ಕುಟುಂಬ ಸಮೇತ ‘ಟಾಕ್ಸಿಕ್’ ಟೀಸರ್ ನೋಡಿದ ಪ್ರೇಕ್ಷಕರು ಕಂಗಾಲು
ಯಶ್ ನಟನೆಯ ಸಿನಿಮಾಗಳಿಗೆ ಫ್ಯಾಮಿಲಿ ಆಡಿಯನ್ಸ್ ಇದ್ದಾರೆ. ಅವರೆಲ್ಲ ‘ಟಾಕ್ಸಿಕ್’ ಟೀಸರ್ ನೋಡಿ ಹೌಹಾರಿದ್ದಾರೆ. ಹಾಲಿವುಡ್ ಲೆವೆಲ್ನಲ್ಲಿ ಈ ಸಿನಿಮಾದ ಟೀಸರ್ ಮೂಡಿಬಂದಿದೆ. ಭರ್ಜರಿ ಆ್ಯಕ್ಷನ್ ಜೊತೆಯಲ್ಲಿ ಹಸಿಬಿಸಿ ದೃಶ್ಯವೂ ಇದೆ. ಟೀಸರ್ ಈ ರೀತಿ ಇರಲಿದೆ ಎಂಬ ಸುಳಿವು ಇಲ್ಲದೇ ಫ್ಯಾಮಿಲಿ ಸಮೇತರಾಗಿ ಟಿವಿಯಲ್ಲಿ ನೋಡಿದವರೆಲ್ಲ ಕಂಗಾಲಾಗಿದ್ದಾರೆ.

ನಟ ಯಶ್ (Yash) ಅವರು ಇಂದು (ಜನವರಿ 8) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 40ನೇ ವರ್ಷದ ಜನ್ಮದಿನದ ಪ್ರಯುಕ್ತ ಅಭಿಮಾನಿಗಳಿಗೆ ಅವರು ದೊಡ್ಡ ಗಿಫ್ಟ್ ನೀಡಿದ್ದಾರೆ. ‘ಟಾಕ್ಸಿಕ್’ (Toxic) ಸಿನಿಮಾದಿಂದ ಗಿಫ್ಟ್ ರೂಪದಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ. ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಸಖತ್ ಅದ್ದೂರಿಯಾಗಿ ಮೂಡಿಬರುತ್ತಿದೆ. ಟೀಸರ್ ತುಂಬಾ ಬೋಲ್ಡ್ ಆಗಿದೆ. ಮೊದಲ ಬಾರಿಗೆ ಕುಟುಂಬ ಸಮೇತರಾಗಿ ‘ಟಾಕ್ಸಿಕ್’ ಟೀಸರ್ (Toxic Teaser) ನೋಡಿದ ಫ್ಯಾಮಿಲಿ ಪ್ರೇಕ್ಷಕರಿಗೆ ಶಾಕ್ ಆಗಿದೆ. ಅದರಲ್ಲಿ ಯಶ್ ಅವತಾರ ಕಂಡು ಎಲ್ಲರೂ ಕಂಗಾಲಾಗಿದ್ದಾರೆ.
ಯಶ್ ಅವರು ಫ್ಯಾಮಿಲಿ ಮ್ಯಾನ್. ಈವರೆಗೂ ಅವರು ಕುಟುಂಬ ಸಮೇತರಾಗಿ ಕುಳಿತು ನೋಡುವಂತಹ ಸಿನಿಮಾಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಫ್ಯಾಮಿಲಿ ಆಡಿಯನ್ಸ್ ಜಾಸ್ತಿ ಇದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ಬಿಡುಗಡೆ ಆಗುತ್ತದೆ ಎಂದಾಗ ಫ್ಯಾಮಿಲಿ ಆಡಿಯನ್ಸ್ ಕೌತುಕದಿಂದ ಕಾದಿದ್ದರು. ಆದರೆ ಟೀಸರ್ ನೋಡಿದಾಗ ಎಲ್ಲರಿಗೂ ಶಾಕ್ ಎದುರಾಯಿತು.
ಹಾಲಿವುಡ್ ನಟಿಯ ಜೊತೆ ಯಶ್ ಅವರು ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹಸಿಬಿಸಿ ದೃಶ್ಯದಲ್ಲಿ ಅವರು ನಟಿಸಿದ್ದಾರೆ. ಟೀಸರ್ನಲ್ಲಿ ಈ ರೀತಿಯ ದೃಶ್ಯ ಇರಬಹುದು ಎಂದು ಫ್ಯಾಮಿಲಿ ಆಡಿಯನ್ಸ್ ಕಿಂಚಿತ್ತೂ ನಿರೀಕ್ಷಿಸಿರಲಿಲ್ಲ. ಮನೆಯಲ್ಲಿ ಕುಳಿತು, ಟಿವಿಯಲ್ಲಿ ಫ್ಯಾಮಿಲಿ ಸಮೇತರಾಗಿ ಟೀಸರ್ ವೀಕ್ಷಿಸಿದ ಪ್ರೇಕ್ಷಕರು ಒಮ್ಮೆಲೇ ಕಂಗಾಲಾಗಿದ್ದಾರೆ.
ಟಾಕ್ಸಿಕ್ ಸಿನಿಮಾ ಟೀಸರ್:
‘ಕನ್ನಡದ ಪ್ರೇಕ್ಷಕರು ಇದನ್ನು ಊಹಿಸಿರಲಿಲ್ಲ’ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ‘ಕಾರ್ ದೃಶ್ಯ ನಿಜಕ್ಕೂ ಅನಿರೀಕ್ಷಿತವಾಗಿತ್ತು. ಫ್ಯಾಮಿಲಿ ಜೊತೆ ಕುಳಿತು ನೋಡಿದವರ ಪಾಡು ಏನಾಗಿರಬಹುದು ಅಂತ ಊಹಿಸಿ’ ಎಂಬಿತ್ಯಾದಿ ಕಮೆಂಟ್ಗಳು ಕೂಡ ಬಂದಿವೆ. ಟೀಸರ್ ಈ ರೀತಿ ಇದ್ದರೆ ಒಟ್ಟಾರೆ ಸಿನಿಮಾ ಹೇಗಿರಬಹುದು ಎಂಬ ಕೌತುಕ ಮೂಡಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್ ನೋಡಿ ಅಚ್ಚರಿ ವ್ಯಕ್ತಪಡಿಸಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ
ಕನ್ನಡ ಮತ್ತು ಇಂಗ್ಲಿಷ್ನಲ್ಲಿ ‘ಟಾಕ್ಸಿಕ್’ ಸಿನಿಮಾ ಸಿದ್ಧವಾಗುತ್ತಿದೆ. ಇದು ಹಾಲಿವುಡ್ ರೀತಿಯ ಮೇಕಿಂಗ್ ಇರುವ ಸಿನಿಮಾ. ಸಿನಿಮಾದಲ್ಲಿನ ದೃಶ್ಯಗಳು ಕೂಡ ಹಾಗೆಯೇ ಇರಲಿವೆ ಎಂಬುದಕ್ಕೆ ಟೀಸರ್ನಲ್ಲಿ ಸಾಕ್ಷಿ ಸಿಕ್ಕಿದೆ. ಈವರೆಗೂ ‘ಟಾಕ್ಸಿಕ್’ ಸಿನಿಮಾದ ಕಥೆ ಏನು ಎಂಬುದು ರಿವೀಲ್ ಆಗಿಲ್ಲ. ಆದರೆ ಇದು ಯಾವ ರೀತಿಯ ಸಿನಿಮಾ ಎಂಬುದರ ಝಲಕ್ ಕಾಣಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




