AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಲೆಗಳ ವಿರುದ್ಧ ಹೋಗಲು ಸಮಯ ಬೇಕು’; ‘ಟಾಕ್ಸಿಕ್’ ಟೀಸರ್​ಗೆ ಸುದೀಪ್ ವಿಶ್

ಯಶ್ ಅವರ 'ಟಾಕ್ಸಿಕ್' ಟೀಸರ್ ಬಿಡುಗಡೆಯಾದ ಹಿನ್ನೆಲೆಯಲ್ಲಿ ಸುದೀಪ್ ಶುಭಾಶಯ ಕೋರಿದ್ದಾರೆ. ಇದು ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ಗಳ ನಡುವೆ ಐಕ್ಯತೆ ಇಲ್ಲ ಎಂಬ ಮಾತಿಗೆ ಭಿನ್ನವಾಗಿ, ಸಕಾರಾತ್ಮಕ ಬೆಳವಣಿಗೆಯಾಗಿದೆ. ಯಶ್ ಜನ್ಮದಿನದಂದು ರಿಲೀಸ್ ಆಗಿರುವ ಟೀಸರ್ ‘ಬೋಲ್ಡ್’ ಎನ್ನುವ ಟೀಕೆಗಳಿಗೂ ಸುದೀಪ್ ಪ್ರತ್ಯುತ್ತರ ನೀಡಿದ್ದಾರೆ ಎನ್ನಲಾಗುತ್ತಿದೆ.

‘ಅಲೆಗಳ ವಿರುದ್ಧ ಹೋಗಲು ಸಮಯ ಬೇಕು’; ‘ಟಾಕ್ಸಿಕ್’ ಟೀಸರ್​ಗೆ ಸುದೀಪ್ ವಿಶ್
ಯಶ್-ಸುದೀಪ್
ರಾಜೇಶ್ ದುಗ್ಗುಮನೆ
|

Updated on: Jan 08, 2026 | 2:53 PM

Share

ಕನ್ನಡ ಚಿತ್ರರಂಗದಲ್ಲಿ ಸ್ಟಾರ್​​ಗಳ ಮಧ್ಯೆ ಯಾವುದೂ ಸರಿ ಇಲ್ಲ, ಒಬ್ಬರಿಗೊಬ್ಬರು ಬೆಂಬಲ ಕೊಡೋದಿಲ್ಲ ಎಂಬಿತ್ಯಾದಿ ಮಾತುಗಳು ಆಗಾಗ ಕೇಳಿ ಬರುತ್ತಾ ಇರುತ್ತವೆ. ಈಗ ಕನ್ನಡ ಚಿತ್ರರಂಗದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ‘ಟಾಕ್ಸಿಕ್’ ಸಿನಿಮಾದ ಟೀಸರ್ (Toxic Teaser) ನೋಡಿದ ಸುದೀಪ್ ಅವರು ಯಶ್​​ಗೆ ವಿಶ್ ಮಾಡಿದ್ದಾರೆ. ‘ಟಾಕ್ಸಿಕ್’ ಟೀಸರ್ ಬೋಲ್ಡ್ ಎಂದವರಿಗೂ ಅವರ ಬಳಿ ಉತ್ತರವಿದೆ. ಈ ಬೆಳವಣಿಗೆ ಸ್ಯಾಂಡಲ್​​ವುಡ್ ಪಾಲಿಗೆ ಪಾಸಿಟಿವ್ ಎಂಬ ಮಾತುಗಳು ಕೇಳಿ ಬಂದಿವೆ.

