ವೀಕೆಂಡ್ನಲ್ಲೂ ನಂದಿ ಹಿಲ್ಸ್ ಖಾಲಿ! ಊಟ-ತಿಂಡಿ ಸಿಗಲ್ಲ ಎಂಬ ಕಾರಣಕ್ಕೆ ಬಾರದ ಜನ
ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆಯ ಬಿಸಿ ಹೋಟೆಲ್ಗಳಿಗಷ್ಟೇ ಅಲ್ಲ, ಪ್ರವಾಸೋದ್ಯಮಕ್ಕೂ ತಟ್ಟಲು ಶುರುವಾಗಿದೆ. ವಾರಾಂತ್ಯಗಳಲ್ಲಿ ಜನರಿಂದ ತುಂಬಿ ತುಳುಕುತ್ತಿದ್ದ ಚಿಕ್ಕಬಳ್ಳಾಪುರದ ನಂದಿ ಹಿಲ್ಸ್ ಭಾನುವಾರ ಬಿಕೋ ಎನ್ನುತ್ತಿತ್ತು. ಹೋಟೆಲ್‌ಗಳು ಬಂದ್ ಆಗಿದ್ದರೆ ಊಟ-ತಿಂಡಿ ಸಿಗಲ್ಲ ಎಂಬ ಆತಂಕದಿಂದ ಜನ ಅತ್ತ ಮುಖಮಾಡಲೇ ಇಲ್ಲ.
ಚಿಕ್ಕಬಳ್ಳಾಪುರ, ಮಾರ್ಚ್ 16: ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆಯಿಂದ ರಾಜ್ಯದ್ಯಂತ ಹಲವು ಹೋಟೆಲ್‌ಗಳು ಬಂದ್ ಆಗಿದ್ದರೆ, ಇನ್ನೂ ಕೆಲವೆಡೆ ಸೌದೆ ಒಲೆಗಳನ್ನೇ ನಂಬಿಕೊಂಡು ಹೋಟೆಲ್ ನಡೆಸುವ ಸ್ಥಿತಿ ಇದೆ. ಇದರ ಪರಿಣಾಮ ಪ್ರವಾಸೋದ್ಯಮದ ಮೇಲೂ ತಟ್ಟಿದೆ. ವಾರಾಂತ್ಯಗಳಲ್ಲಿ ಜನರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ದ ಪ್ರವಾಸಿತಾಣ ನಂದಿಗಿರಿಧಾಮ ಭಾನುವಾರ ಜನ ಇಲ್ಲದೆ ಬಿಕೊ ಎನ್ನುತ್ತಿತ್ತು. ಗಿರಿಧಾಮದಕ್ಕೆ ಹೊದರೆ ಅಲ್ಲಿರುವ ಹೋಟೆಲ್ಗಳಲ್ಲಿ ತಿಂಡಿ-ಊಟ ಸಿಗುತ್ತದೆಯೋ ಇಲ್ಲವೋ ಎಂಬ ಅನುಮಾನದಿಂದ ಪ್ರವಾಸಿಗರು ಅತ್ತ ಮುಖ ಮಾಡಿಲ್ಲ. ಮತ್ತೊಂದೆಡೆ ನಂದಿಗಿರಿಧಾಮದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ಗಳಲ್ಲಿ ಕಮರ್ಷಿಯಲ್ ಗ್ಯಾಸ್ ಗಳಿಗೆ ಕೊರತೆ ಇಲ್ಲ. ಅವು ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿವೆ.
Follow Us
Latest Videos
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ
RSS ನೋಂದಣಿ ವಿವಾದ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಅಶೋಕ್ ಕೌಂಟರ್
ನೇಪಾಳದ ಪ್ರವಾಹದಿಂದ ಪಾರಾದ ಕನ್ನಡಗನ ಜೊತೆ ಸಿಎಂ ವಿಡಿಯೋ ಕಾಲ್, ಹೇಳಿದ್ದೇನು

