AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಡ್‌ಕ್ಯಾಸ್ಟ್‌ನಲ್ಲಿ ಪತ್ನಿಗೆ ವಿಚ್ಛೇದನ ನೀಡಿದ ಕೋಟ್ಯಾಧಿಪತಿ ಯೂಟ್ಯೂಬರ್

ಪಾಕಿಸ್ತಾನದ ಜನಪ್ರಿಯ ಯೂಟ್ಯೂಬರ್ ರಜಬ್ ಬಟ್ ತಮ್ಮ ಪತ್ನಿ ಎಮಾನ್ ಫಾತಿಮಾ ಅವರಿಗೆ ವಿಚ್ಛೇದನ ನೀಡುತ್ತಿದ್ದಾರೆ. ಒಂದೂವರೆ ವರ್ಷದ ದಾಂಪತ್ಯದ ನಂತರ ರಜಬ್ ಪಾಡ್‌ಕ್ಯಾಸ್ಟ್‌ನಲ್ಲಿ ಈ ವಿಷಯ ಬಹಿರಂಗಪಡಿಸಿದ್ದು, ಪತ್ನಿ ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕಾನೂನು ನೋಟಿಸ್ ಸ್ವೀಕರಿಸಿದ ಎಮಾನ್, ರಂಜಾನ್ ತಿಂಗಳ ಪಾವಿತ್ರ್ಯಕ್ಕಾಗಿ ಮೌನ ವಹಿಸಿದ್ದು, ತಮ್ಮ ಕಡೆಯಿಂದಲೂ ಪ್ರತಿಕ್ರಿಯೆ ನೀಡುವ ಸುಳಿವು ನೀಡಿದ್ದಾರೆ.

ಪಾಡ್‌ಕ್ಯಾಸ್ಟ್‌ನಲ್ಲಿ ಪತ್ನಿಗೆ ವಿಚ್ಛೇದನ ನೀಡಿದ ಕೋಟ್ಯಾಧಿಪತಿ ಯೂಟ್ಯೂಬರ್
ಯೂಟ್ಯೂಬರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 11, 2026 | 11:08 AM

Share

ಪಾಕಿಸ್ತಾನದ ಅತ್ಯಂತ ಶ್ರೀಮಂತ ಯೂಟ್ಯೂಬರ್ ಮತ್ತು ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾದ ರಜಬ್ ಬಟ್ ಪ್ರಸ್ತುತ ತಮ್ಮ ಖಾಸಗಿ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ಪಾಡ್‌ಕ್ಯಾಸ್ಟ್‌ನಲ್ಲಿ, ಅವರು ತಮ್ಮ ಪತ್ನಿ ಎಮಾನ್ ಫಾತಿಮಾ ಅವರಿಗೆ ವಿಚ್ಛೇದನ ನೀಡುತ್ತಿರುವುದಾಗಿ ಘೋಷಿಸುವ ಮೂಲಕ ಎಲ್ಲರಿಗೂ ಆಘಾತ ನೀಡಿದರು. ಅದರ ನಂತರ, ರಜಬ್ ತಮ್ಮ ಪತ್ನಿಗೆ ಕಾನೂನು ನೋಟಿಸ್ ಅನ್ನು ಸಹ ಕಳುಹಿಸಿದ್ದಾರೆ. ವಿಚ್ಛೇದನದ ನೋಟಿಸ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಎಮನ್ ಈ ಬಗ್ಗೆ ಎಲ್ಲರಿಗೂ ತಿಳಿಸಿದ್ದಾರೆ.

