AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಚೆನ್ನಾಗಿ ನಿದ್ರೆ ಬರಬೇಕು ಅಂದ್ರೆ ಈ 5 ಆಹಾರಗಳನ್ನು ಸೇವನೆ ಮಾಡಿ

ಇತ್ತೀಚಿಗೆ ಅನೇಕರು ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ರೀತಿ ನಿದ್ರೆ ಸರಿಯಾಗಿ ಆಗದಿರುವುದು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಆಹಾರದಲ್ಲಿ ಕೆಲವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇರಿಸಿಕೊಳ್ಳುವುದರಿಂದ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾದರೆ ನಿದ್ರೆ ಚೆನ್ನಾಗಿ ಬರಲು ಯಾವ ರೀತಿಯ ಆಹಾರ ಸೇವಿಸಬೇಕು, ಯಾವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರಾತ್ರಿ ಚೆನ್ನಾಗಿ ನಿದ್ರೆ ಬರಬೇಕು ಅಂದ್ರೆ ಈ 5 ಆಹಾರಗಳನ್ನು ಸೇವನೆ ಮಾಡಿ
Top 5 Foods That Can Improve Sleep Quality NaturallyImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 06, 2026 | 10:10 PM

Share

ಮುಖ್ಯಾಂಶಗಳು

  • ನಿದ್ರೆ ಸರಿಯಾಗಿ ಬರುತ್ತಿಲ್ಲವೇ? ಈ ಆಹಾರಗಳನ್ನು ತಿನ್ನಿ
  • ಗಾಢ ನಿದ್ರೆಗೆ ಸಹಾಯ ಮಾಡುವ ಅತ್ಯುತ್ತಮ ಆಹಾರಗಳು
  • ನಿದ್ರೆ ಚೆನ್ನಾಗಿ ಮಾಡಲು ತಜ್ಞರು ಶಿಫಾರಸು ಮಾಡುವ ಆಹಾರಗಳು

ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ನಿದ್ರೆ ಸರಿಯಾಗಿ ಬರುವುದಿಲ್ಲ. ಅನೇಕರು ಗಾಢ ನಿದ್ರೆಯ ಕೊರತೆಯಿಂದ ಬಳಲುತ್ತಿದ್ದಾರೆ. ರಾತ್ರಿ ತಡವಾಗಿ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಸುವುದು, ನಿದ್ರೆ ಮಾಡುವ ಸಮಯ ಬದಲಾಗುವುದು, ಒತ್ತಡ, ಅತಿಯಾದ ಕ್ಯಾಫಿನ್ ಸೇವನೆ ಮತ್ತು ದೈಹಿಕ ಚಟುವಟಿಕೆಯ ಕೊರತೆ ನಿದ್ರೆಯ ಗುಣಮಟ್ಟವನ್ನು ಹದಗೆಡಿಸಬಹುದು. ಆದರೆ ದೀರ್ಘಕಾಲ ನಿದ್ರೆಯ ಸಮಸ್ಯೆ ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಹಾಗಾದರೆ ನಿದ್ರೆ (Sleep) ಚೆನ್ನಾಗಿ ಬರಲು ಯಾವ ರೀತಿಯ ಆಹಾರ ಸೇವಿಸಬೇಕು, ಯಾವ ರೀತಿಯ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಉತ್ತಮ ನಿದ್ರೆಗೆ ಈ 5 ಆಹಾರಗಳು ಸಹಕಾರಿ:

ಬಾದಾಮಿ: ಸಾಮಾನ್ಯವಾಗಿ ಬಾದಾಮಿಯಲ್ಲಿ ಮೆಗ್ನೀಷಿಯಂ, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿವೆ. ಇವು ದೇಹವನ್ನು ಶಾಂತಗೊಳಿಸಿ ಉತ್ತಮ ನಿದ್ರೆಗೆ ಸಹಾಯ ಮಾಡಬಹುದು.

ಅಖರೋಟ್: ಇದರಲ್ಲಿ ಮೆಲಟೋನಿನ್, ಒಮೆಗಾ-3 ಫ್ಯಾಟಿ ಆಮ್ಲಗಳು ಮತ್ತು ಆರೋಗ್ಯಕರ ಕೊಬ್ಬುಗಳಿದ್ದು, ನಿದ್ರೆಯ ಚಕ್ರವನ್ನು ಸಮತೋಲನದಲ್ಲಿಡಲು ನೆರವಾಗುತ್ತವೆ.

ಕಿವಿ ಹಣ್ಣು: ವಿಟಮಿನ್ ಸಿ, ಫೋಲೇಟ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಕಿವಿ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ನಿದ್ರೆ ಬೇಗ ಬರಲು ಹಾಗೂ ನಿದ್ರೆಯ ಗುಣಮಟ್ಟ ಸುಧಾರಿಸಲು ಸಹಕಾರಿ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: ದಿನಕ್ಕೆ ಕೇವಲ 30 ನಿಮಿಷ ನಡೆಯುವುದರಿಂದ ಆರೋಗ್ಯದಲ್ಲಿ ಯಾವ ರೀತಿ ಬದಲಾವಣೆ ಆಗುತ್ತೆ ಗೊತ್ತಾ?

