AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನೀಕಾಂತ್ ಸಿನಿಮಾನಲ್ಲಿ ಶಾರುಖ್ ಖಾನ್ ಪಾತ್ರ ಏನು?

Shah Rukh Khan: ‘ಜೈಲರ್’ ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ನಟಿಸಿದ್ದ ಕೆಲ ಅತಿಥಿ ನಟರುಗಳು ಈ ಸಿನಿಮಾನಲ್ಲಿಯೂ ನಟಿಸಲಿದ್ದಾರೆ. ಜೊತೆಗೆ ಹೆಚ್ಚುವರಿ ಸೇರ್ಪಡೆಯೆಂದರೆ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರು ಸಹ ‘ಜೈಲರ್ 2’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಶಾರುಖ್ ಖಾನ್, ರಜನೀಕಾಂತ್ ಜೊತೆ ನಟಿಸುವ ಸುದ್ದಿ ಈ ಹಿಂದೆಯೇ ಖಾತ್ರಿ ಆಗಿತ್ತು. ಇದೀಗ ಶಾರುಖ್ ಪಾತ್ರ ಎಂಥಹದ್ದು ಎಂಬ ಮಾಹಿತಿ ಲೀಕ್ ಆಗಿದೆ.

ರಜನೀಕಾಂತ್ ಸಿನಿಮಾನಲ್ಲಿ ಶಾರುಖ್ ಖಾನ್ ಪಾತ್ರ ಏನು?
Srk Rajinikanth
ಮಂಜುನಾಥ ಸಿ.
|

Updated on: Mar 11, 2026 | 10:24 AM

Share

ರಜನೀಕಾಂತ್ (Rajinikanth) ನಟನೆಯ ‘ಜೈಲರ್ 2’ ಚಿತ್ರೀಕರಣ ಚಾಲ್ತಿಯಲ್ಲಿದೆ. 2023 ರಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದೆ. ಇದೀಗ ಅದೇ ಸಿನಿಮಾದ ಮುಂದಿನ ಭಾಗ ಚಿತ್ರೀಕರಣ ಚಾಲ್ತಿಯಲ್ಲಿದ್ದು, ‘ಜೈಲರ್’ ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ನಟಿಸಿದ್ದ ಕೆಲ ಅತಿಥಿ ನಟರುಗಳು ಈ ಸಿನಿಮಾನಲ್ಲಿಯೂ ನಟಿಸಲಿದ್ದಾರೆ. ಜೊತೆಗೆ ಹೆಚ್ಚುವರಿ ಸೇರ್ಪಡೆಯೆಂದರೆ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರು ಸಹ ‘ಜೈಲರ್ 2’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಶಾರುಖ್ ಖಾನ್, ರಜನೀಕಾಂತ್ ಜೊತೆ ನಟಿಸುವ ಸುದ್ದಿ ಈ ಹಿಂದೆಯೇ ಖಾತ್ರಿ ಆಗಿತ್ತು. ಇದೀಗ ಶಾರುಖ್ ಪಾತ್ರ ಎಂಥಹದ್ದು ಎಂಬ ಮಾಹಿತಿ ಲೀಕ್ ಆಗಿದೆ.

