AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಜೊತೆ ಕಾರಿನಲ್ಲಿದ್ದ ಯುವತಿ ಯಾರು? ಖಾತ್ರಿ ಪಡಿಸಿದ ನಿರ್ದೇಶಕಿ

Toxic movie teaser: ಕೆಲ ದಿನದ ಹಿಂದೆ ಬಿಡುಗಡೆ ಆಗಿರುವ ‘ಟಾಕ್ಸಿಕ್’ ಸಿನಿಮಾದ ಟೀಸರ್ ಹಾಲಿವುಡ್ ಮಾದರಿಯಲ್ಲಿದೆ. ಮೂರು ನಿಮಿಷವೂ ಇಲ್ಲದ ಈ ಟೀಸರ್ ಅನ್ನು ವಿಶ್ವದಾದ್ಯಂತ 30 ಕೋಟಿಗೂ ಹೆಚ್ಚು ಮಂದಿ ಈಗಾಗಲೇ ವೀಕ್ಷಿಸಿದ್ದಾರೆ. ಟೀಸರ್​​ನಲ್ಲಿ ಯಶ್ ಜೊತೆಗಿರುವ ಹಾಟ್ ಯುವತಿ ಯಾರೆಂಬುದು ಇದೀಗ ಮತ್ತೆ ಆಗಿದೆ. ಸ್ವತಃ ನಿರ್ದೇಶಕಿಯೇ ಆ ಯುವತಿಯ ಪರಿಚಯ ಮಾಡಿಕೊಟ್ಟಿದ್ದಾರೆ.

ಯಶ್ ಜೊತೆ ಕಾರಿನಲ್ಲಿದ್ದ ಯುವತಿ ಯಾರು? ಖಾತ್ರಿ ಪಡಿಸಿದ ನಿರ್ದೇಶಕಿ
Toxic Cemetery Girl
ಮಂಜುನಾಥ ಸಿ.
|

Updated on: Jan 11, 2026 | 5:50 PM

Share

ಯಶ್ (Yash) ನಟಿಸಿರುವ ‘ಟಾಕ್ಸಿಕ್’ ಸಿನಿಮಾದ ಟೀಸರ್ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಟೀಸರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಸುದ್ದಿ ವಾಹಿನಿಗಳಲ್ಲಿಯೂ ಸಹ ಚರ್ಚೆ ನಡೆಯುತ್ತಿದೆ. ಇದೀಗ ಬಿಡುಗಡೆ ಆಗಿರುವ ‘ಟಾಕ್ಸಿಕ್’ ಸಿನಿಮಾದ ಟೀಸರ್ ಹಾಲಿವುಡ್ ಮಾದರಿಯಲ್ಲಿದೆ. ಮೂರು ನಿಮಿಷವೂ ಇಲ್ಲದ ಈ ಟೀಸರ್ ಅನ್ನು ವಿಶ್ವದಾದ್ಯಂತ 30 ಕೋಟಿಗೂ ಹೆಚ್ಚು ಮಂದಿ ಈಗಾಗಲೇ ವೀಕ್ಷಿಸಿದ್ದಾರೆ. ಟೀಸರ್​​ನಲ್ಲಿರುವ ಹಾಟ್ ದೃಶ್ಯದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ.

ಇದು ಹೀಗಿರುವಾಗ, ಟೀಸರ್​​ನಲ್ಲಿ ಯಶ್​​ ಜೊತೆ ಕಾರಿನಲ್ಲಿರುವ ಯುವತಿ ಯಾರೆಂಬುದನ್ನು ಪತ್ತೆ ಹಚ್ಚುವ ಕಾರ್ಯವನ್ನು ನೆಟ್ಟಿಗರು ಮಾಡಿದ್ದಾರೆ. ಬಹುತೇಕರು, ‘ಟಾಕ್ಸಿಕ್’ ಟೀಸರ್​​ನಲ್ಲಿ ಯಶ್ ಜೊತೆಗಿರುವ ಯುವತಿ ನಟಿ ನಟೇಲಾ ಬರ್ನ್ ಎನ್ನಲಾಗಿತ್ತು. ಹಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ನಟೇಲಿ ಬರ್ನ್, ‘ಟಾಕ್ಸಿಕ್’ ಸಿನಿಮಾದ ಟೀಸರ್ ಹಂಚಿಕೊಂಡಿದ್ದರು. ಅಲ್ಲದೆ, ಅವರ ವಿಕಿಪೀಡಿಯಾ ಪೇಜ್​​ನಲ್ಲಿಯೂ ನಟೇಲಿ ಬರ್ನ್, ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸುತ್ತಿರುವುದಾಗಿ ಮಾಹಿತಿ ಇತ್ತು. ಇದೇ ಕಾರಣಕ್ಕೆ ಎಲ್ಲರೂ ‘ಟಾಕ್ಸಿಕ್’ ಸಿನಿಮಾದ ಟೀಸರ್​​ನಲ್ಲಿ ಯಶ್ ಜೊತೆಗೆ ಹಾಟ್ ದೃಶ್ಯದಲ್ಲಿ ಕಾಣಿಸಿಕೊಂಡಿರುವ ವಿದೇಶಿ ನಟಿ ನಟೇಲಿ ಬರ್ನ್ ಎಂದುಕೊಂಡಿದ್ದರು.

