AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಬಗ್ಗೆ ಹಿಂದಿ ಸಿನಿಮಾ ತಂಡ ಅಸಮಾಧಾನ, ನಿರ್ಮಾಪಕರು ಹೇಳಿದ್ದೇನು?

Toxic movie: ಜೂನ್ 4ಕ್ಕೆ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಆದರೆ ‘ಟಾಕ್ಸಿಕ್’ ಸಿನಿಮಾ ತಂಡ ಹೊಸ ಸಿನಿಮಾ ಘೋಷಣೆ ಮಾಡಿದ ಬಳಿಕ ಬಾಲಿವುಡ್ ಸಿನಿಮಾ ಒಂದು ‘ಟಾಕ್ಸಿಕ್’ ವಿರುದ್ಧ ಅಸಮಾಧಾನ ಹೊರಹಾಕಿದೆ. ವರುಣ್ ಧವನ್ ನಟಿಸುತ್ತಿರುವ ಹೊಸ ಸಿನಿಮಾದ ನಿರ್ಮಾಪಕರು ‘ಟಾಕ್ಸಿಕ್’ ತಂಡದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

‘ಟಾಕ್ಸಿಕ್’ ಬಗ್ಗೆ ಹಿಂದಿ ಸಿನಿಮಾ ತಂಡ ಅಸಮಾಧಾನ, ನಿರ್ಮಾಪಕರು ಹೇಳಿದ್ದೇನು?
Toxic Vs Varun
ಮಂಜುನಾಥ ಸಿ.
|

Updated on:Mar 05, 2026 | 1:25 PM

Share

ಟಾಕ್ಸಿಕ್’ (Toxic) ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಬೇಕಿತ್ತು, ಆದರೆ ಚಿತ್ರತಂಡವು ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಮಧ್ಯ ಪ್ರಾಚ್ಯದಲ್ಲಿ ಚಾಲ್ತಿಯಲ್ಲಿರುವ ಯುದ್ಧ ಸ್ಥಿತಿಯಿಂದಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಜೂನ್ 4ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಆದರೆ ‘ಟಾಕ್ಸಿಕ್’ ಸಿನಿಮಾ ತಂಡ ಹೊಸ ಸಿನಿಮಾ ಘೋಷಣೆ ಮಾಡಿದ ಬಳಿಕ ಬಾಲಿವುಡ್ ಸಿನಿಮಾ ಒಂದು ‘ಟಾಕ್ಸಿಕ್’ ವಿರುದ್ಧ ಅಸಮಾಧಾನ ಹೊರಹಾಕಿದೆ. ವರುಣ್ ಧವನ್ ನಟಿಸುತ್ತಿರುವ ಹೊಸ ಸಿನಿಮಾದ ನಿರ್ಮಾಪಕರು ‘ಟಾಕ್ಸಿಕ್’ ತಂಡದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ವರುಣ್ ಧವನ್ ನಟಿಸಿ ಅವರ ತಂದೆ ಡೇವಿಡ್ ಧವನ್ ನಿರ್ದೇಶನ ಮಾಡುತ್ತಿರುವ ‘ಹೇ ಜವಾನಿ ತೋ ಇಷ್ಕ್ ಹೋನಾ ಹೇ’ ಸಿನಿಮಾ ಸಹ ಜೂನ್ 04ರಂದೇ ಬಿಡುಗಡೆ ಆಗಲಿದೆ. ಸಿನಿಮಾವನ್ನು ನಿರ್ಮಾಪಕ ರಮೇಶ್ ತುರಾನಿ ನಿರ್ಮಾಣ ಮಾಡುತ್ತಿದ್ದು, ‘ಟಾಕ್ಸಿಕ್’ ಸಿನಿಮಾದ ಘೋಷಣೆಯಿಂದ ಅವರು ಅಸಮಾಧಾನಗೊಂಡಿದ್ದಾರೆ. ‘ಯಾವುದೇ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸುವ ಮುಂಚೆ ಅದೇ ದಿನಾಂಕವನ್ನು ಮುಂಚಿತವಾಗಿ ಬುಕ್ ಮಾಡಿಕೊಂಡಿರುವ ತಂಡದ ಅನುಮತಿ ಪಡೆದುಕೊಳ್ಳುವ ಪದ್ಧತಿ ಇದೆ. ಆದರೆ ‘ಟಾಕ್ಸಿಕ್’ ತಂಡದವರು ನಮ್ಮನ್ನು ಸಂಪರ್ಕಿಸದೇ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ’ ಎಂದಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್’ ರಿಲೀಸ್ ಮುಂದೂಡಿಕೆ: ಲಾಭ ಪಡೆಯಲು ಮುಂದಾದ ಪವನ್ ಕಲ್ಯಾಣ್

ಆದರೆ ಕೆವಿಎನ್ ನಿರ್ಮಾಣ ಸಂಸ್ಥೆಯ ಪ್ರತಿನಿಧಿಯೊಬ್ಬರು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ನಾವು ಬಿಡುಗಡೆ ದಿನಾಂಕ ಘೋಷಿಸುವ ಮುಂಚೆಯೇ ‘ಹೇ ಜವಾನಿ ತೋ ಇಷ್ಕ್ ಹೋನಾ ಹೇ’ ಸಿನಿಮಾದ ನಿರ್ಮಾಪಕರನ್ನು ಭೇಟಿ ಆಗಿ ಮಾತನಾಡಿದ್ದೆವು. ತಮ್ಮ ಸಿನಿಮಾದ ಹಿಂದಿ ಆವೃತ್ತಿಯ ವಿತರಕ ಅನಿಲ್ ತಡಾನಿ ಅವರ ಮಧ್ಯಸ್ಥಿಕೆಯಲ್ಲಿ ನಾವು ನಿರ್ಮಾಪಕರೊಟ್ಟಿಗೆ ಮಾತನಾಡಿ, ನಮ್ಮ ಅನಿವಾರ್ಯತೆಯನ್ನು ಅವರಿಗೆ ತಿಳಿಸಿದೆವು’ ಎಂದಿದ್ದಾರೆ.

‘ಹೇ ಜವಾನಿ ತೋ ಇಷ್ಕ್ ಹೋನಾ ಹೇ’ ಸಿನಿಮಾ ಹಾಸ್ಯಮಯ ಪ್ರೇಮಕಥೆ ಹೊಂದಿರುವ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ವರುಣ್ ಧವನ್ ನಾಯಕ. ನಾಯಕಿಯರಾಗಿ ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ಒಟ್ಟಿಗೆ ನಟಿಸುತ್ತಿದ್ದಾರೆ. ಜೂನ್ 04 ರಂದು ಸಿನಿಮಾ ಬಿಡುಗಡೆ ಆಗುವುದಾಗಿ ಈ ಹಿಂದೆಯೇ ಈ ಚಿತ್ರತಂಡ ಘೋಷಿಸಿತ್ತು. ಆದರೆ ಈಗ ‘ಟಾಕ್ಸಿಕ್’ ಅದೇ ದಿನದಂದು ಬಿಡುಗಡೆ ಆಗುತ್ತಿರುವುದರಿಂದ ಸಿನಿಮಾ ಬಿಡುಗಡೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Thu, 5 March 26

Follow Us