Toxic Teaser: ಹಾಲಿವುಡ್ ರೇಂಜ್ನಲ್ಲಿದೆ ‘ಟಾಕ್ಸಿಕ್’ ಟೀಸರ್; ಎಲ್ಲರಿಗೂ ವಾರ್ನಿಂಗ್ ಕೊಟ್ಟ ‘ರಾಯ’
Rocking Star Yash Birthday, Toxic Movie Teaser: ಅಭಿಮಾನಿಗಳು ಕಾಯುತ್ತಿರುವ ದಿನ ಬಂದೇ ಬಿಟ್ಟಿದೆ. ‘ಟಾಕ್ಸಿಕ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಯಶ್ ಜನ್ಮದಿನದ ಪ್ರಯುಕ್ತ ಟೀಸರ್ ತೆರೆಗೆ ಬಂದಿದೆ. ಇದನ್ನು ಅಭಿಮಾನಿಗಳು ಸಾಕಷ್ಟು ಇಷ್ಟಪಟ್ಟಿದ್ದಾರೆ. ‘ಟಾಕ್ಸಿಕ್’ ಟೀಸರ್, ಅದರ ವಿಶೇಷತೆ ಇಲ್ಲಿದೆ.

‘ಟಾಕ್ಸಿಕ್’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಯಶ್ ನಟನೆಯ ಈ ಚಿತ್ರಕ್ಕೆ ಗೀತು ಮೋಹನ್ದಾಸ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದೆ. ಅದಕ್ಕೂ ಮೊದಲು ಚಿತ್ರದ ಟೀಸರ್ ರಿಲೀಸ್ ಆಗಿದೆ. ಯಶ್ ಬರ್ತ್ಡೇ (ಜನವರಿ 8) ಪ್ರಯುಕ್ತ ಸರಿಯಾಗಿ 10 ಗಂಟೆ 10 ನಿಮಿಷಕ್ಕೆ ಟೀಸರ್ ಬಿಡುಗಡೆ ಕಂಡಿದೆ. ಸಿನಿಮಾ ಹೇಗಿರಬಹುದು ಎಂಬುದಕ್ಕೆ ಕ್ಲ್ಯಾರಿಟಿ ಸಿಕ್ಕಂತೆ ಆಗಿದೆ.
‘ಟಾಕ್ಸಿಕ್’ ಸಿನಿಮಾ ತಂಡ ಇತ್ತೀಚೆಗೆ ಯಶ್ ಅವರ ಪೋಸ್ಟರ್ ರಿಲೀಸ್ ಮಾಡಿತು. ಆ ಬಳಿಕ ಸಿನಿಮಾದಲ್ಲಿ ನಟಿಸಿದ ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ಎಲ್ಲಾ ಹೀರೋಯಿನ್ಗಳ ಪೋಸ್ಟರ್ ಬಿಡುಗಡೆ ಮಾಡಿತ್ತು. ಈಗ ತಂಡ ಟೀಸರ್ ರಿಲೀಸ್ ಮಾಡಿ ಸಿನಿಮಾದ ಪ್ರಚಾರಕ್ಕೆ ಮುನ್ನುಡಿ ಬರೆದಿದೆ.
‘ಟಾಕ್ಸಿಕ್’ ಟೀಸರ್ ಸಖತ್ ಬೋಲ್ಡ್ ಆಗಿದೆ. ಟೀಸರ್ ಆರಂಭದಲ್ಲೇ ಹಸಿಬಿಸಿ ದೃಶ್ಯಗಳಿವೆ. ಮೇಕಿಂಗ್ ಹಾಲಿವುಡ್ ಶೈಲಿಯಲ್ಲಿದೆ. ಈ ರೀತಿಯ ಮೇಕಿಂಗ್ ಕನ್ನಡಕ್ಕೆ ಹೊಸದು. ಸಖತ್ ಆ್ಯಕ್ಷನ್ ಕೂಡ ಇದೆ. ಯಶ್ ಅವರು ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
RAYA
Toxic : A Fairy Tale for Grown-Ups in cinemas worldwide on 19-03-2026https://t.co/VoJTFQCoH8#Nayanthara@humasqureshi @advani_kiara @rukminitweets #TaraSutaria #GeetuMohandas @RaviBasrur #RajeevRavi #UjwalKulkarni #TPAbid #MohanBKere #SandeepSadashiva…
— Yash (@TheNameIsYash) January 8, 2026
‘ಟಾಕ್ಸಿಕ್’ ಸಿನಿಮಾಗೆ ಕೆವಿಎನ್ ಸಂಸ್ಥೆ ಬಂಡವಾಳ ಹೂಡಿದೆ. ದೊಡ್ಡ ಬಜೆಟ್ನ ಚಿತ್ರಕ್ಕೆ ಖರ್ಚು ಮಾಡಲಾಗಿದೆ. ಟೀಸರ್ ನೋಡಿದವರಿಗೆ ಅದ್ದೂರಿತನ ಸ್ಪಷ್ಟವಾಗಿ ಕಾಣಿಸಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿಬರುತ್ತಿದೆ. ಗೀತು ಜೊತೆ ಯಶ್ ಕೂಡ ಸಿನಿಮಾಗೆ ಕಥೆ ಬರೆದಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್’: ಯಾರ ಬಗ್ಗೆ ಎಚ್ಚರಿಸಿದ್ದರೋ ಅವನೇ ಎದುರು ಬರುತ್ತಿದ್ದಾನೆ
‘ಟಾಕ್ಸಿಕ್’ ಚಿತ್ರ ‘ಧುರಂಧರ್ 2’ ವಿರುದ್ಧ ತೆರೆಗೆ ಬರುತ್ತಿದೆ. ಈಗಾಗಲೇ ಹಿಂದಿಯಲ್ಲಿ ‘ಧುರಂಧರ್’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಇದರ ಸೀಕ್ವೆಲ್ ಆಗಿ ‘ಧುರಂದರ್ 2’ ರಿಲೀಸ್ ಆಗುತ್ತಿದೆ. ಈ ಕಾರಣದಿಂದ ‘ಟಾಕ್ಸಿಕ್’ಗೆ ದೊಡ್ಡ ಸ್ಪರ್ಧೆ ಏರ್ಪಡುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ಎದುರಿಸಲು ಎಲ್ಲ ರೀತಿಯ ಸಿದ್ಧತೆ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:16 am, Thu, 8 January 26




