- Kannada News Photo gallery Yash Starrer Toxic Movie Teaser Yash Look is So bold Teaser Is full of Bold scenes
‘ಟಾಕ್ಸಿಕ್’ ಟೀಸರ್ನಲ್ಲಿ ಮಾಸ್ ಹಾಗೂ ಹಸಿಬಿಸಿ ದೃಶ್ಯ; ಇಲ್ಲಿವೆ ಫೋಟೋಸ್
‘ಟಾಕ್ಸಿಕ್’ ಸಿನಿಮಾ ಯಶ್ ಅವರ ಪೋಸ್ಟರ್ ರಿಲೀಸ್ ಮಾಡಿತ್ತು.ಈ ಪೋಸ್ಟರ್ ಅಲ್ಲಿ ಯಶ್ ಅವರ ಲುಕ್ ರಿವೀಲ್ ಆಗಿರಲಿಲ್ಲ. ಅವರನ್ನು ಹಿಂದಿನಿಂದ ತೋರಿಸಲಾಗಿತ್ತು. ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ಇತರ ಹೀರೋಯಿನ್ಗಳ ಪೋಸ್ಟರ್ ಬಿಡುಗಡೆ ಮಾಡಿತ್ತು. ಈಗ ತಂಡ ಟೀಸರ್ ರಿಲೀಸ್ ಮಾಡಿ ಸಿನಿಮಾದ ಪ್ರಚಾರಕ್ಕೆ ಮುನ್ನುಡಿ ಬರೆದಿದೆ.
Updated on:Jan 08, 2026 | 11:18 AM

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದೆ. ಇದಕ್ಕಾಗಿ ಅವರ ಫ್ಯಾನ್ಸ್ ಕಾಯುತ್ತಿದ್ದಾರೆ. ಯಶ್ ಜನ್ಮದಿನದ ಪ್ರಯುಕ್ತ ಇಂದು (ಏಪ್ರಿಲ್ 8) ಟೀಸರ್ ರಿಲೀಸ್ ಆಗಿದ್ದು, ಗಮನ ಸೆಳೆಯೋ ರೀತಿಯಲ್ಲಿ ಇದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ವಿವಿಧ ರೀತಿಯ ಗನ್ ಬಳಕೆ ಆಗಿದೆ. ಇಲ್ಲಿ ಬಾಂಬ್ ಸಿಡಿಯುತ್ತೆ. ಯಶ್ ಅವರು ತಮ್ಮ ರಗಡ್ ಲುಕ್ ಮೂಲಕ ಮಿಂಚುತ್ತಾರೆ. ಈ ಟೀಸರ್ ನೋಡಿದ ಎಲ್ಲರೂ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಯಶ್ ಅವರು ಶರ್ಟ್ಲೆಸ್ ಆಗಿ ಎಂಟ್ರಿ ಕೊಡುತ್ತಾರೆ. ಈ ಸಿನಿಮಾದಲ್ಲಿ ಅವರ ಪಾತ್ರದ ಹೆಸರು ರಾಯ. ಇದು ಪಕ್ಕಾ ಸ್ಥಳೀಯ ಹೆಸರು. ಸಿನಿಮಾ ಮೇಕಿಂಗ್ ಹಾಲಿವುಡ್ ಸ್ಟೈಲ್ನಲ್ಲಿ ಇದೆ ಎಂಬುದು ವಿಶೇಷ.

ಹಸಿಬಿಸಿ ದೃಶ್ಯಗಳು ಕೂಡ ಟೀಸರ್ನಲ್ಲಿ ಇವೆ. ಹೀಗಾಗಿ, ಈ ಸಿನಿಮಾ ಎ ಸರ್ಟಿಫಿಕೆಟ್ ಪಡೆಯೋದು ಪಕ್ಕಾ ಎಂದು ಹೇಳಲಾಗುತ್ತಾ ಇದೆ. ಯಶ್ ಫ್ಯಾನ್ಸ್ಗೆ ಟೀಸರ್ ಇಷ್ಟ ಆಗಿದೆ.

ಯಶ್ ಅವರು ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಸಿಗಾರ್ ಸೇದುತ್ತಾ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ‘ಧುರಂಧರ್ 2’ ಎದುರು ‘ಟಾಕ್ಸಿಕ್’ ತೆರೆಗೆ ಬರುತ್ತಿದೆ.
Published On - 11:12 am, Thu, 8 January 26




