ ಪ್ರತಿ ತಿಂಗಳಿಗೆ ನಿಮ್ಮ ಪಾವತಿ ಮೊತ್ತದ ಮೇಲೆ ಶೇ. 1 ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ನಷ್ಟಗಳನ್ನು ಕ್ಯಾರಿ ಫಾರ್ವರ್ಡ್ ಮಾಡಲು ಸಾಧ್ಯವಿಲ್ಲ

ವ್ಯಾಪಾರ, ಷೇರು ಮಾರುಕಟ್ಟೆ (Capital Gains) ಅಥವಾ ಇತರ ಮೂಲಗಳಿಂದ ನಿಮಗೆ ಈ ವರ್ಷ ನಷ್ಟ ಉಂಟಾಗಿದ್ದರೆ, ಆ ನಷ್ಟವನ್ನು ಮುಂದಿನ ವರ್ಷದ ಲಾಭದ ಎದುರು ಸರಿಹೊಂದಿಸಲು (Set-off) ಅವಕಾಶ ಇರುತ್ತದೆ. ಆ ಅವಕಾಶ ಸಿಗಬೇಕೆಂದರೆ ಜುಲೈ 31 ರ ಒಳಗಾಗಿ ಐಟಿಆರ್ ಸಲ್ಲಿಸುವುದು ಕಡ್ಡಾಯ. ತಡವಾಗಿ ರಿಟರ್ನ್ಸ್ ಸಲ್ಲಿಸಿದರೆ ಈ ನಷ್ಟಗಳನ್ನು ಮುಂದಿನ ವರ್ಷಕ್ಕೆ ಕೊಂಡೊಯ್ಯುವ (Carry Forward) ಅವಕಾಶವನ್ನು ಕಳೆದುಕೊಳ್ಳುತ್ತೀರಿ.

ರಿಫಂಡ್ ಪಡೆಯುವುದು ವಿಳಂಬವಾಗುತ್ತದೆ

ನೀವು ಹೆಚ್ಚಿನ ಟಿಡಿಎಸ್ (TDS) ಕಡಿತದಿಂದಾಗಿ ಸರ್ಕಾರದಿಂದ ರೀಫಂಡ್ (Tax Refund) ಪಡೆಯಬೇಕಾಗಿದ್ದರೆ, ಜುಲೈ 31 ರ ಒಳಗೆ ಸಲ್ಲಿಸುವುದರಿಂದ ರೀಫಂಡ್ ಬೇಗನೆ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ತಡವಾಗಿ ಸಲ್ಲಿಸಿದಷ್ಟೂ ರೀಫಂಡ್ ಪ್ರಕ್ರಿಯೆ ತಡವಾಗುತ್ತದೆ ಹಾಗೂ ನಿಮ್ಮ ಹಣ ಸಿಗುವುದು ವಿಳಂಬವಾಗುತ್ತದೆ.

ಇದನ್ನೂ ಓದಿ: ಮೊಬೈಲ್ ಫೋನ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್; ಗೇಮ್ ಚೇಂಜರ್ ಯೋಜನೆ; ಏನಿದರ ವಿಶೇಷತೆ?

ಹಳೆಯ ಟ್ಯಾಕ್ಸ್ ರಿಜೈಮ್ ಆಯ್ಕೆ ಇರುವುದಿಲ್ಲ

ಒಂದು ವೇಳೆ ನೀವು ಈ ವರ್ಷ ಜುಲೈ 31 ರ ಗಡುವು ಮೀರಿದ ನಂತರ ವಿಳಂಬಿತ ರಿಟರ್ನ್ (Belated Return) ಸಲ್ಲಿಸಿದರೆ, ನಿಮಗೆ ಹಳೆಯ ತೆರಿಗೆ ಪದ್ಧತಿಯನ್ನು (Old Tax Regime) ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುವುದಿಲ್ಲ. ನೀವು ಕಡ್ಡಾಯವಾಗಿ ಹೊಸ ತೆರಿಗೆ ಪದ್ಧತಿಯಡಿಯಲ್ಲೇ (New Tax Regime) ಐಟಿಆರ್ ಸಲ್ಲಿಸಬೇಕಾಗುತ್ತದೆ.

ಜೈಲು ಶಿಕ್ಷೆಯೂ ಆಗಬಹುದು ಎಚ್ಚರ!