ಮದುವೆ ಆಗಿ ಕೇವಲ ಒಂದೂವರೆ ವರ್ಷಗಳ ನಂತರ ರಜಬ್ ತಮ್ಮ ಪತ್ನಿಯಿಂದ ಬೇರ್ಪಡಲು ನಿರ್ಧರಿಸಿದ್ದಾರೆ. ಪಾಡ್‌ಕ್ಯಾಸ್ಟ್‌ನಲ್ಲಿ ತಾವು ಇನ್ನು ಮುಂದೆ ನಕಲಿ ಸಂಬಂಧವನ್ನು ಹೊಂದಲು ಇಷ್ಟಪಡುವುದಿಲ್ಲ ಎಂದು ರಜಬ್ ಹೇಳಿದ್ದಾರೆ. ಇದು ಮಾತ್ರವಲ್ಲದೆ, ಅವರು ತಮ್ಮ ಪತ್ನಿ ಮತ್ತು ಅತ್ತೆ ಮಾವಂದಿರ ವಿರುದ್ಧವೂ ಅನೇಕ ಆರೋಪಗಳನ್ನು ಮಾಡಿದ್ದಾರೆ.

‘ಈ ಮದುವೆಯಲ್ಲಿ ನನಗೆ ಯಾವುದೇ ಗೌರವವಿರಲಿಲ್ಲ. ನನ್ನ ಹೆಂಡತಿ ನನ್ನ ತಾಯಿಯನ್ನು ಅವಮಾನಿಸಿದಳು. ಆಕೆಯ ಕುಟುಂಬ ಸದಸ್ಯರು ನನ್ನ ತಂದೆಯ ಸ್ಥಿತಿಯನ್ನು ಪ್ರಶ್ನಿಸಿದರು. ಈಗ ನನ್ನ ಹೆತ್ತವರಿಂದ ನನಗೆ ಇನ್ನು ಅಗೌರವ ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ನಾನು ಈ ಸಂಬಂಧಕ್ಕೆ ಮತ್ತೊಂದು ಅವಕಾಶ ನೀಡುವುದಿಲ್ಲ’ ಎಂದಿದ್ದಾರೆ ರಜಬ್.

‘ನಾನು ಮದುವೆಯಾಗಿ ಒಂದೂವರೆ ವರ್ಷವಾಗಿದೆ. ಆದರೆ ನನ್ನ ಹೆಂಡತಿ ನನ್ನೊಂದಿಗೆ ಕೇವಲ ಒಂದೂವರೆ ತಿಂಗಳು ಇದ್ದಳು’ ಎಂದು ರಜಬ್ ಪಾಡ್‌ಕ್ಯಾಸ್ಟ್‌ನಲ್ಲಿ ಆರೋಪಿಸಿದ್ದಾರೆ.

ಮತ್ತೊಂದೆಡೆ, ಎಮಾನ್ ಸಾಮಾಜಿಕ ಮಾಧ್ಯಮದಲ್ಲಿ ವಿಚ್ಛೇದನ ನೋಟಿಸ್ ಅನ್ನು ಹಂಚಿಕೊಳ್ಳುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ‘ಈ ಸಂಬಂಧವನ್ನು ಉಳಿಸಲು ನಾನು ಮೌನವಾಗಿದ್ದೆ. ಆದರೂ, ಪಾಡ್‌ಕ್ಯಾಸ್ಟ್‌ನಲ್ಲಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಯಿತು ಮತ್ತು ನಂತರ ಈ ಕಾನೂನು ನೋಟಿಸ್ ಕಳುಹಿಸಲಾಗಿದೆ. ನಾನು ಕೇಳಲು ಬಯಸುವುದು ನನ್ನ ಮತ್ತು ನನ್ನ ಮಗನಿಗೆ ಏನು ತಪ್ಪಾಗಿದೆ? ನನಗೆ ಹೇಳಲು ಬಹಳಷ್ಟು ಇದೆ. ಆದರೆ ರಂಜಾನ್ ತಿಂಗಳ ಪಾವಿತ್ರ್ಯವನ್ನು ಪರಿಗಣಿಸಿ, ನಾನು ಇನ್ನೂ ಮೌನವಾಗಿದ್ದೇನೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಟಾಕ್ಸಿಕ್​​ಗೆ ಕೇಡು ಬಯಸಿದ ಧುರಂಧರ್​ನ ಕರ್ಮ ಹಿಂಬಾಲಿಸುತ್ತಿದೆ’; ಹಿಂದಿ ಯೂಟ್ಯೂಬರ್​​ ಸೆನ್ಸೇಷನ್ ಹೇಳಿಕೆ

