AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಪರೀತ ಕಿರುಕುಳ: ದೂರು ನೀಡಿದ ಮೆಗಾಸ್ಟಾರ್ ಕುಟುಂಬದ ಸೊಸೆ

Lavanya Tripathi: ಮೆಗಾಸ್ಟಾರ್ ಕುಟುಂಬದ ಸೊಸೆ, ಸ್ವತಃ ಜನಪ್ರಿಯ ನಟಿಯಾಗಿರುವ ಲಾವಣ್ಯಾ ತ್ರಿಪಾಠಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಲಾವಣ್ಯಾ ತ್ರಿಪಾಠಿ, ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ ಅವರೊಡನೆ ವಿವಾಹವಾಗಿದ್ದು ಇತ್ತೀಚೆಗಷ್ಟೆ ಗಂಡು ಮಗುವಿಗೆ ಜನ್ಮ ಸಹ ನೀಡಿದ್ದಾರೆ. ಇದೀಗ ನಟಿ ಲಾವಣ್ಯಾ ತ್ರಿಪಾಠಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ವಿಪರೀತ ಕಿರುಕುಳ: ದೂರು ನೀಡಿದ ಮೆಗಾಸ್ಟಾರ್ ಕುಟುಂಬದ ಸೊಸೆ
Varun Tej1
ಮಂಜುನಾಥ ಸಿ.
|

Updated on: Mar 10, 2026 | 10:52 AM

Share

ಮೆಗಾಸ್ಟಾರ್ (Megastar) ಕುಟುಂಬದ ಸೊಸೆ, ಸ್ವತಃ ಜನಪ್ರಿಯ ನಟಿಯಾಗಿರುವ ಲಾವಣ್ಯಾ ತ್ರಿಪಾಠಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಲಾವಣ್ಯಾ ತ್ರಿಪಾಠಿ, ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ ಅವರೊಡನೆ ವಿವಾಹವಾಗಿದ್ದು ಇತ್ತೀಚೆಗಷ್ಟೆ ಗಂಡು ಮಗುವಿಗೆ ಜನ್ಮ ಸಹ ನೀಡಿದ್ದಾರೆ. ಇದೀಗ ನಟಿ ಲಾವಣ್ಯಾ ತ್ರಿಪಾಠಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಟಿ ದೂರು ನೀಡಿರುವುದು ಕುಟುಂಬದವರ ವಿರುದ್ಧ ಅಲ್ಲ ಬದಲಿಗೆ ಆನ್​​ಲೈನ್​​​ನಲ್ಲಿ ತಮಗೆ ಕಿರುಕುಳ ನೀಡುತ್ತಿರು ವ್ಯಕ್ತಿಗಳ ಬಗ್ಗೆ.

ಲಾವಣ್ಯಾ ತ್ರಿಪಾಠಿ ಅವರನ್ನು ಹಾಗೂ ಅವರ ಕುಟುಂಬದವರನ್ನು ಗುರಿ ಮಾಡಿಕೊಂಡು ಆನ್​​ಲೈನ್​​​ನಲ್ಲಿ ಕೆಲ ವ್ಯಕ್ತಿಗಳು ತೀವ್ರ ನಿಂದನೆ, ಅಶ್ಲೀಲ ಕಮೆಂಟ್​​ಗಳು, ಫೋಟೊ ತಿದ್ದಿ ಹಂಚಿಕೊಳ್ಳುವ ಕಾರ್ಯಗಳನ್ನು ಮಾಡುತ್ತಿದ್ದಾರಂತೆ. ಈ ಆನ್​​ಲೈನ್ ದೌರ್ಜನ್ಯ, ಹಿಂಸೆಯ ವಿರುದ್ಧ ದನಿ ಎತ್ತಿರುವ ನಟಿ ಲಾವಣ್ಯಾ, ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ. ಹೈದರಾಬಾದ್​​ನ ಸೈಬರ್ ಪೊಲೀಸರಿಗೆ ನಟಿ ಲಾವಣ್ಯಾ ತ್ರಿಪಾಠಿ ದೂರು ನೀಡಿದ್ದು, ಕಿರುಕುಳ ನೀಡುತ್ತಿರುವವರ ಖಾತೆಯ ಮಾಹಿತಿಯನ್ನು ಸಹ ಹಂಚಿಕೊಂಡಿದ್ದಾರೆ.

ಪರ್ಪಲ್ ಕ್ರೆಯಾನ್ (purple crayon00) ಹೆಸರಿನ ಇನ್​​ಸ್ಟಾಗ್ರಾಂ ಖಾತೆಯಿಂದ ತಮಗೆ ಸತತ ಕಿರುಕುಳ ನೀಡಲಾಗುತ್ತಿದೆ ಎಂದು ನಟಿ ಲಾವಣ್ಯಾ ತ್ರಿಪಾಠಿ ಹೇಳಿದ್ದಾರೆ. ಈ ಖಾತೆಯು ತಮ್ಮ ವಿರುದ್ಧ ಕೀಳು ಮಟ್ಟದ ಹೇಳಿಕೆಗಳು, ಫೋಟೊಗಳನ್ನು ಹಂಚಿಕೊಳ್ಳುತ್ತಿರುವ ಜೊತೆಗೆ ತಮ್ಮ ಕುಟುಂಬದವರ ಜೊತೆಗೆ ಸಹ ಆಕ್ಷೇಪಾರ್ಹ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದಿದ್ದಾರೆ ನಟಿ. ಕಳೆದ ಕೆಲ ತಿಂಗಳುಗಳಿಂದಲೂ ಪರ್ಪಲ್ ಕ್ರೆಯಾನ್ ಖಾತೆಯಿಂದ ನಟಿಗೆ ಸಂದೇಶಗಳು, ನಟಿಯ ಪೋಸ್ಟ್​​ಗಳಿಗೆ ಕಮೆಂಟ್​​ಗಳನ್ನು ಮಾಡಲಾಗುತ್ತಿದೆಯಂತೆ.

ಇದನ್ನೂ ಓದಿ:ರಶ್ಮಿಕಾ, ವಿಜಯ್ ಆರತಕ್ಷತೆ: ನವದಂಪತಿಗೆ ಆಶೀರ್ವಾದ ಮಾಡಿದ ಚಿರಂಜೀವಿ

ಲಾವಣ್ಯಾ ತ್ರಿಪಾಠಿ ಮೂಲತಃ ಉತ್ತರ ಪ್ರದೇಶದವರಾಗಿದ್ದು ನಟನೆ ಆರಂಭಿಸಿದ್ದು ತೆಲುಗು ಸಿನಿಮಾ ಮೂಲಕ. ಉತ್ತರ ಭಾರತ ಮೂಲದ ನಟಿ ಆಗಿದ್ದರೂ ಸಹ ಲಾವಣ್ಯಾ ನಟಿಸಿರುವುದು ಕೇವಲ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಮಾತ್ರ. ಲಾವಣ್ಯಾ ತ್ರಿಪಾಠಿ ಮತ್ತು ವರುಣ್ ತೇಜ್ ಅವರು 2017 ರಲ್ಲಿ ‘ಮಿಸ್ಟರ್’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು. ಬಳಿಕ 2018 ರಲ್ಲಿ ‘ಅಂತರಿಕ್ಷಂ 9000 ಕೆಎಂಪಿಎಚ್’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿದ್ದು 2023 ರಲ್ಲಿ ಈ ಜೋಡಿ ಮದುವೆ ಆದರು. ಇದೀಗ ಗಂಡು ಮಗುವಿನ ಪೋಷಕರಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us