‘ಜೈಲರ್ 2’ ಸಿನಿಮಾನಲ್ಲಿ ಶಾರುಖ್ ಖಾನ್ ತುಸು ಅಪರೂಪವಾದ ಪಾತ್ರದಲ್ಲಿ ನಟಿಸಿದ್ದಾರೆ. ಶಾರುಖ್ ಖಾನ್ ಅವರು ‘ಜೈಲರ್ 2’ ಸಿನಿಮಾನಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಅಸಲಿಗೆ ಶಾರುಖ್ ಖಾನ್ ಪೊಲೀಸ್ ಪಾತ್ರದಲ್ಲಿ ನಟಿಸಿರುವುದು ಬಹಳ ಅಪರೂಪ. ಶಾರುಖ್ ಖಾನ್ ಅವರು ಮಿಲಿಟರಿ ಅಧಿಕಾರಿ, ರಾ ಏಜೆಂಟ್ ಪಾತ್ರಗಳಲ್ಲಿ ಸಾಕಷ್ಟು ನಟಿಸಿದ್ದಾರೆ ಆದರೆ ಪೊಲೀಸ್ ಪಾತ್ರದಲ್ಲಿ ನಟಿಸಿರುವುದು ಬಹಳ ಕಡಿಮೆ. ಇತ್ತೀಚೆಗೆ ಸೂಪರ್ ಹಿಟ್ ಆದ ‘ಜವಾನ್’ ಸಿನಿಮಾನಲ್ಲಿ ಜೈಲರ್ ಪಾತ್ರದಲ್ಲಿ ನಟಿಸಿದ್ದರು ಶಾರುಖ್, ಅದಕ್ಕೆ ಮುಂಚೆ ‘ಒನ್ ಟು ಕ ಫೋರ್’ ಸಿನಿಮಾನಲ್ಲಿ ಪೊಲೀಸ್ ಇಲಾಖೆಯ ಸ್ಪೆಷಲ್ ಫೋರ್ಸ್ ಸದಸ್ಯನ ಪಾತ್ರದಲ್ಲಿ ನಟಿಸಿದ್ದರು. ಈ ಎರಡು ಸಿನಿಮಾಗಳ ಹೊರತಾಗಿ ಪೊಲೀಸ್ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದಿಲ್ಲ.

ಆದರೆ ಇದೀಗ ಶಾರುಖ್ ಖಾನ್, ‘ಜೈಲರ್ 2’ ಸಿನಿಮಾನಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಜೈಲರ್’ ಸಿನಿಮಾನಲ್ಲಿ ರಜನೀಕಾಂತ್ ಸಹ ಜೈಲಿನ ನಿವೃತ್ತ ನಿರೀಕ್ಷಣಾಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಬಹುಷಃ ಶಾರುಖ್ ಖಾನ್ ಅವರ ಪಾತ್ರ, ರಜನೀಕಾಂತ್ ಅವರ ಹಳೆಯ ಗೆಳೆಯನ ಪಾತ್ರದಲ್ಲಿ ನಟಿಸಲಿರುವ ಸಾಧ್ಯತೆ ಇದೆ. ಶಾರುಖ್ ಖಾನ್ ಅವರಿಗೆ ಸಖತ್ ಮಾಸ್ ಆದ ಪಾತ್ರವನ್ನೇ ನಿರ್ದೇಶಕ ನೆಲ್ಸನ್ ನೀಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:47 ವರ್ಷಗಳ ಬಳಿಕ ಒಂದಾದ ಕಮಲ್-ರಜನೀಕಾಂತ್: ಆದರೆ ನಾಯಕ ಯಾರು?

ಶಾರುಖ್ ಖಾನ್ ಅತಿಥಿ ಪಾತ್ರಗಳಲ್ಲಿ ನಟಿಸುವುದು ಕಡಿಮೆ. ಅದರಲ್ಲೂ ದಕ್ಷಿಣದ ಸಿನಿಮಾಗಳಲ್ಲಿ ಬಹಳ ಅಪರೂಪಕ್ಕೆ ಅವರು ಅತಿಥಿ ಪಾತ್ರಗಳಲ್ಲಿ ನಟಿಸುತ್ತಾರೆ. ದಶಕಗಳ ಹಿಂದೆ ಕಮಲ್ ಹಾಸನ್ ನಿರ್ದೇಶನದ ‘ಹೇ ರಾಮ್’ ಸಿನಿಮಾದ ಅತಿಥಿ ಪಾತ್ರದಲ್ಲಿ ಅವರು ನಟಿಸಿದ್ದರು. ಅದಾದ ಬಳಿಕ ಈಗ ರಜನೀಕಾಂತ್ ಅವರ ಜೊತೆಗೆ ನಟಿಸುತ್ತಿದ್ದಾರೆ. ಅಂದಹಾಗೆ ರಜನೀಕಾಂತ್ ಅವರು ಶಾರುಖ್ ಖಾನ್ ನಟನೆಯ ‘ರಾ ಒನ್’ ಸಿನಿಮಾನಲ್ಲಿ ರೋಬೊ ಪಾತ್ರದಲ್ಲಿ ನಟಿಸಿದ್ದರು. ಇದೀಗ ಹಲವು ವರ್ಷಗಳ ಬಳಿಕ ರಜನೀಕಾಂತ್ ಋಣ ತೀರಿಸಿದ್ದಾರೆ ಶಾರುಖ್ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us