AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧನ್ಯವಾದಗಳು ಸರ್, ನೀವು ನನ್ನ ಹಿರಿಯರು’; ಸುದೀಪ್ ಪ್ರಶಂಸೆಗೆ ಉತ್ತರಿಸಿದ ಯಶ್

ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಟೀಸರ್ ಕುರಿತು ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದಕ್ಕೆ ಯಶ್, 'ಧನ್ಯವಾದಗಳು ಸರ್, ನೀವು ನನ್ನ ಹಿರಿಯರು' ಎಂದು ವಿನಮ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವದಂತಿಗಳಿಗೆ ತೆರೆ ಬಿದ್ದಿದ್ದು, ಅವರ ಬಾಂಧವ್ಯ ಗಟ್ಟಿಗೊಂಡಿದೆ.

‘ಧನ್ಯವಾದಗಳು ಸರ್, ನೀವು ನನ್ನ ಹಿರಿಯರು’; ಸುದೀಪ್ ಪ್ರಶಂಸೆಗೆ ಉತ್ತರಿಸಿದ ಯಶ್
ಯಶ್-ಸುದೀಪ್
ರಾಜೇಶ್ ದುಗ್ಗುಮನೆ
|

Updated on: Jan 12, 2026 | 10:03 AM

Share

ರಾಕಿಂಗ್ ಸ್ಟಾರ್ ಯಶ್ (Yash) ಅವರ ನಟನೆಯ ‘ಟಾಕ್ಸಿಕ್’ ಸಿನಿಮಾ ಟೀಸರ್ ಜನವರಿ 8ರಂದು ರಿಲೀಸ್ ಆಯಿತು. ಅವರ ಬರ್ತ್​​ಡೇ ಪ್ರಯುಕ್ತ ಈ ಟೀಸರ್ ರಿಲೀಸ್ ಆಗಿ ಅಬ್ಬರಿಸಿತ್ತು. ಈ ಟೀಸರ್ ಈವರೆಗೆ 83 ಮಿಲಿಯನ್ ವೀಕ್ಷಣೆ ಪಡೆದಿದೆ. ಈ ಟೀಸರ್ ನೋಡಿದ ಸುದೀಪ್ ಮೆಚ್ಚುಗೆ ಸೂಚಿಸಿದ್ದರು. ಈ ಟ್ವೀಟ್​​ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.

ಯಶ್ ಹಾಗೂ ಸುದೀಪ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತುಗಳು ಆಗಾಗ ಕೇಳಿ ಬರುತ್ತವೆ. ಇದು ಅಭಿಮಾನಿಗಳ ವಲಯದಲ್ಲಿ ಇರುವ ಚರ್ಚೆ. ಆದರೆ, ಇದನ್ನು ಅವರು ಸುಳ್ಳು ಮಾಡಿದ್ದಾರೆ. ಈ ಮೊದಲು ಒಟ್ಟಿಗೆ ಕಾಣಿಸಿಕೊಂಡಾಗ ಇಬ್ಬರೂ ಪರಸ್ಪರ ಹಗ್ ಮಾಡಿದ್ದು ಇದೆ. ಈಗ ‘ಟಾಕ್ಸಿಕ್’ ವಿಷಯದಲ್ಲಿ ಇವರ ಬಂಧ ಮತ್ತೆ ಸಾಬೀತಾಗಿದೆ.

ಟೀಸರ್ ರಿಲೀಸ್ ಬಳಿಕ ಟ್ವೀಟ್ ಮಾಡಿದ್ದ ಸುದೀಪ್, ‘ಯಶ್​​ಗೆ ಶುಭಾಶಯಗಳು. ಅಲೆಗಳ ವಿರುದ್ಧ ಸಾಗಲು ಯಾವಾಗಲೂ ಸಮಯ ಬೇಕಾಗುತ್ತದೆ.ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕೊಂಡೊಯ್ಯಲಿ. ನೀವು ನಿಮ್ಮ ಗುರಿಯನ್ನು ನಿರ್ಧರಿಸಿದ್ದೀರಿ’ ಎಂದಿದ್ದರು. ಈ ಟ್ವೀಟ್​​ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ‘ಅಲೆಗಳ ವಿರುದ್ಧ ಹೋಗಲು ಸಮಯ ಬೇಕು’; ‘ಟಾಕ್ಸಿಕ್’ ಟೀಸರ್​ಗೆ ಸುದೀಪ್ ವಿಶ್

‘ಧನ್ಯವಾದಗಳು ಸರ್. ಏಕಾಗ್ರತೆ ಅಥವಾ ಸಮಗ್ರತೆಯನ್ನು ಕಳೆದುಕೊಳ್ಳದೆ, ಪ್ರಾಮಾಣಿಕವಾಗಿ ಮತ್ತು ಧೈರ್ಯದಿಂದ ಉತ್ತಮವಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ನನ್ನ ಹಿರಿಯರಿಂದ ಕಲಿತಿದ್ದೇನೆ. ಆ ಹಿರಿಯರಲ್ಲಿ ನೀವು ಒಬ್ಬರು’ ಎಂದು ಅವರು ಉತ್ತರಿಸಿದ್ದಾರೆ.

ಸುದೀಪ್ ಹಾಗೂ ಯಶ್ ಪರಪಸ್ಪರ ಪ್ರತಿಕ್ರಿಯೆ ನೀಡಿಕೊಂಡ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಬಾಂಧವ್ಯ ಹೀಗೆಯೇ ಮುಂದುವರಿದರೆ ಚಿತ್ರರಂಗಕ್ಕೆ ಸಹಕಾರಿ ಆಗಲಿದೆ ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.