AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರದೀಪ್ ರಂಗನಾಥನ್ ಹೊಸ ಸಿನಿಮಾ ಅನೌನ್ಸ್; ಒಂದೇ ಚಿತ್ರಕ್ಕೆ 6 ನಿರ್ದೇಶಕರು

ಸ್ಟಾರ್ ನಟ ಪ್ರದೀಪ್ ರಂಗನಾಥನ್ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾಗೆ 6 ನಿರ್ದೇಶಕರು ಇದ್ದಾರೆ ಎಂಬುದು ವಿಶೇಷ. 6 ಮಂದಿ ನಿರ್ದೇಶಕರ ತಂಡವನ್ನು ಪ್ರದೀಪ್ ರಂಗನಾಥನ್ ಅವರು ಪರಿಚಯಿಸಿದ್ದಾರೆ. ಈ ಸಿನಿಮಾದಲ್ಲಿ ಮಮಿತಾ ಬೈಜು ಅವರು ಪ್ರದೀಪ್ ಜೊತೆ ನಟಿಸುತ್ತಿದ್ದಾರೆ.

ಪ್ರದೀಪ್ ರಂಗನಾಥನ್ ಹೊಸ ಸಿನಿಮಾ ಅನೌನ್ಸ್; ಒಂದೇ ಚಿತ್ರಕ್ಕೆ 6 ನಿರ್ದೇಶಕರು
Pradeep Ranganathan
ಮದನ್​ ಕುಮಾರ್​
|

Updated on: Jul 06, 2026 | 8:29 PM

Share

ಮುಖ್ಯಾಂಶಗಳು

  • ಭಾರಿ ನಿರೀಕ್ಷೆ ಮೂಡಿಸಿದೆ ಪ್ರದೀಪ್ ರಂಗನಾಥನ್ ಹೊಸ ಸಿನಿಮಾ.
  • ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಬಂಡವಾಳ ಹೂಡಲಿರುವ ನಟ.
  • ‘ಪಿಆರ್ ಶೋ’ ನಿರ್ಮಾಣದ ಮೊದಲ ಚಿತ್ರಕ್ಕೆ 6 ಮಂದಿ ನಿರ್ದೇಶಕರು.

ಕಾಲಿವುಡ್‌ನ ಯುವ ಹಾಗೂ ಪ್ರತಿಭಾವಂತ ನಟ-ನಿರ್ದೇಶಕ ಪ್ರದೀಪ್ ರಂಗನಾಥನ್ (Pradeep Ranganathan) ತಮ್ಮದೇ ಆದ ಹೊಸ ನಿರ್ಮಾಣ ಸಂಸ್ಥೆಯನ್ನು ಘೋಷಿಸಿದ್ದಾರೆ. ‘ಪಿಆರ್ ಶೋ’ (PR Show) ಎಂದು ಹೆಸರಿಡಲಾದ ಈ ಬ್ಯಾನರ್ ಅಡಿಯಲ್ಲಿ ತಮ್ಮ ನೂತನ ಸಿನಿಮಾವನ್ನು ಅವರು ಅನೌನ್ಸ್ ಮಾಡಿದ್ದಾರೆ. ಈ ಚಿತ್ರಕ್ಕೆ ಒಬ್ಬರಲ್ಲ ಇಬ್ಬರಲ್ಲ, ಬರೋಬ್ಬರಿ 6 ಜನ ನಿರ್ದೇಶಕರು ಆ್ಯಕ್ಷನ್-ಕಟ್ ಹೇಳುತ್ತಿರುವುದು ಇಡೀ ಸೌತ್ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

‘ದಿ ಆಲ್ಫಾ ಯೂನಿಟ್’ ಜೊತೆ ಪ್ರದೀಪ್ ಮ್ಯಾಜಿಕ್:

