Salman Khan: ಸಲ್ಮಾನ್ ಖಾನ್ ಹೆಸರಲ್ಲಿ ವಂಚನೆ; ಎಚ್ಚರಿಕೆ ಕೊಟ್ಟ ಭಾಯಿಜಾನ್

‘ಸಲ್ಮಾನ್ ಖಾನ್ ಫಿಲ್ಮ್ಸ್’ ಪಾತ್ರಗಳ ಆಯ್ಕೆಗೆ ಕಾಲ್​ಫಾರ್ ಮಾಡಿದೆ ಎಂದು ಹೇಳಿ ವಂಚನೆ ಮಾಡಲಾಗುತ್ತಿದೆ. ಇಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಸಲ್ಮಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.

Salman Khan: ಸಲ್ಮಾನ್ ಖಾನ್ ಹೆಸರಲ್ಲಿ ವಂಚನೆ; ಎಚ್ಚರಿಕೆ ಕೊಟ್ಟ ಭಾಯಿಜಾನ್
ಸಲ್ಮಾನ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on:Jan 31, 2024 | 11:13 AM

ಇತ್ತೀಚೆಗೆ ಸಿನಿಮಾ ಹೆಸರಲ್ಲಿ ವಂಚನೆ ಮಾಡುವವರ ಸಂಖ್ಯೆ ಹೆಚ್ಚಿದೆ. ಸಿನಿಮಾದಲ್ಲಿ ನಟಿಸೋ ಅವಕಾಶ ನೀಡುವುದಾಗಿ ಅನೇಕರನ್ನು ಮೋಸ ಮಾಡಿದ ಘಟನೆ ನಡೆದಿದೆ. ‘ಸಲ್ಮಾನ್ ಖಾನ್ ಫಿಲ್ಮ್ಸ್’ ಹೆಸರಲ್ಲೂ ಮೋಸ ನಡೆಯುತ್ತಿದೆ. ಈ ವಿಚಾರ ಸಲ್ಮಾನ್ ಖಾನ್ (Salman Khan) ಗಮನಕ್ಕೆ ಬಂದಿದೆ. ಹೀಗಾಗಿ ತಮ್ಮ ಹೆಸರನ್ನು ಬಳಕೆ ಮಾಡಿಕೊಂಡು ವಂಚನೆ ಮಾಡುವವರಿಗೆ ಸಲ್ಲು ಎಚ್ಚರಿಕೆ ನೀಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದೆ.

ಸಲ್ಮಾನ್ ಖಾನ್ ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಇದರ ಅಡಿಯಲ್ಲಿ ಹಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ‘ಸಲ್ಮಾನ್ ಖಾನ್ ಫಿಲ್ಮ್ಸ್’ ಪಾತ್ರಗಳ ಆಯ್ಕೆಗೆ ಕಾಲ್​ಫಾರ್ ಮಾಡಿದೆ ಎಂದು ಹೇಳಿ ವಂಚನೆ ಮಾಡಲಾಗುತ್ತಿತ್ತು. ಇಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಸಲ್ಮಾನ್ ಖಾನ್ ಹೇಳಿದ್ದಾರೆ. ಜೊತೆಗೆ ಯಾವುದೇ ಸಿನಿಮಾಗಳಿಗೆ ಪಾತ್ರಗಳ ಆಯ್ಕೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಸಲ್ಮಾನ್ ಖಾನ್ ಅವರಾಗಲೀ ಸಲ್ಮಾನ್ ಖಾನ್ ಫಿಲ್ಮ್ಸ್ ಕಡೆಯಿಂದಾಗಲೀ ಪಾತ್ರಕ್ಕಾಗಿ ಯಾರನ್ನೂ ಆಯ್ಕೆ ಮಾಡುತ್ತಿಲ್ಲ. ನಮ್ಮ ಮುಂದಿನ ಸಿನಿಮಾಗಳಿಗಾಗಿ ಕಲಾವಿದರನ್ನು ಆಯ್ಕೆ ಮಾಡಲು ನಾವು ಯಾವುದೇ ಏಜೆಂಟ್​ಗಳನ್ನು ನೇಮಕ ಮಾಡಿಕೊಂಡಿಲ್ಲ. ಈ ಉದ್ದೇಶದಿಂದ ಬರೋ ಮೆಸೇಜ್ ಹಾಗೂ ಇಮೇಲ್​ಗಳನ್ನು ನಂಬಬೇಡಿ. ಸಲ್ಮಾನ್ ಖಾನ್ ಹಾಗೂ ಅಥವಾ ಸಲ್ಮಾನ್ ಖಾನ್ ಫಿಲ್ಮ್ಸ್ ಹೆಸರು ಬಳಕೆ ಮಾಡಿಕೊಂಡಿದ್ದು ಕಂಡರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಬಜರಂಗಿ ಭಾಯಿಜಾನ್’, ‘ದಬಂಗ್ 3’, ‘ರೇಸ್ 3’, ‘ಹೀರೋ’, ‘ಟ್ಯೂಬ್​ಲೈಟ್​’, ‘ಲವ್​​ಯಾತ್ರಿ’, ‘ನೋಟ್​​ಬುಕ್’, ‘ಭಾರತ್’, ‘ರಾಧೆ’, ‘ಅಂತಿಮ್’, ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸೇರಿ ಅನೇಕ ಸಿನಿಮಾಗಳ ನಿರ್ಮಾಣದಲ್ಲಿ ಸಲ್ಮಾನ್ ಖಾನ್ ಅವರ ಪಾಲೂ ಇದೆ. ಕೆಲವು ಸಿನಿಮಾಗಳು ಲಾಭ ಕಂಡರೆ ಇನ್ನೂ ಕೆಲವು ಸೋತಿವೆ.

ಇದನ್ನೂ ಓದಿ: ಟ್ರೋಫಿ ಗೆದ್ದ ಬಳಿಕ ಸಲ್ಮಾನ್ ಖಾನ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಮುನಾವರ್

ಸಲ್ಮಾನ್ ಖಾನ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಟೈಗರ್ 3’ ಚಿತ್ರದಲ್ಲಿ. ಈ ಸಿನಿಮಾಗೆ ಕತ್ರಿನಾ ಕೈಫ್ ನಾಯಕಿ. ‘ಟೈಗರ್’ ಸಿನಿಮಾ ಸರಣಿಯ ಮೂರನೇ ಸಿನಿಮಾ ಇದು. ಇಮ್ರಾನ್ ಹಷ್ಮಿ ಅವರು ವಿಲನ್ ಪಾತ್ರ ಮಾಡಿ ಗಮನ ಸೆಳೆದಿದ್ದರು. ಸಲ್ಮಾನ್ ಖಾನ್ ಮುಂದಿನ ಚಿತ್ರಕ್ಕಾಗಿ ಕರಣ್ ಜೋಹರ್ ಜೊತೆ ಕೈ ಜೋಡಿಸುತ್ತಿದ್ದಾರೆ. ವಿಷ್ಣುವರ್ಧನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನೈಜ ಘಟನೆ ಆಧರಿಸಿ ಸಿನಿಮಾ ಸಿದ್ಧಗೊಳ್ಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:07 am, Wed, 31 January 24