‘ಟಾಕ್ಸಿಕ್’: ಯಾರ ಬಗ್ಗೆ ಎಚ್ಚರಿಸಿದ್ದರೋ ಅವನೇ ಎದುರು ಬರುತ್ತಿದ್ದಾನೆ
Toxic movie poster: ಕಳೆದ ಕೆಲ ದಿನಗಳಿಂದ ‘ಟಾಕ್ಸಿಕ್’ ಸಿನಿಮಾದ ನಟಿಯರ ಪಾತ್ರಗಳ ಪೋಸ್ಟರ್ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಇದೀಗ ನಾಯಕನ ಪೋಸ್ಟರ್ ಬಿಡುಗಡೆ ಮಾಡುವ ಸಮಯ ಸನ್ನಿಹಿತವಾಗಿದೆ. ನಾಳೆ ಅಂದರೆ ಜನವರಿ 08 ಯಶ್ ಅವರ ಹುಟ್ಟುಹಬ್ಬವಾಗಿದ್ದು, ಅದೇ ದಿನ ‘ಟಾಕ್ಸಿಕ್’ ಸಿನಿಮಾದ ಯಶ್ ಪಾತ್ರದ ಪೋಸ್ಟರ್ ಬಿಡುಗಡೆ ಆಗಲಿದೆ.

‘ಟಾಕ್ಸಿಕ್’ (Toxic) ಪ್ರಸ್ತುತ ಭಾರತ ಚಿತ್ರರಂಗದ ಬಲು ನಿರೀಕ್ಷಿತ ಸಿನಿಮಾ. ಯಶ್ ನಟಿಸಿ, ಕತೆ ರಚಿಸಿ, ಸಹ ನಿರ್ಮಾಣ ಮಾಡುತ್ತಿರುವ ‘ಟಾಕ್ಸಿಕ್’ ಸಿನಿಮಾ ಭಾರಿ ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿದೆ. ವಿಶೇಷವೆಂದರೆ ಕನ್ನಡ ಸೇರಿದಂತೆ ಇತರೆ ಭಾರತೀಯ ಭಾಷೆಗಳಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ, ಏಕಕಾಲಕ್ಕೆ ಇಂಗ್ಲೀಷ್ನಲ್ಲಿಯೂ ನಿರ್ಮಾಣ ಆಗುತ್ತಿದೆ. ಆ ಮೂಲಕ ಅಂತರಾಷ್ಟ್ರೀಯ ಮಾರುಕಟ್ಟೆಗೆ ವಿಸ್ತರಣೆಗೊಳ್ಳುವ ಯೋಜನೆಯನ್ನು ಯಶ್ ಹಾಕಿಕೊಂಡಿದ್ದಾರೆ. ಇದೀಗ ಕಳೆದ ಕೆಲ ದಿನಗಳಿಂದ ‘ಟಾಕ್ಸಿಕ್’ ಸಿನಿಮಾದ ನಟಿಯರ ಪಾತ್ರಗಳ ಪೋಸ್ಟರ್ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಇದೀಗ ನಾಯಕನ ಪೋಸ್ಟರ್ ಬಿಡುಗಡೆ ಮಾಡುವ ಸಮಯ ಸನ್ನಿಹಿತವಾಗಿದೆ.
ನಾಳೆ (ಜನವರಿ 08) ಯಶ್ ಅವರ ಹುಟ್ಟುಹಬ್ಬವಿದ್ದು ನಾಳೆಯ ದಿನ ‘ಟಾಕ್ಸಿಕ್’ ಸಿನಿಮಾದ ಮುಖ್ಯ ಪಾತ್ರ ಅಂದರೆ ಯಶ್ ಅವರ ಪಾತ್ರದ ಪೋಸ್ಟರ್ ಬಿಡುಗಡೆ ಆಗಲಿದೆ. ಈಗಾಗಲೇ ಯಶ್ ಅವರು ಇರುವ ಟಾಕ್ಸಿಕ್ ಸಿನಿಮಾದ ಕೆಲವು ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಗಿದೆಯಾದರೂ ಯಾವುದರಲ್ಲೂ ಪೂರ್ಣ ಮುಖ ತೋರಿಸಿಲ್ಲ, ಅಥವಾ ಸಂಪೂರ್ಣ ಲುಕ್ ತೋರಿಸಿಲ್ಲ ಆದರೆ ನಾಳೆ ಬಿಡುಗಡೆ ಆಗುವ ಪೋಸ್ಟರ್ನಲ್ಲಿ ಯಶ್ ಅವರ ಲುಕ್ ಜೊತೆಗೆ ಅವರ ಪಾತ್ರದ ಹೆಸರು ಇನ್ನಿತರೆ ಪರಿಚಯಗಳು ಲಭ್ಯ ಆಗುವ ಸಾಧ್ಯತೆ ಇದೆ.
Revealing the ONE they warned you about. 10:10 AM | 08-01-2026 #ToxicTheMovie#TOXIC #TOXIConMarch19th@TheNameIsYash#Nayanthara@humasqureshi @advani_kiara @rukminitweets #TaraSutaria #GeetuMohandas @RaviBasrur #RajeevRavi #UjwalKulkarni #TPAbid #MohanBKere… pic.twitter.com/7KsfjVoh7X
— KVN Productions (@KvnProductions) January 7, 2026
ನಾಳೆ (ಜನವರಿ 08) ಯಶ್ ಅವರ ಪೋಸ್ಟರ್ ಬಿಡುಗಡೆ ಆಗಲಿರುವ ಮಾಹಿತಿಯನ್ನು ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೊಂಡಿದ್ದು, ‘ಯಾರ ಬಗ್ಗೆ ಅವರು ಎಚ್ಚರಿಸಿದ್ದರೊ ಆತನ ಅನಾವರಣ ಆಗಲಿದೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ನಾಳೆ (ಜನವರಿ 08) ಬೆಳಿಗ್ಗೆ 10 ಗಂಟೆ 10 ನಿಮಿಷಕ್ಕೆ ಯಶ್ ಅವರ ಪಾತ್ರದ ಪೋಸ್ಟರ್ ಬಿಡುಗಡೆ ಆಗಲಿದೆ. ಅಭಿಮಾನಿಗಳು ಸಖತ್ ಸ್ಟೈಲಿಷ್ ಮತ್ತು ಮಾಸ್ ಆಗಿರುವ ಪೋಸ್ಟರ್ ಅನ್ನು ನಿರೀಕ್ಷೆ ಮಾಡುತ್ತಿದ್ದಾರೆ.
‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ಸ್. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಕ್ಯಾಮೆರಾ ಹಿಡಿರುವುದು ಎರಡು ರಾಷ್ಟ್ರಪ್ರಶಸ್ತಿ ವಿಜೇತ ರಾಜೀವ್ ರವಿ. ಸಿನಿಮಾನಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