ಸೋಮವಾರ (ಜುಲೈ 6) ಪ್ರದೀಪ್ ರಂಗನಾಥನ್ ಅವರು ಬಿಡುಗಡೆ ಮಾಡಿರುವ 2 ನಿಮಿಷಗಳ ವಿಶೇಷ ಪ್ರೋಮೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಾತ್ಕಾಲಿಕವಾಗಿ ‘PRS01’ ಎಂದು ಹೆಸರಿಡಲಾದ ಈ ಚಿತ್ರದಲ್ಲಿ ಪ್ರದೀಪ್ ರಂಗನಾಥನ್ ಅವರೊಂದಿಗೆ ‘ಪ್ರೇಮಲು’ ಖ್ಯಾತಿಯ ಮಮಿತಾ ಬೈಜು ಮತ್ತು ಅಶ್ವತ್ ಮಾರಿಮುತ್ತು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಹೊಸ ನಟಿ ಅನಾಮಿಕಾ ಮಾಹಿ, ಸ್ವಾಸಿಕಾ ಮತ್ತು ತೆಲುಗು ನಟ ಶಿವಾಜಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಹೊಸ ನಿರ್ದೇಶಕರ ತಂಡ ಕಟ್ಟಿಕೊಂಡ ಪ್ರದೀಪ್:

ಈ ಚಿತ್ರವನ್ನು ನಿರ್ದೇಶಿಸುತ್ತಿರುವ ಆರು ಜನ ಹೊಸ ನಿರ್ದೇಶಕರ ತಂಡಕ್ಕೆ ಪ್ರದೀಪ್ ‘ದಿ ಆಲ್ಫಾ ಯೂನಿಟ್’ ಎಂದು ಹೆಸರಿಟ್ಟಿದ್ದಾರೆ. ವಿಶಾಲ್ ಟಿಆರ್, ಯಶ್ ವಿ, ನರೇನ್, ಚಾಣಕ್ಯನ್ ಆರ್, ಧನುಷ್ ಕುಮಾರ್ ಮತ್ತು ಇಳಂಪರಿತಿ ಈ ಚಿತ್ರದ ನಿರ್ದೇಶಕರು. ಇವರಲ್ಲಿ ನರೇನ್, ವಿಶಾಲ್ ಮತ್ತು ಇಳಂಪರಿತಿ ಈ ಹಿಂದೆ ಪ್ರದೀಪ್ ಅವರೊಂದಿಗೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಚಾಣಕ್ಯನ್ ಅವರು ಅಶ್ವತ್ ತಂಡದಲ್ಲಿದ್ದರು. ಧನುಷ್ ಶಾರ್ಟ್ ಫಿಲ್ಮ್ ಮೇಕರ್ ಆಗಿದ್ದರೆ, ಯಶ್ 3D ಆರ್ಟಿಸ್ಟ್ ಆಗಿದ್ದಾರೆ. ಹೊಸಬರ ಈ ವಿಭಿನ್ನ ಪ್ರಯತ್ನಕ್ಕೆ ಪ್ರದೀಪ್ ಸಾಥ್ ನೀಡಿದ್ದಾರೆ.

ಕಥೆ ಬರೆದ ಪ್ರದೀಪ್; ಸಾಯಿ ಅಭ್ಯಂಕರ್ ಸಂಗೀತ:

ಈ ಚಿತ್ರಕ್ಕೆ ಸ್ವತಃ ಪ್ರದೀಪ್ ರಂಗನಾಥನ್ ಅವರೇ ಕಥೆ ಬರೆದು ಬಂಡವಾಳ ಹೂಡುತ್ತಿದ್ದಾರೆ. ಯುವ ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಅವರು ಈ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದು, ಚಿತ್ರದ ಪ್ರೋಮೋ ಜೊತೆಗೆ ‘ಆನೆ ವಾಲಾ ಸ್ಟಾರ್’ ಎಂಬ ವಿಶೇಷ ಹಾಡನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದರಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: Dude 2: ಬರಲಿದೆ ‘ಡ್ಯೂಡ್ 2’ ಸಿನಿಮಾ; ಕಥೆ ಮೆಚ್ಚಿದ ನಟ ಪ್ರದೀಪ್ ರಂಗನಾಥನ್

