ಪ್ರೀತಿಯಿಂದ ಹಗ್ ಕೊಟ್ಟ ಶಾರುಖ್ ಖಾನ್​; ತಡೆಯಲಾಗದೆ ಕಣ್ಣೀರು ಹಾಕಿದ ಅಭಿಮಾನಿ

ಶಾರುಖ್ ಖಾನ್ ಅವರನ್ನು ಮಾತನಾಡಿಸಲು ಅಭಿಮಾನಿಯೊರ್ವ ವೇದಿಕೆ ಏರಿದ್ದಾನೆ. ಈ ವೇಳೆ ಶಾರುಖ್ ಅವರು ಹಗ್ ಕೊಟ್ಟಿದ್ದಾರೆ. ಇನದನ್ನು ನೋಡಿ ಆ ಅಭಿಮಾನಿಗೆ ಏನು ಮಾಡಬೇಕು ಎನ್ನುವುದೇ ಗೊತ್ತಾಗಲಿಲ್ಲ. ಅವರು ನಡುಗಿ ಹೋಗಿದ್ದಾರೆ.

ಪ್ರೀತಿಯಿಂದ ಹಗ್ ಕೊಟ್ಟ ಶಾರುಖ್ ಖಾನ್​; ತಡೆಯಲಾಗದೆ ಕಣ್ಣೀರು ಹಾಕಿದ ಅಭಿಮಾನಿ
ಶಾರುಖ್ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 30, 2024 | 12:17 PM

ಶಾರುಖ್ ಖಾನ್ (Shah Rukh Khan) ನಟನೆಯ ಮೂರು ಸಿನಿಮಾಗಳು 2023ರಲ್ಲಿ ರಿಲೀಸ್ ಆದವು. ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಸಿನಿಮಾಗಳಿಂದ ಶಾರುಖ್ ದೊಡ್ಡ ಗೆಲುವು ಕಂಡಿದ್ದಾರೆ. ಇದನ್ನು ಸಂಭ್ರಮಿಸಲು ಶಾರುಖ್ ಖಾನ್ ಅವರು ಅಭಿಮಾನಿಗಳನ್ನು ಭೇಟಿ ಆಗಿದ್ದಾರೆ. ಯಶ್ ರಾಜ್ ಸ್ಟುಡಿಯೋದಲ್ಲಿ ಈ ಕಾರ್ಯಕ್ರಮ ನಡೆದಿದೆ. ಶಾರುಖ್ ಖಾನ್ ಅವರು ಅಭಿಮಾನಿಗೆ ಪ್ರೀತಿಯಿಂದ ಹಗ್ ಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಹಗ್ ಪಡೆದ ಅಭಿಮಾನಿ ತಡೆಯಲಾಗದೆ ಕಣ್ಣೀರು ಹಾಕಿದ್ದಾರೆ.

ಶಾರುಖ್ ಖಾನ್ ಅವರನ್ನು ಭೇಟಿ ಮಾಡಬೇಕು ಎಂಬುದು ಅನೇಕ ಅಭಿಮಾನಿಗಳ ಕನಸು. ಈ ಕನಸು ಎಲ್ಲಾ ಸಂದರ್ಭದಲ್ಲೂ ಈಡೇರುವುದಿಲ್ಲ. ಕೆಲವೊಮ್ಮೆ ಅವರು ಸಿಟ್ಟಲ್ಲಿರುತ್ತಾರೆ. ಬೇರೆ ಏನಾದರೂ ಆಲೋನಚೆಯಲ್ಲಿ ಇದ್ದರೆ ಅಭಿಮಾನಿಗಳನ್ನು ಭೇಟಿ ಮಾಡುವುದಿಲ್ಲ. ಆದರೆ, ಸೋಮವಾರ (ಜನವರಿ 29) ಶಾರುಖ್ ಖಾನ್ ಎಲ್ಲವನ್ನೂ ಮರೆತು ಜಾಲಿ ಮೂಡ್​ನಲ್ಲಿದ್ದರು. ಅವರು ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ.