ತೆರಿಗೆ ಇಲಾಖೆಯು ನೋಟಿಸ್ ನೀಡಿದ ಮೇಲೂ ಉದ್ದೇಶಪೂರ್ವಕವಾಗಿ ತೆರಿಗೆ ರಿಟರ್ನ್ಸ್ ಸಲ್ಲಿಸದೆ ತಪ್ಪಿಸಿಕೊಳ್ಳುವವರಿಗೆ ಸೆಕ್ಷನ್ 276CC ಅಡಿಯಲ್ಲಿ 3 ತಿಂಗಳಿನಿಂದ 2 ವರ್ಷಗಳವರೆಗೆ ಮತ್ತು ಬಾಕಿ ತೆರಿಗೆ ಮೊತ್ತ ದೊಡ್ಡದಾಗಿದ್ದರೆ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಕೊನೆಯ ದಿನಗಳಲ್ಲಿ ವೆಬ್‌ಸೈಟ್ ಸರ್ವರ್ ನಿಧಾನವಾಗುವ ಸಾಧ್ಯತೆಗಳಿರುವುದರಿಂದ ಇಂದೇ ನಿಮ್ಮ Form 16, Form 26AS ಮತ್ತು AIS (Annual Information Statement) ದಾಖಲೆಗಳನ್ನು ಪರಿಶೀಲಿಸಿ, ತಕ್ಷಣವೇ ಐಟಿಆರ್ ಸಲ್ಲಿಸಿ ನಿಶ್ಚಿಂತರಾಗಿರಿ.

ಆದಾಯ ತೆರಿಗೆ ರಿಟರ್ನ್ಸ್- ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು (FAQs)

ಪ್ರಶ್ನೆ: ಐಟಿಆರ್ ಸಲ್ಲಿಸಲು ಯಾವಾಗ ಕೊನೆಯ ದಿನ?

ಉತ್ತರ: ಸಾಮಾನ್ಯವಾಗಿ ಪ್ರತೀ ವರ್ಷ ಐಟಿಆರ್ ಸಲ್ಲಿಕೆಗೆ ಜುಲೈ 31 ಡೆಡ್​ಲೈನ್ ಇರುತ್ತದೆ. 2025-26ರ ವರ್ಷಕ್ಕೂ ಅದೇ ಗಡುವು ಇದೆ.

ಪ್ರಶ್ನೆ: ಜುಲೈ 31ಕ್ಕೆ ಐಟಿಆರ್ ಸಲ್ಲಿಸದಿದ್ದರೆ ಏನಾಗುತ್ತದೆ?

ಉತ್ತರ: ಜುಲೈ 31ರೊಳಗೆ ಐಟಿಆರ್ ಸಲ್ಲಿಸಲು ಆಗದಿದ್ದರೆ ಡಿಸೆಂಬರ್ 31ರವರೆಗೂ ಅವಕಾಶ ಇರುತ್ತದೆ. ಆದರೆ, ವಿವಿಧ ದಂಡಗಳು ತೆರಬೇಕು.

ಪ್ರಶ್ನೆ: ವಿಳಂಬವಾಗಿ ಐಟಿಆರ್ ಸಲ್ಲಿಸಿದರೆ ಏನೇನು ದಂಡ?

ಉತ್ತರ: ಜುಲೈ 31ರ ನಂತರ ಐಟಿಆರ್ ಸಲ್ಲಿಸಿದರೆ 5,000 ರೂವರೆಗೆ ದಂಡ; ತೆರಿಗೆ ಮೊತ್ತದ ಮೇಲೆ ಶೇ. 1 ಬಡ್ಡಿ ಅನ್ವಯ ಆಗುತ್ತದೆ.

ಪ್ರಶ್ನೆ: ಐಟಿಆರ್ ಸಲ್ಲಿಕೆ ತಡವಾದರೆ ದಂಡವಲ್ಲದೆ ಬೇರಿನ್ನೇನು ಸಮಸ್ಯೆ?

ಉತ್ತರ: ಆ ವರ್ಷದ ನಷ್ಟವನ್ನು ಕ್ಯಾರಿ ಫಾರ್ವರ್ಡ್ ಮಾಡಲು ಆಗಲ್ಲ, ರೀಫಂಡ್ ತಡವಾಗಬಹುದು, ಕೆಲವೊಮ್ಮೆ ಜೈಲು ಶಿಕ್ಷೆಯೂ ಆಗಬಹುದು.

Published On - 3:35 pm, Thu, 16 July 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