AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನ ಎಡವಟ್ಟಿನಿಂದ ಆಸ್ಪತ್ರೆ ಸೇರಿದ ಯುವತಿ, ಆಗಿದ್ದೇನು?

ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನ ಎಡವಟ್ಟಿನಿಂದ ಆಸ್ಪತ್ರೆ ಸೇರಿದ ಯುವತಿ, ಆಗಿದ್ದೇನು?

ಕಿರಣ್​ ಸೂರ್ಯ
| Edited By: |

Updated on:Jul 06, 2026 | 7:02 PM

Share

ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನ ಅತಿ ವೇಗದ ಚಾಲನೆಯಿಂದ ಯುವತಿ ಆಸ್ಪತ್ರೆ ಸೇರುವಂತಾಗಿದೆ. ಹೌದು...ಜೂನ್ 17ರಂದು ಬೆಳಗ್ಗೆ ಸಾನಿಕೃಷ್ಣ (32) ಎನ್ನುವ ಯುವತಿ , ರ್ಯಾಪಿಡೋ ಬುಕ್ ಮಾಡಿಕೊಂಡು ಬೆಂಗಳೂರಿನ ಬೈರಸಂದ್ರದ ದೊಮ್ಮಲೂರಿಗೆ ಹೊರಟ್ಟಿದ್ದಳು. ಆದ್ರೆ, ಮಾರ್ಗ ಮಧ್ಯೆ ಅಪಘಾತವಾಗಿದೆ. ಟ್ರಾಕ್ಟರ್ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ.

ಬೆಂಗಳೂರು, ಜುಲೈ 06): ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನ ಅತಿ ವೇಗದ ಚಾಲನೆಯಿಂದ ಯುವತಿ ಆಸ್ಪತ್ರೆ ಸೇರುವಂತಾಗಿದೆ. ಹೌದು…ಜೂನ್ 17ರಂದು ಬೆಳಗ್ಗೆ ಸಾನಿಕೃಷ್ಣ (32) ಎನ್ನುವ ಯುವತಿ , ರ್ಯಾಪಿಡೋ ಬುಕ್ ಮಾಡಿಕೊಂಡು ಬೆಂಗಳೂರಿನ ಬೈರಸಂದ್ರದ ದೊಮ್ಮಲೂರಿಗೆ ಹೊರಟ್ಟಿದ್ದಳು. ಆದ್ರೆ, ಮಾರ್ಗ ಮಧ್ಯೆ ಅಪಘಾತವಾಗಿದೆ. ಟ್ರಾಕ್ಟರ್ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಪರಿಣಾಮ ಟ್ರ್ಯಾಕ್ಟರ್​ ಸಾನಿಕೃಷ್ಣ ಮೇಲೆ ಹರಿದಿದ್ದು, ಗಂಭೀರ ಗಾಯಗಳಾಗಿವೆ. ಬೆಂಗಳೂರಿನಲ್ಲಿ ಚಿಕಿತ್ಸಾ ವೆಚ್ಚ ಹೆಚ್ಚಾಗಿರುವ ಕಾರಣ, ಸದ್ಯ ಸಾನಿ ಅವರ ಸ್ವಂತ ಊರಾದ ಕೇರಳದ ಕೋಯಿಕ್ಕೊಡ್ ನಲ್ಲಿರುವ ಮಿತ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ, ರ್ಯಾಪಿಡೋ ಯಾವುದೇ ಹಣ ಸಹಾಯ ಮಾಡಿಲ್ಲ. ಇದರಿಂದ ಯುವತಿ ಇ-ಮೇಲ್ ಮೂಲಕ ದೂರು ನೀಡಿದ್ದು, ಈ ಸಂಬಂಧ
ಜೀವನ್ ಭೀಮಾ ನಗರ ಪೋಲಿಸ್ ಸ್ಟೇಷನ್ ನಲ್ಲಿ ಎಫ್ಐಆರ್ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 06, 2026 07:01 PM

Follow Us