ಪುರುಷರನ್ನು ನಾಯಿಗೆ ಹೋಲಿಸಿದರೇ ರಮ್ಯಾ: ನಟಿ ಹೇಳಿದ್ದೇನು?
Actress Ramya: ನಟಿ ರಮ್ಯಾ, ಸಿನಿಮಾ ಮತ್ತು ಸಕ್ರಿಯ ರಾಜಕಾರಣಕ್ಕೆ ದೂರಾದರೂ ಸಹ ಸಾಮಾಜಿಕ ವಿಷಯಗಳಿಗೆ ಪ್ರತಿಕ್ರಿಯೆಗಳನ್ನು ನೀಡುತ್ತಾ ಸಕ್ರಿಯವಾಗಿದ್ದಾರೆ. ಪ್ರಾಣಿ ಪ್ರಿಯೆ ಆಗಿರುವ ರಮ್ಯಾ, ಪ್ರಾಣಿಗಳ ಹಕ್ಕು ರಕ್ಷಣೆ, ವಿಶೇಷವಾಗಿ ಶ್ವಾನಗಳ ವಿಷಯದಲ್ಲಿ ವಿಶೇಷ ಕಾಳಜಿವಹಿಸುತ್ತಾರೆ. ಮೂಕಜೀವಿಗಳ ಪರವಾಗಿ ಅಗತ್ಯವಾದಾಗೆಲ್ಲ ದನಿ ಎತ್ತುತ್ತಾ ಬಂದಿದ್ದಾರೆ. ಇದೀಗ ರಮ್ಯಾ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಪುರುಷರನ್ನು ನಾಯಿಗೆ ಹೋಲಿಸಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ರಮ್ಯಾ (Ramya), ಕನ್ನಡ ಚಿತ್ರರಂಗದ ಸ್ಟಾರ್ ನಟಿ ಎನಿಸಿಕೊಂಡಿದ್ದವರು. ರಾಜಕೀಯಕ್ಕೆ ಸಿನಿಮಾಗಳಿಗೆ ವಿರಾಮ ಇರಿಸಿದ ರಮ್ಯಾ, ಈಗ ಸಕ್ರಿಯ ರಾಜಕೀಯದಿಂದಲೂ ದೂರಾಗಿದ್ದಾರೆ. ಸಿನಿಮಾಗಳಿಗೆ ಮರು ಪ್ರವೇಶ ಮಾಡುವ ಪ್ರಯತ್ನದಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಸಹ ಪ್ರಾರಂಭಿಸಿದ್ದಾರೆ. ಸಕ್ರಿಯ ರಾಜಕಾರಣಕ್ಕೆ ದೂರಾದರೂ ಸಹ ಸಾಮಾಜಿಕ ವಿಷಯಗಳಿಗೆ ಪ್ರತಿಕ್ರಿಯೆಗಳನ್ನು ನೀಡುತ್ತಾ ಸಕ್ರಿಯವಾಗಿದ್ದಾರೆ. ಪ್ರಾಣಿ ಪ್ರಿಯೆ ಆಗಿರುವ ರಮ್ಯಾ, ಪ್ರಾಣಿಗಳ ಹಕ್ಕು ರಕ್ಷಣೆ, ವಿಶೇಷವಾಗಿ ಶ್ವಾನಗಳ ವಿಷಯದಲ್ಲಿ ವಿಶೇಷ ಕಾಳಜಿವಹಿಸುತ್ತಾರೆ. ಮೂಕಜೀವಿಗಳ ಪರವಾಗಿ ಅಗತ್ಯವಾದಾಗೆಲ್ಲ ದನಿ ಎತ್ತುತ್ತಾ ಬಂದಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ಕುರಿತಾಗಿ ಆದೇಶವೊಂದನ್ನು ಹೊರಡಿಸಿತ್ತು, ಬೀದಿ ನಾಯಿಗಳನ್ನು ಆಶ್ರಯ ತಾಣಗಳಲ್ಲಿ ಇಡುವಂತೆ ಸೂಚಿಸಿತ್ತು. ಇದರ ವಿರುದ್ಧ ರಮ್ಯಾ ಸೇರಿದಂತೆ ದೇಶದಾದ್ಯಂತ ಶ್ವಾನಪ್ರಿಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಸಹ ಮಾಡಿದ್ದರು. ಬಳಿಕ ಇತ್ತೀಚೆಗೆ ಮತ್ತೆ ಇದೇ ವಿಷಯವಾಗಿ ನಡೆದ ವಿಚಾರಣೆ ವೇಳೆ, ಬೀದಿ ನಾಯಿಗಳನ್ನು ಅವುಗಳ ವರ್ತನೆಯ ಆಧಾರದ ಮೇಲೆ ವಿಂಗಡಿಸಲು ಸಾಧ್ಯವಿಲ್ಲ. ‘ಬೀದಿ ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ, ಈ ನಾಯಿ ಕಚ್ಚಬಹುದು, ಈ ನಾಯಿ ಕಚ್ಚುವುದಿಲ್ಲ ಎಂದು ಕಂಡು ಹಿಡಿಯುವುದು ಅಸಾಧ್ಯ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಆ ಮೂಲಕ ಎಲ್ಲ ನಾಯಿಗಳನ್ನು ಆಶ್ರಯ ತಾಣಗಳಲ್ಲಿ ಇಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ:43ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ನಟಿ ರಮ್ಯಾ
ಸುಪ್ರೀಂಕೋರ್ಟ್ನ ಈ ಅಭಿಪ್ರಾಯಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನಟಿ ರಮ್ಯಾ, ಸುಪ್ರೀಂನ ಹೇಳಿಕೆಗೆ ವಿರುದ್ಧವಾಗಿ, ‘ಪುರುಷರ ಮನಸ್ಸನ್ನು ಓದುವುದು ಕಷ್ಟ, ಅವರು ಯಾವಾಗ ರೇಪ್ ಮಾಡುತ್ತಾರೊ, ಯಾವಾಗ ಕೊಲೆ ಮಾಡುತ್ತಾರೊ ಗೊತ್ತಾಗುವುದಿಲ್ಲ, ಹಾಗಾಗಿ ಎಲ್ಲ ಪುರುಷರನ್ನು ಜೈಲಿನಲ್ಲಿ ಇರಿಸಿಬಿಡಿ(!?)’ ಎಂದಿದ್ದಾರೆ. ಆ ಮೂಲಕ ಕಚ್ಚುವ ನಾಯಿಗಳು, ಸೌಮ್ಯ ನಾಯಿಗಳ ವರ್ಗೀಕರಣ ಕಷ್ಟವೆಂದು ಎಲ್ಲ ನಾಯಿಗಳನ್ನು ಆಶ್ರಯ ತಾಣಗಳಲ್ಲಿ ಇಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ರಮ್ಯಾ, ಸುಪ್ರೀಂಕೋರ್ಟ್ನಲ್ಲಿ ಬೀದಿನಾಯಿಗಳ ಹಕ್ಕಿನ ಪರವಾಗಿ ವಾದಿಸುತ್ತಿರುವ ಮಾಜಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ವಾದವನ್ನು ಕೊಂಡಾಡಿದ್ದಾರೆ. ನಾಯಿಗಳನ್ನು ಆಶ್ರಯ ತಾಣಗಳಲ್ಲಿ ಇಡುವುದರ ವಿರುದ್ಧ ವಾದಿಸಿರುವ ಕೆಕೆ ವೇಣುಗೋಪಾಲ್ ‘ಭಾರತದಲ್ಲಿ 5.25 ಕೋಟಿ ನಾಯಿಗಳಿವೆ. ಅವುಗಳನ್ನು ಆಶ್ರಯ ತಾಣದಲ್ಲಿ ಇಡಲು ದೇಶದಾದ್ಯಂತ 77347 ಆಶ್ರಯ ತಾಣಗಳು ಬೇಕಾಗುತ್ತವೆ. (ಪ್ರತಿ ಆಶ್ರಯ ತಾಣದಲ್ಲಿ 200 ನಾಯಿಗಳು). ಪ್ರತಿ ನಾಯಿಗೆ ಆಹಾರ ನೀಡಲು ದಿನಕ್ಕೆ 40 ರೂಪಾಯಿ ಬೇಕಾಗುತ್ತದೆ ಎಂದಾದರೆ ಅಷ್ಟು ನಾಯಿಗಳನ್ನು ಸಾಕಲು ಪ್ರತಿ ದಿನ ಆಹಾರದ ವೆಚ್ಚವೇ 200 ಕೋಟಿಗೂ ಹೆಚ್ಚು ಹಣ ಬೇಕಾಗುತ್ತದೆ. ಈಗ ದೇಶದಲ್ಲಿ ಇರುವ ಲಕ್ಷಾಂತರ ಶಾಲೆಗಳಲ್ಲಿಯೇ ಸರಿಯಾದ ಸೌಕರ್ಯ ಇಲ್ಲ ಹೀಗಿರುವಾಗ ನಾಯಿಗಳಿಗೆ ಆಶ್ರಯ ತಾಣ ನಿರ್ಮಿಸಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