ತಮಿಳು ಮಾತ್ರವಲ್ಲದೆ ಈ ವಿಭಿನ್ನ ಪ್ರಯೋಗದ ಚಿತ್ರವನ್ನು ಕನ್ನಡ ಸೇರಿದಂತೆ ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಮಾಸ್ ಆ್ಯಕ್ಷನ್ ಮತ್ತು ಸಸ್ಪೆನ್ಸ್ ಎಲಿಮೆಂಟ್‌ಗಳಿರುವ ಈ ಚಿತ್ರದ ಗ್ಲಿಂಪ್ಸ್ ಸದ್ಯ ಸಿನಿರಂಗದಲ್ಲಿ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬಾಗಲಕೋಟೆಯಲ್ಲಿ ಏಕಾಏಕಿ ಕಾರು ಸ್ಫೋಟ: ಬಾಂಬ್ ಶಂಕೆ, ಖಾಕಿ ತನಿಖೆ
ಬಾಗಲಕೋಟೆಯಲ್ಲಿ ಏಕಾಏಕಿ ಕಾರು ಸ್ಫೋಟ: ಬಾಂಬ್ ಶಂಕೆ, ಖಾಕಿ ತನಿಖೆ
ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರ ಕೈಗೊಂಡ ಮೋದಿ, ಏನದು?
ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರ ಕೈಗೊಂಡ ಮೋದಿ, ಏನದು?
ಇವಾನ್ಸ್ ಹಿಡಿದ ಅತ್ಯದ್ಭುತ ಕ್ಯಾಚ್​​ಗೆ ಶತಕ ವಂಚಿತರಾದ ವೈಭವ್
ಇವಾನ್ಸ್ ಹಿಡಿದ ಅತ್ಯದ್ಭುತ ಕ್ಯಾಚ್​​ಗೆ ಶತಕ ವಂಚಿತರಾದ ವೈಭವ್
ಯುವಕರೊಂದಿಗೆ ಮೋದಿ ಸಂವಾದ ಹೇಗಿತ್ತು? ವಿದ್ಯಾರ್ಥಿಗಳು ಹೇಳಿದ್ದೇನು?
ಯುವಕರೊಂದಿಗೆ ಮೋದಿ ಸಂವಾದ ಹೇಗಿತ್ತು? ವಿದ್ಯಾರ್ಥಿಗಳು ಹೇಳಿದ್ದೇನು?
102 ಮೀ. ಉದ್ದದ ಸಿಕ್ಸರ್ ಬಾರಿಸಿದ ವೈಭವ್; ವಿಡಿಯೋ
102 ಮೀ. ಉದ್ದದ ಸಿಕ್ಸರ್ ಬಾರಿಸಿದ ವೈಭವ್; ವಿಡಿಯೋ
ವಿಕಸಿತ್ ವೈಬ್ರೆಂಟ್‌ ವಿಲೇಜ್‌:ಯುವಕರೊಂದಿಗೆ ಮೋದಿ ಸಂವಾದ ನೇರ ಪ್ರಸಾರ
ವಿಕಸಿತ್ ವೈಬ್ರೆಂಟ್‌ ವಿಲೇಜ್‌:ಯುವಕರೊಂದಿಗೆ ಮೋದಿ ಸಂವಾದ ನೇರ ಪ್ರಸಾರ
ಬಾಗಲಕೋಟೆಯ ಹಿಪ್ಪರಗಿ ಬಳಿ ಕಾರು ಸ್ಫೋಟದ ಬಗ್ಗೆ ಎಸ್​ಪಿ ಹೇಳಿದ್ದೇನು?
ಬಾಗಲಕೋಟೆಯ ಹಿಪ್ಪರಗಿ ಬಳಿ ಕಾರು ಸ್ಫೋಟದ ಬಗ್ಗೆ ಎಸ್​ಪಿ ಹೇಳಿದ್ದೇನು?
ರಾಜ್ ಬಿ. ಶೆಟ್ಟಿ ಹೋದಲ್ಲೆಲ್ಲ ‘ಕರಾವಳಿ’ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ
ರಾಜ್ ಬಿ. ಶೆಟ್ಟಿ ಹೋದಲ್ಲೆಲ್ಲ ‘ಕರಾವಳಿ’ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ
ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ ಅಧಿಕಾರ ಸ್ವೀಕಾರ
ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ ಅಧಿಕಾರ ಸ್ವೀಕಾರ
ಕಾರ್ಗಿಲ್ ವಿಜಯ್ ದಿವಸ: ಹುತಾತ್ಮ ವೀರ ಸೈನಿಕರಿಗೆ ಡಿಕೆ ಪುಷ್ಪನಮನ!
ಕಾರ್ಗಿಲ್ ವಿಜಯ್ ದಿವಸ: ಹುತಾತ್ಮ ವೀರ ಸೈನಿಕರಿಗೆ ಡಿಕೆ ಪುಷ್ಪನಮನ!