ಅಭಿಮಾನಿಯೊರ್ವ ಶಾರುಖ್ ಖಾನ್ ಅವರನ್ನು ಮಾತನಾಡಿಸಲು ವೇದಿಕೆ ಏರಿದ್ದಾರೆ. ಈ ವೇಳೆ ಶಾರುಖ್ ಅವರು ಹಗ್ ಕೊಟ್ಟಿದ್ದಾರೆ. ಇನದನ್ನು ನೋಡಿ ಆ ಅಭಿಮಾನಿಗೆ ಏನು ಮಾಡಬೇಕು ಎನ್ನುವುದೇ ತಿಳಿಯಲಿಲ್ಲ. ಅವರು ನಡುಗಿ ಹೋಗಿದ್ದಾರೆ. ಖುಷಿಯಲ್ಲಿ ಕಣ್ಣೀರು ಹಾಕಿದ್ದಾರೆ. ಆಗ ಶಾರುಖ್ ಖಾನ್ ಅವರು ಅಭಿಮಾನಿಯನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. ನಂತರ ಫೋಟೋ ಕ್ಲಿಕ್ ಮಾಡಿಕೊಂಡು ಅವರು ಸ್ಥಳದಿಂದ ತೆರಳಿದ್ದಾರೆ.

‘ಶಾರುಖ್ ಖಾನ್ ಅವರನ್ನು ಮೊದಲ ಬಾರಿಗೆ ಭೇಟಿ ಆದೆ. ಅದೆಷ್ಟು ಕಾಳಜಿ ತೋರಿಸಿದರು’ ಎಂದು ಆ ವ್ಯಕ್ತಿ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್​ಗೆ ನಾನಾ ರೀತಿಯ ಕಮೆಂಟ್​ಗಳು ಬಂದಿವೆ. ಆ ವ್ಯಕ್ತಿಯನ್ನು ಅದೃಷ್ಟವಂತ ಎಂದು ಉಳಿದ ಅಭಿಮಾನಿಗಳು ಕರೆದಿದ್ದಾರೆ. ಈ ವಿಡಿಯೋ ಅವರ ಅಭಿಮಾನಿ ಬಳಗದಲ್ಲಿ ವೈರಲ್ ಆಗಿದೆ. ಶಾರುಖ್ ಖಾನ್ ನಡೆದುಕೊಂಡ ರೀತಿಗೆ ಅನೇಕರು ಖುಷಿಯಾಗಿದ್ದಾರೆ.

View this post on Instagram

A post shared by SRK VIBE (@_srkvibe2.0)

ಶಾರುಖ್ ಖಾನ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಭಿಮಾನಿಗಳು ಕಂಡಾಗ ಅವರು ಮಾತನಾಡಿಸಿದರೆ ಎಂದಿಗೂ ಸಿಟ್ಟು ಮಾಡಿಕೊಂಡು ಹೋದವರಲ್ಲ. ಅಷ್ಟು ಒತ್ತಡದಲ್ಲಿದ್ದಾಗ ಮಾತ್ರ ಅವರು ಅಭಿಮಾನಿಗಳತ್ತ ತಿರುಗುದೇ ಹೊಗಿದ್ದಾರೆ.

ಇದನ್ನೂ ಓದಿ: ಯಾರಿಗೂ ಗೊತ್ತಾಗದಂತೆ ಕ್ಲಿನಿಕ್​ ಒಳಗೆ ಹೋದ ಶಾರುಖ್ ಖಾನ್; ಬರುವಾಗ ಆಗಿದ್ದೇನು?

ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾಗೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದರು. ಈ ಸಿನಿಮಾ 2023ರ ಜನವರಿಯಲ್ಲಿ ರಿಲೀಸ್ ಆಯಿತು. ‘ಪಠಾಣ್’ ಹಾಗೂ ‘ಡಂಕಿ’ ಸಿನಿಮಾಗಳು 2023ರಲ್ಲಿ ರಿಲೀಸ್ ಆಯಿತು. ಅವರು ಶೀಘ್ರವೇ ಹೊಸ ಸಿನಿಮಾ ಘೋಷಣೆ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಅವರು ದೊಡ್ಡ ದೊಡ್ಡ ನಿರ್ದೇಶಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಬ್ಯಾಕ್​ ಟು ಬ್ಯಾಕ್ ಅವರು ಮೂರು ಸಿನಿಮಾ ಘೋಷಣೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.  ಈ ಬಗ್ಗೆ ಶೀಘ್ರವೇ ಘೋಷಣೆ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್