‘ಗಂಧದ ಗುಡಿ’ ನಿರ್ದೇಶಕ ಅಮೋಘ ವರ್ಷ ಜತೆ ಡಬ್ಬಿಂಗ್ ಕೆಲಸ ಆರಂಭಿಸಿದ ಯಶ್; ಸಿಕ್ತು ಹೊಸ ಅಪ್​ಡೇಟ್​

ಪುನೀತ್ ರಾಜ್​ಕುಮಾರ್ ಅವರ ಕನಸಿನ ಪ್ರಾಜೆಕ್ಟ್​ ‘ಗಂಧದ ಗುಡಿ’ಗೆ ಅಮೋಘವರ್ಷ ಅವರು ನಿರ್ದೇಶನ ಮಾಡಿದ್ದರು. ಈಡಾಕ್ಯುಮೆಂಟರಿಗೆ ಸಾಕಷ್ಟು ಮೆಚ್ಚುಗೆ ಕೇಳಿ ಬಂದಿದೆ. ಈಗ ಅಮೋಘವರ್ಷ ಅವರು ಮತ್ತೊಂದು ಡಾಕ್ಯುಮೆಂಟರಿ ಮಾಡಿದ್ದಾರೆ.

‘ಗಂಧದ ಗುಡಿ’ ನಿರ್ದೇಶಕ ಅಮೋಘ ವರ್ಷ ಜತೆ ಡಬ್ಬಿಂಗ್ ಕೆಲಸ ಆರಂಭಿಸಿದ ಯಶ್; ಸಿಕ್ತು ಹೊಸ ಅಪ್​ಡೇಟ್​
ಯಶ್-ಅಮೋಘವರ್ಷ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 10, 2022 | 5:48 PM

ರಾಕಿಂಗ್ ಸ್ಟಾರ್ ಯಶ್ (Yash) ಅವರ ಮುಂದಿನ ಚಿತ್ರ ಯಾವುದು ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಇದೆ. ಆದರೆ, ಸದ್ಯಕ್ಕಂತೂ ಈ ಪ್ರಶ್ನೆಗೆ ಉತ್ತರ ಸಿಗೋದು ಅನುಮಾನವೇ. ‘ಕೆಜಿಎಫ್ 2’ ಚಿತ್ರದಿಂದ ಯಶ್ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಈ ಕಾರಣಕ್ಕೆ ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದೆ. ಈಗ ಯಶ್ ಅವರು ಡಬ್ಬಿಂಗ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ‘ಗಂಧದ ಗುಡಿ’ (Gandhada Gudi)ನಿರ್ದೇಶಕ ಅಮೋಘವರ್ಷ ಜತೆ ಅನ್ನೋದು ವಿಶೇಷ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಫೋಟೋ ಹಿಂದಿನ ಕಥೆ ಏನು ಎಂಬುದನ್ನು ಈ ಸ್ಟೋರಿಯಲ್ಲಿ ಓದಿ.

ಪುನೀತ್ ರಾಜ್​ಕುಮಾರ್ ಅವರ ಕನಸಿನ ಪ್ರಾಜೆಕ್ಟ್​ ‘ಗಂಧದ ಗುಡಿ’ಗೆ ಅಮೋಘವರ್ಷ ಅವರು ನಿರ್ದೇಶನ ಮಾಡಿದ್ದರು. ಈಡಾಕ್ಯುಮೆಂಟರಿಗೆ ಸಾಕಷ್ಟು ಮೆಚ್ಚುಗೆ ಕೇಳಿ ಬಂದಿದೆ. ಈಗ ಅಮೋಘವರ್ಷ ಅವರು ಮತ್ತೊಂದು ಡಾಕ್ಯುಮೆಂಟರಿ ಮಾಡಿದ್ದಾರೆ. ಬೆಂಗಳೂರನ್ನು ಕಟ್ಟಿದ ನಾಡ ಪ್ರಭು ಕೆಂಪೇ ಗೌಡ ಕುರಿತು ಅಮೋಘವರ್ಷ ಸಾಕ್ಷ್ಯಚಿತ್ರ ಸಿದ್ಧಪಡಿಸಿದ್ದಾರೆ.

ಶುಕ್ರವಾರ (ನವೆಂಬರ್ 11) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಅವರ ಕಂಚಿನ ಪ್ರತಿಮೆ ಅನಾವರಣಗೊಳ್ಳಲಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಂಪೇಗೌಡ ಅವರ ಕುರಿತ ಡಾಕ್ಯುಮೆಂಟರಿ ಪ್ರಸಾರ ಕಾಣಲಿದೆ. ಕೆಂಪೇಗೌಡ ಅವರ ಜೀವನ ಮತ್ತು ಸಾಧನೆಗಳನ್ನು ಈ ಸಾಕ್ಷ್ಯಚಿತ್ರ ಹೇಳಲಿದೆ. ಈ ಡಾಕ್ಯುಮೆಂಟರಿಗೆ ಯಶ್ ಅವರು ಧ್ವನಿ ನೀಡಿದ್ದಾರೆ.  ಈ ಕಾರಣಕ್ಕೆ ಡಬ್ಬಿಂಗ್ ಸ್ಟುಡಿಯೋದಲ್ಲಿ ಇವರು ಕಾಣಿಸಿಕೊಂಡಿದ್ದಾರೆ.

ಯಶ್ ಅವರು ‘ಕೆಜಿಎಫ್ 3’ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ. ಅದಕ್ಕೂ ಮೊದಲು ಹೊಸದನ್ನು ಮಾಡುವ ಆಲೋಚನೆಯಲ್ಲಿ ಅವರಿದ್ದಾರೆ. ಕಳೆದ ಆರು ವರ್ಷಗಳಿಂದ ಅವರು ‘ಕೆಜಿಎಫ್’ ಸರಣಿ ಸಿನಿಮಾಗಳ ಬಗ್ಗೆ ಗಮನ ಹರಿಸಿದ್ದರು.

ಇದನ್ನೂ ಓದಿ: ‘ಯಶ್ ಮಾತ್ರವಲ್ಲ, ಬಿಟ್ರೆ ಪ್ರಭಾಸ್​ ಹೆಸರನ್ನು ಎಳೆದು ತರ್ತಾರೆ’; ‘ಬ್ರಹ್ಮಾಸ್ತ್ರ’ ಡೈರೆಕ್ಟರ್ ಹೀಗೆ ಹೇಳಿದ್ದೇಕೆ?

ಯಶ್ ಅವರು ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರ ಹೊಸ ಲುಕ್ ವೈರಲ್ ಆಗಿತ್ತು. ಯಶ್ ಅವರನ್ನು ಕಂಡು ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದರು. ಯಶ್ ಅವರ ಕೇಶವಿನ್ಯಾಸ ಸಾಕಷ್ಟು ಬದಲಾಗಿದೆ.

Published On - 5:43 pm, Thu, 10 November 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