ಕೊಬ್ಬಿನಾಂಶ ಹೆಚ್ಚಿರುವ ಮೀನು: ಸಾಲ್ಮನ್ ಮತ್ತು ಮ್ಯಾಕರಲ್‌ಗಳಂತಹ ಮೀನುಗಳಲ್ಲಿ ಒಮೆಗಾ-3 ಹಾಗೂ ವಿಟಮಿನ್ ಡಿ ಸಮೃದ್ಧವಾಗಿದ್ದು, ಉತ್ತಮ ನಿದ್ರೆ ಹಾಗೂ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಬಹುದು.

ಕ್ಯಾಮೊಮೈಲ್ ಟೀ: ಕ್ಯಾಫಿನ್ ರಹಿತ ಈ ಹರ್ಬಲ್ ಟೀಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸಿ ಗಾಢ ನಿದ್ರೆಗೆ ನೆರವಾಗಬಹುದು.

ಉತ್ತಮ ನಿದ್ರೆಗಾಗಿ ಈ ಅಭ್ಯಾಸಗಳೂ ಮುಖ್ಯ:

  • ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಮತ್ತು ಎದ್ದೇಳಿ.
  • ಮಲಗುವ ಒಂದು ಗಂಟೆ ಮೊದಲು ಮೊಬೈಲ್, ಟಿವಿ, ಲ್ಯಾಪ್‌ಟಾಪ್ ಬಳಕೆಯನ್ನು ತಪ್ಪಿಸಿ.
  • ಸಂಜೆ ನಂತರ ಚಹಾ, ಕಾಫಿ ಹಾಗೂ ಕ್ಯಾಫಿನ್ ಇರುವ ಪಾನೀಯಗಳನ್ನು ಕಡಿಮೆ ಮಾಡಿ.
  • ರಾತ್ರಿ ಹಗುರವಾದ ಆಹಾರ ಸೇವಿಸಿ.
  • ಮಲಗುವ ಕೋಣೆಯನ್ನು ಶಾಂತ ಮತ್ತು ಆರಾಮದಾಯಕವಾಗಿಡಿ.
  • ಪ್ರತಿದಿನ ನಿಯಮಿತ ವ್ಯಾಯಾಮ ಮಾಡಿ, ಆದರೆ ಮಲಗುವ ಮುನ್ನ ಭಾರೀ ವ್ಯಾಯಾಮ ಮಾಡಬೇಡಿ.

ನಿದ್ರೆಯ ಸಮಸ್ಯೆ ದೀರ್ಘಕಾಲ ಮುಂದುವರಿದರೆ ಅಥವಾ ಹಗಲಿನಲ್ಲಿ ನಿರಂತರ ಆಯಾಸ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಖಡ್ಗ ಕೈಯಲ್ಲಿ ಹಿಡಿದು ‘ಪಿನಾಕ’ ಟೀಸರ್ ಬಿಡುಗಡೆ ಮಾಡಿದ ನಟ ಗಣೇಶ್
ಖಡ್ಗ ಕೈಯಲ್ಲಿ ಹಿಡಿದು ‘ಪಿನಾಕ’ ಟೀಸರ್ ಬಿಡುಗಡೆ ಮಾಡಿದ ನಟ ಗಣೇಶ್
ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನ ಎಡವಟ್ಟಿನಿಂದ ಆಸ್ಪತ್ರೆ ಸೇರಿದ ಯುವತಿ
ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನ ಎಡವಟ್ಟಿನಿಂದ ಆಸ್ಪತ್ರೆ ಸೇರಿದ ಯುವತಿ
ಇಂಡೋನೇಷ್ಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಸರ್ಕಾರಿ ಗೌರವದ ಸ್ವಾಗತ
ಇಂಡೋನೇಷ್ಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಸರ್ಕಾರಿ ಗೌರವದ ಸ್ವಾಗತ
ಈ ತಿಂಗಳ ಅಂತ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆ
ಈ ತಿಂಗಳ ಅಂತ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆ
ಗುಂಪು ಸೇರಿಸಿ SIR ಮಾಡ್ತಿರುವ ಸ್ಥಳಕ್ಕೆ ಮಾಜಿ ಸಂಸದರ ಸಪ್ರೈಸ್​​ ಎಂಟ್ರಿ!
ಗುಂಪು ಸೇರಿಸಿ SIR ಮಾಡ್ತಿರುವ ಸ್ಥಳಕ್ಕೆ ಮಾಜಿ ಸಂಸದರ ಸಪ್ರೈಸ್​​ ಎಂಟ್ರಿ!
ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಸಚಿವ ಖಾದರ್​​
ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಸಚಿವ ಖಾದರ್​​
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಬೆಳಗಾವಿಯಲ್ಲಿ ಪರಿಸ್ಥಿತಿ ಹೇಗಿದೆ?
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಬೆಳಗಾವಿಯಲ್ಲಿ ಪರಿಸ್ಥಿತಿ ಹೇಗಿದೆ?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​