AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Toxic Movie: ‘ಟಾಕ್ಸಿಕ್’ ಟೀಸರ್​ನ ಆ​ ಡೈಲಾಗ್​​ನಲ್ಲೇ ಅಡಗಿದೆ ಚಿತ್ರದ ಕಥೆ

Toxic Movie Teaser: 'ಟಾಕ್ಸಿಕ್' ಚಿತ್ರದ ಟೀಸರ್ ಎಲ್ಲೆಡೆ ಚರ್ಚೆಯಾಗುತ್ತಿದೆ. ಯಶ್ ಅವರ 'Daddy's Home' ಡೈಲಾಗ್ ಪ್ರಮುಖ ಆಕರ್ಷಣೆ. ಹಾಲಿವುಡ್ ಶೈಲಿಯ ಮೇಕಿಂಗ್, ಬೋಲ್ಡ್ ದೃಶ್ಯಗಳು ಎ ಪ್ರಮಾಣಪತ್ರ ನಿರೀಕ್ಷೆಯನ್ನು ಮೂಡಿಸಿವೆ. ಮಾರ್ಚ್ 19ರಂದು ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದಲ್ಲಿ ಯಶ್ ಅವರ ರಾಯ ಪಾತ್ರ ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

Toxic Movie: ‘ಟಾಕ್ಸಿಕ್’ ಟೀಸರ್​ನ ಆ​ ಡೈಲಾಗ್​​ನಲ್ಲೇ ಅಡಗಿದೆ ಚಿತ್ರದ ಕಥೆ
ಟಾಕ್ಸಿಕ್ ಟೀಸರ್
ರಾಜೇಶ್ ದುಗ್ಗುಮನೆ
| Edited By: |

Updated on:Jan 08, 2026 | 5:00 PM

Share

‘ಟಾಕ್ಸಿಕ್’ ಚಿತ್ರದ ಟೀಸರ್ (Toxic Movie Teaser) ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ಈ ಚಿತ್ರದ ಮೇಕಿಂಗ್ ಹೇಗಿರಲಿದೆ ಎಂಬ ಸಣ್ಣ ಝಲಕ್ ಟೀಸರ್​​ನಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಬರೋ ಬೋಲ್ಡ್ ದೃಶ್ಯಗಳನ್ನು ನೋಡಿದರೆ ಇದೊಂದು ‘ಎ’ ಪ್ರಮಾಣಪತ್ರ ಪಡೆಯಲಿರುವ ಚಿತ್ರ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗುತ್ತಿದೆ. ಹೀಗಿರುವಾಗೇ ‘ಟಾಕ್ಸಿಕ್’ ಸಿನಿಮಾದ ಟೀಸರ್​​ನಲ್ಲಿ ಬರೋ ಕೊನೆಯ ಡೈಲಾಗ್ ಗಮನ ಸೆಳೆಯುವ ರೀತಿಯಲ್ಲಿದೆ. ಇಡೀ ಚಿತ್ರ ಕಥೆ ಇದರಲ್ಲೇ ಅಡಿಗೆ ಎನ್ನಲಾಗಿದೆ. ‘ಟಾಕ್ಸಿಕ್’ ಚಿತ್ರದ ಓಪನಿಂಗ್ ದೃಶ್ಯ ಆರಂಭ ಆಗೋದು ಸ್ಮಶಾನದ ಮೂಲಕ. ಹೆಣ ಹೂಳುವ ಕೆಲಸ ಆಗುತ್ತಾ ಇರುತ್ತದೆ. ಅಲ್ಲಿಗೆ ಬರೋ ಗ್ಯಾಂಗ್ ಇವರ ಮೇಲೆ ಹಲ್ಲೆ ಮಾಡುತ್ತದೆ. ಅವರನ್ನು ಸ್ಮಶಾನದಿಂದ ಹೊರ ಹಾಕುತ್ತಾರೆ. ಆಗ ಎಂಟ್ರಿ ಆಗುತ್ತಾನೆ ರಾಯ (ಯಶ್). ಬೋಲ್ಡ್ ದೃಶ್ಯವನ್ನು ತೋರಿಸೋ ನಿರ್ದೇಶಕಿ ಗೀತು ಮೋಹನ್​​ದಾಸ್, ನಂತರ ಮಾಸ್ ಅಂಶ ತೋರಿಸುತ್ತಾರೆ.

ಟಾಕ್ಸಿಕ್​ ಟೀಸರ್​

ಯಶ್ ಅವರಿಗೆ ಇಡೀ ಟೀಸರ್​ನಲ್ಲಿ ಇರೋದು ಒಂದೇ ಡೈಲಾಗ್, ಅದುವೇ ‘Daddy’s Home’ ಎಂದು. ಈ ಪದದ ಅರ್ಥ ‘ಲೀಡರ್ ಬಂದಾಯ್ತು’ ಎಂದು. ಅಥವಾ ರಕ್ಷಕ ಬಂದ ಎಂಬರ್ಥವೂ ಬರುತ್ತದೆ. ಅಂದರೆ, ಕೆಟ್ಟವರಿಗೆ ರಾಯ ದುಸ್ವಪ್ನನಾಗುತ್ತಾನೆ ಎಂಬರ್ಥವನ್ನೂ ಇದಕ್ಕೆ ಕಲ್ಪಿಸಬಹುದು. ಈ ಚಿತ್ರದಲ್ಲಿ ಯಶ್ ಅವರೇ ಗ್ಯಾಂಗ್​​ಸ್ಟರಾ ಎಂಬ ಪ್ರಶ್ನೆಯೂ ಮೂಡುತ್ತದೆ.

ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್​​​ನಲ್ಲಿ ಮಾಸ್ ಹಾಗೂ ಹಸಿಬಿಸಿ ದೃಶ್ಯ; ಇಲ್ಲಿವೆ ಫೋಟೋಸ್

‘ಟಾಕ್ಸಿಕ್’ ಸಿನಿಮಾ ಕೇವಲ ವಯಸ್ಕರಿಗೆ ಮಾತ್ರ. ಚಿತ್ರದ ಮೇಕಿಂಗ್ ಹಾಲಿವುಡ್ ಸ್ಟೈಲ್​​ನಲ್ಲಿ ಇದೆ. ಈ ಟೀಸರ್ ಮೂರು ಗಂಟೆಗೆ ಬರೋಬ್ಬರಿ 3 ಲಕ್ಷದಷ್ಟು ವೀಕ್ಷಣೆ ಕಂಡಿದೆ ಎಂಬುದು ವಿಶೇಷ. ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ನಯನತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಶಿ, ಕಿಯಾರಾ ಅಡ್ವಾಣಿ ಮೊದಲಾದವರು ನಟಿಸಿದ್ದಾರೆ. ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗಲಿದೆ. ಟ್​ರೇಲರ್​​ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:11 pm, Thu, 8 January 26

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