ಇಂದು (ಜನವರಿ 8) ಯಶ್ ಜನ್ಮದಿನ. ಈ ವಿಶೇಷ ದಿನದಂದು ‘ಟಾಕ್ಸಿಕ್’ ಚಿತ್ರದ ಟೀಸರ್ ರಿಲೀಸ್ ಆಗಿದೆ.ಈ ಟೀಸರ್ ಬಗ್ಗೆ ಮಾಹಿತಿ ನೀಡಲು ಯಶ್ ಟ್ವೀಟ್ ಮಾಡಿದ್ದರು. ರಾಯ ಅನ್ನೋದು ಯಶ್ ಮಾಡುತ್ತಿರುವ ಪಾತ್ರದ ಹೆಸರು. ಪಾತ್ರವನ್ನು ಪರಿಚಯಿಸುವ ರೀತಿಯಲ್ಲಿ ಈ ಟೀಸರ್ ಇದೆ. ಈ ಟೀಸರ್ ಬಗ್ಗೆ ಯಶ್ ಮಾಡಿದ ಟ್ವೀಟ್​ನ ಸುದೀಪ್ ರೀಟ್ವೀಟ್ ಮಾಡಿಕೊಂಡಿದ್ದಾರೆ.

‘ಯಶ್​​ಗೆ ಶುಭಾಶಯಗಳು. ಅಲೆಗಳ ವಿರುದ್ಧ ಸಾಗಲು ಯಾವಾಗಲೂ ಸಮಯ ಬೇಕಾಗುತ್ತದೆ.ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕೊಂಡೊಯ್ಯಲಿ. ನೀವು ನಿಮ್ಮ ಗುರಿಯನ್ನು ನಿರ್ಧರಿಸಿದ್ದೀರಿ’ ಎಂದು ಸುದೀಪ್ ಹೇಳಿದ್ದಾರೆ. ಈ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದೆ. ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ.

‘ಟಾಕ್ಸಿಕ್’ ಟೀಸರ್ ತುಂಬಾನೇ ಬೋಲ್ಡ್ ಆಗಿದೆ. ಇದನ್ನು ಅನೇಕರು ಟೀಕಿಸಿದ್ದಾರೆ. ಈ ಟೀಕೆಗಳು ಕೇಳಿ ಬಂದಿದ್ದರಿಂದಲೇ ‘ಅಲೆಗಳ ವಿರುದ್ಧ ಹೋಗಲು ಸಾಕಷ್ಟು ಸಮಯ ಬೇಕು’ ಎಂದು ಯಶ್ ಟ್ವೀಟ್ ಮಾಡಿರಬಹುದು ಎಂದು ಹೇಳಲಾಗುತ್ತಾ ಇದೆ.

ಯಶ್ ಅವರಿಗೆ ಸುದೀಪ್ ವಿಶ್ ಮಾಡಿದ್ದು ಅನೇಕರಿಗೆ ಅಚ್ಚರಿ ತಂದಿದೆ. ‘ಇದನ್ನು ನಾವು ನಿರೀಕ್ಷಿಸಿರಲಿಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ‘ಇದು ನಮ್ಮ ಕಿಚ್ಚ ಸುದೀಪ್. ಯಶ್ ಹಾಗೂ ಸುದೀಪ್ ಮಧ್ಯೆ ಇರುವ ಬಾಂಡ್​​ನ ಅಭಿಮಾನಿಗಳೇ ಹಾಳು ಮಾಡಿದರು’ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ಹಾಲಿವುಡ್​ ರೇಂಜ್​​​ನಲ್ಲಿದೆ ‘ಟಾಕ್ಸಿಕ್​’ ಟೀಸರ್; ಎಲ್ಲರಿಗೂ ವಾರ್ನಿಂಗ್ ಕೊಟ್ಟ ‘ರಾಯ’

ಯಶ್ ಅವರು ‘ಕೆಜಿಎಫ್ 2’ ಬಳಿಕ ಒಪ್ಪಿಕೊಂಡ ಸಿನಿಮಾ ‘ಟಾಕ್ಸಿಕ್’. ಈ ಚಿತ್ರದ ಟೀಸರ್ ನೋಡಿದ ಫ್ಯಾನ್ಸ್ ಮೆಚ್ಚಿಕೊಳ್ಳುತ್ತಿದ್ದಾರೆ. ಕೆಲವರು ಟೀಸರ್ ಸಖತ್ ಬೋಲ್ಡ್ ಎನ್ನುತ್ತಿದ್ದಾರೆ. ಸಿನಿಮಾನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