ಪಾಕ್ ಪಡೆಯನ್ನು ಮಕಾಡೆ ಮಲಗಿಸಿ ಹೊಸ ಇತಿಹಾಸ ಬರೆದ ಬಾಂಗ್ಲಾದೇಶ್
Bangladesh vs Pakistan: ಇದು ಬಾಂಗ್ಲಾದೇಶ್ ತಂಡದ ಐತಿಹಾಸಿಕ ಸರಣಿ ಗೆಲುವು ಎಂಬುದು ವಿಶೇಷ. ಅಂದರೆ ಬಾಂಗ್ಲಾದೇಶ್ ತಂಡವು ಪಾಕಿಸ್ತಾನದ ವಿರುದ್ಧ 11 ವರ್ಷಗಳ ನಂತರ ಮೊದಲ ಬಾರಿಗೆ ಏಕದಿನ ಸರಣಿಯನ್ನು (2-1 ರಿಂದ) ಗೆದ್ದುಕೊಂಡಿದೆ. 2015 ರ ಬಳಿಕ ಪಾಕ್ ವಿರುದ್ಧ ಒಮ್ಮೆಯೂ ಬಾಂಗ್ಲಾ ತಂಡ ಗೆದ್ದಿರಲಿಲ್ಲ.
ಪಾಕಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಬಾಂಗ್ಲಾದೇಶ್ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ 8 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು 127 ರನ್ಗಳ ವಿಜಯ ದಾಖಲಿಸಿದ್ದರು. ಇದೀಗ ಮೂರನೇ ಪಂದ್ಯದಲ್ಲಿ 11 ರನ್ಗಳ ರೋಚಕ ಗೆಲುವು ದಾಖಲಿಸಿ ಬಾಂಗ್ಲಾದೇಶ್ ತಂಡ ಸರಣಿ ವಶಪಡಿಸಿಕೊಂಡಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 50 ಓವರ್ಗಳಲ್ಲಿ 290 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 279 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಬಾಂಗ್ಲಾದೇಶ್ ಪಡೆ 11 ರನ್ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಪಾಕಿಸ್ತಾನ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಮೂರು ಸರಣಿಗಳನ್ನು ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ.
ಕಳೆದ ಎರಡು ವರ್ಷಗಳಲ್ಲಿ ಬಾಂಗ್ಲಾದೇಶವು ಪಾಕಿಸ್ತಾನ್ ವಿರುದ್ಧ ಅಸಾಧಾರಣ ಪ್ರದರ್ಶನ ನೀಡಿದೆ. ಏಕೆಂದರೆ ಬಾಂಗ್ಲಾ ಪಡೆ ಬ್ಯಾಕ್ ಟು ಬ್ಯಾಕ್ ಸರಣಿ ಗೆಲ್ಲುತ್ತಿರುವುದು ಇದೇ ಮೊದಲ ಬಾರಿಗೆ…
ಟೆಸ್ಟ್ ಕ್ರಿಕೆಟ್ (2024): ಪಾಕಿಸ್ತಾನದ ನೆಲದಲ್ಲೇ ಅವರನ್ನು 2-0 ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದುಕೊಂಡಿತು.
ಟಿ20 ಕ್ರಿಕೆಟ್ (2025): ಜುಲೈ 2025 ರಲ್ಲಿ ನಡೆದ ಸರಣಿಯಲ್ಲಿ ಪಾಕಿಸ್ತಾನವನ್ನು 2-1 ರಿಂದ ಸೋಲಿಸಿ ಮೊದಲ ಟಿ20 ಸರಣಿ ಜಯ ದಾಖಲಿಸಿತು.
ಏಕದಿನ ಕ್ರಿಕೆಟ್ (2026): ಇದೀಗ ಏಕದಿನ ಸರಣಿ ಗೆಲುವಿನೊಂದಿಗೆ, ಬಾಂಗ್ಲಾದೇಶವು ಪಾಕಿಸ್ತಾನದ ವಿರುದ್ಧ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಸರಣಿ ಗೆದ್ದ ಅಪರೂಪದ ಸಾಧನೆ ಮಾಡಿದೆ.
ಅಷ್ಟೇ ಅಲ್ಲದೆ ಇದು ಬಾಂಗ್ಲಾದೇಶ್ ತಂಡದ ಐತಿಹಾಸಿಕ ಸರಣಿ ಗೆಲುವು ಎಂಬುದು ವಿಶೇಷ. ಅಂದರೆ ಬಾಂಗ್ಲಾದೇಶ್ ತಂಡವು ಪಾಕಿಸ್ತಾನದ ವಿರುದ್ಧ 11 ವರ್ಷಗಳ ನಂತರ ಮೊದಲ ಬಾರಿಗೆ ಏಕದಿನ ಸರಣಿಯನ್ನು (2-1 ರಿಂದ) ಗೆದ್ದುಕೊಂಡಿದೆ. 2015 ರ ಬಳಿಕ ಪಾಕ್ ವಿರುದ್ಧ ಒಮ್ಮೆಯೂ ಬಾಂಗ್ಲಾ ತಂಡ ಗೆದ್ದಿರಲಿಲ್ಲ.
ಇದೀಗ ದಶಕದ ಬಳಿಕ ಪಾಕಿಸ್ತಾನ್ ತಂಡವನ್ನು ಮಕಾಡೆ ಮಲಗಿಸಿ ಹೊಸ ಇತಿಹಾಸ ನಿರ್ಮಿಸುವಲ್ಲಿ ಬಾಂಗ್ಲಾದೇಶ್ ತಂಡ ಯಶಸ್ವಿಯಾಗಿರುವುದು ವಿಶೇಷ.