ಆದರೆ ಇದನ್ನು ಗಮನಿಸಿದ ‘ಟಾಕ್ಸಿಕ್’ ಸಿನಿಮಾದ ನಿರ್ದೇಶಕಿ ಗೀತು ಮೋಹನ್​​ದಾಸ್, ‘ಟಾಕ್ಸಿಕ್’ ಸಿನಿಮಾ ಟೀಸರ್​​ನಲ್ಲಿ ಇದ್ದ ನಟಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿದ್ದಾರೆ. ಟೀಸರ್​​ನಲ್ಲಿರುವುದು ನಟೇಲಿ ಬರ್ನ್ ಅಲ್ಲ ಬದಲಿಗೆ ನಟಿ ಬಿಯಾತ್ರೀಜ್ ಟಾಫೆಬಾಕ್. ನಟಿಯ ಚಿತ್ರ ಹಂಚಿಕೊಂಡಿರುವ ಗೀತು ಮೋಹನ್​​ದಾಸ್, ‘ಈಕೆಯೇ ನನ್ನ ಸಿಮೆಟ್ರಿ (ಸ್ಮಶಾನ)ದ ಹುಡುಗಿ’ ಎಂದಿದ್ದಾರೆ. ಅವರ ಇನ್​​ಸ್ಟಾಗ್ರಾಂ ಖಾತೆಯನ್ನು ಸಹ ಗೀತು ಮೋಹನ್​​ದಾಸ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಯಶ್ ಮುಂದಿನ ಸಿನಿಮಾ ನಿರ್ದೇಶಕರಿಗೆ ಸಲಹೆ ಕೊಟ್ಟ ‘ಟಾಕ್ಸಿಕ್’ ನಿರ್ದೇಶಕಿ

ನಟಿ ಬಿಯಾತ್ರೀಜ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ನಟಿಯ ಇನ್​​ಸ್ಟಾಗ್ರಾಂ ಖಾತೆ ಸಹ ಲಾಕ್ ಆಗಿದೆ. ಆದರೆ ‘ಟೀಸರ್’ ಬಿಡುಗಡೆ ಆಗುವ ಮುಂಚೆ ಬಿಯಾತ್ರೀಜ್ ಅವರ ಇನ್​​ಸ್ಟಾಗ್ರಾಂನಲ್ಲಿ ಕೇವಲ 1800 ಮಂದಿ ಫಾಲೋವರ್​​ಗಳು ಇದ್ದರು. ಆದರೆ ಟೀಸರ್ ಬಿಡುಗಡೆ ಆದ ಬಳಿಕ ಇದು ಲಕ್ಷಗಳಲ್ಲಿ ಹೆಚ್ಚಾಗಿರುವುದಂತೂ ಖಾತ್ರಿ. ಆದರೆ ಅವರ ಇನ್​​ಸ್ಟಾಗ್ರಾಂ ಪ್ರೈವೇಟ್ ಆಗಿರುವ ಕಾರಣ ಆಯ್ದ ಕೆಲವರಿಗಷ್ಟೆ ಅವರ ಫೋಟೊಗಳು, ಫಾಲೋವರ್​​ಗಳ ಸಂಖ್ಯೆ ತಿಳಿಯಲಿದೆ.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ನಾಯಕರಾದರೂ ನಾಯಕಿಯ ಪಾತ್ರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಇದ್ದಂತಿದೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