ರಜಬ್ ಮತ್ತು ಇಮಾನ್ 2024 ರಲ್ಲಿ ವಿವಾಹವಾದರು. ಅವರ ವಿವಾಹವು ಪಾಕಿಸ್ತಾನದ ಅತ್ಯಂತ ಅದ್ಧೂರಿ ವಿವಾಹಗಳಲ್ಲಿ ಒಂದಾಗಿತ್ತು. ಈ ವಿವಾಹದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
SIR ಬಗ್ಗೆ ಭಯ ಬೇಡ: ಧೈರ್ಯ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್
SIR ಬಗ್ಗೆ ಭಯ ಬೇಡ: ಧೈರ್ಯ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಹೆಚ್.ಕೆ ಸುರೇಶ್ ಪ್ರಮಾಣ!
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಹೆಚ್.ಕೆ ಸುರೇಶ್ ಪ್ರಮಾಣ!
ಎಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಿ ಎಂದ ಡಿಕೆಶಿ!
ಎಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಿ ಎಂದ ಡಿಕೆಶಿ!
ಬೆಂಗಳೂರಿನಲ್ಲಿ ಫುಟ್​ಪಾತ್ ಅತಿಕ್ರಮಣ ತೆರವಿಗೆ ಇಂದೇ ಗಡುವು
ಬೆಂಗಳೂರಿನಲ್ಲಿ ಫುಟ್​ಪಾತ್ ಅತಿಕ್ರಮಣ ತೆರವಿಗೆ ಇಂದೇ ಗಡುವು
ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ ಮನೆಯಿಂದಲೇ ಎಸ್​ಐಆರ್​ಗೆ ಚಾಲನೆ!
ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ ಮನೆಯಿಂದಲೇ ಎಸ್​ಐಆರ್​ಗೆ ಚಾಲನೆ!
ವಿವಾಹಿತೆ ಜೊತೆ ಪರಾರಿಯಾದ ಯುವಕನ ಮನೆ ಧ್ವಂಸ: ಕಮಿಷನರ್​​ ಏನಂದ್ರು?
ವಿವಾಹಿತೆ ಜೊತೆ ಪರಾರಿಯಾದ ಯುವಕನ ಮನೆ ಧ್ವಂಸ: ಕಮಿಷನರ್​​ ಏನಂದ್ರು?
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ
ನೋಡಿ, ಎಂಥಾ ಅದ್ಭುತ ದೃಶ್ಯ! ಒಂದೇ ಮರದ ಮೇಲೆ ಕುಳಿತ ಎರಡು ಚಿರತೆಗಳು
ನೋಡಿ, ಎಂಥಾ ಅದ್ಭುತ ದೃಶ್ಯ! ಒಂದೇ ಮರದ ಮೇಲೆ ಕುಳಿತ ಎರಡು ಚಿರತೆಗಳು
ಅಡ್ಡಮತದಾನ ಮಾಡಿಲ್ಲ: ಬೇಲೂರು ಬಿಜೆಪಿ ಶಾಸಕ ಸುರೇಶ್ ಆಣೆ-ಪ್ರಮಾಣ
ಅಡ್ಡಮತದಾನ ಮಾಡಿಲ್ಲ: ಬೇಲೂರು ಬಿಜೆಪಿ ಶಾಸಕ ಸುರೇಶ್ ಆಣೆ-ಪ್ರಮಾಣ
ಕಾರವಾರದಲ್ಲಿ ಅಬ್ಬರಿಸಿದ ಮಳೆರಾಯ; ಹಲವೆಡೆ ರಸ್ತೆಗಳು ಜಲಾವೃತ!
ಕಾರವಾರದಲ್ಲಿ ಅಬ್ಬರಿಸಿದ ಮಳೆರಾಯ; ಹಲವೆಡೆ ರಸ್ತೆಗಳು ಜಲಾವೃತ!